ಜನಾರ್ದನ ರೆಡ್ಡಿ ಬಂಟ ಅಲಿಖಾನ್ ಮೊಬೈಲ್‌ಗಾಗಿ ಬಾವಿಯಲ್ಲಿ ಹುಡುಕಾಟ

ಬೆಂಗಳೂರು, ನವೆಂಬರ್ 22: ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧಿಸಿ ಜಾಮೀನಿನ ಮೇಲೆ ಬಿಡಲಾಗಿದೆ.

ಹಾಗೆಯೇ ಅಲಿಖಾನ್ ನನ್ನು 1 ನೇ ಎಸಿಎಂಎಂ ಕೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಿದೆ. ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಸಾಕ್ಷ್ಯ ನಾಶದ ಕಾರಣದಿಂದ ಬಾವಿಗೆ ಎಸೆದಿದ್ದ ಅಲಿಖಾನ್ ಮೊಬೈಲ್‌ನ್ನು ವಶಕ್ಕೆ ಪಡೆಯಲು ಸಿಸಿಬಿ ತನಿಖಾ ತಂಡ ಮುಂದಾಗಿದೆ.

ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಿದ ನಂತರ ಹೊಸದಾಗಿ ಪ್ರಕರಣದ ತನಿಖೆ ಆರಂಭಿಸಿದ ಎಸಿಬಿ ಬಾಲರಾಜ್ ಇದುವರೆಗಿನ ತನಿಖೆಯ ವಿಚಾರಗಳನ್ನು ಇತರೆ ತನಿಖಾ ತಂಡದ ಸಿಬ್ಬಂದಿಗಳಿಂದ ಪಡೆದುಕೊಂಡಿದ್ದಾರೆ.

ಅಲಿಖಾನ್ ಮೊಬೈಲ್‌ ತನಿಖೆಗೆ ಬಹಳ ಮುಖ್ಯ

ಅಲಿಖಾನ್ ಮೊಬೈಲ್‌ ತನಿಖೆಗೆ ಬಹಳ ಮುಖ್ಯ

ಆಂಬಿಡೆಂಟ್ ಚಿಟ್ ಫಂಡ್ ಹಗರಣ ತನಿಖೆಗೆ ಅಲಿಖಾನ್ ಮೊಬೈಲ್ ಸಿಗುವುದು ಅತ್ಯಂತ ಮುಖ್ಯವಾಗಿದೆ.ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದ ವೇಳೆಯಲ್ಲ ಆತನ ತನ್ನ ಮೊಬೈಲ್‌ನ್ನು ಸಹಚರ ಜಯರಾಂ ಕೈಗೆ ಕೊಟ್ಟಿದ್ದ. ಜಯರಾಂ ಮೊಬೈಲ್‌ನ್ನು ನೀರಿಗೆ ಎಸೆದಿದ್ದಾನೆ ಎಂದು ಸಿಸಿಬಿ ಅಧಿಕಾರಿಗಳು ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.

ಜನಾರ್ದನ ರೆಡ್ಡಿಗೆ ಜಾಮೀನು

ಜನಾರ್ದನ ರೆಡ್ಡಿಗೆ ಜಾಮೀನು

ಆಂಬಿಡೆಂಟ್‌ ಪ್ರಕರಣದಲ್ಲಿ ಲಂಚ ಪಡೆದ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಸಿಸಿಬಿಯಿಂದ ಬಂಧಿಸಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ದೊರೆತಿದೆ. ಸಿಸಿಬಿ ಮುಂದೆ ನವೆಂಬರ್ 10 ರಂದು ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿಯು ಭಾನುವಾರ ನವೆಂಬರ್ 11 ರಂದು ಬಂಧಿಸಿತ್ತು. ಒಂದನೇ ಎಸಿಎಂಎಂ ನ್ಯಾಯಾಲಯವು ರೆಡ್ಡಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ರೆಡ್ಡಿ ಅವರ ಜಾಮೀನಿನ ಅರ್ಜಿ ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ರೆಡ್ಡಿ ಅವರ ಮೂರು ದಿನದ ಜೈಲುವಾಸ ಅನುಭವಿಸಿದ್ದರು. ಮಾಲೂರಿನ ರಘುರಾಮ ರೆಡ್ಡಿ ಎಂಬುವರು ರೆಡ್ಡಿ ಅವರಿಗೆ ಶೂರಿಟಿ ನೀಡಿದ್ದರು.

ಅಲಿಖಾನ್ ವಶಕ್ಕೆ

ಅಲಿಖಾನ್ ವಶಕ್ಕೆ

ಒಂದನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿ ಅಲಿಖಾನ್‌ನ್ನು ನ್ಯಾಯಾಲಯಕ್ಕೆ ಒಪ್ಪಿಸಿದೆ. ಜೈಲು ಸೇರಿರುವ ಅಲಿಖಾನ್ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆಯಲು ಗುರುವಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲಿಖಾನ್‌ಗೆ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಮತ್ತು ಪೂರ್ಣಾವಧಿ ನಿರೀಕ್ಷಣಾ ಜಾಮೀನು ನೀಡಬಾರದೆಂದು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು.ಆತನನ್ನು ಗುರುವಾರ ಸಿಸಿಬಿ ಅಧಿಕಾರಿಗಳು ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ.

ಆಂಬಿಡೆಂಟ್ ಹಗರಣ ಮಾಹಿತಿ

ಆಂಬಿಡೆಂಟ್ ಹಗರಣ ಮಾಹಿತಿ

ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಎಂಬ ಈ ಕಂಪನಿಯನ್ನು ಸೈಯದ್ ಅಹಮದ್ ಫರೀದ್ ನಡೆಸುತ್ತಿದ್ದ, ಈತ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇ. 40 ನಿಂದ ಶೇ. 50 ಬಡ್ಡಿ ಹಣವನ್ನು ನೀಡುವುದಾಗಿ ನಂಬಿಸಿ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ. ಈತನಿಂದ ವಂಚನೆಗೊಳಗಾದವರ ಪೈಕಿ ಸರ್ಫರಾಜ್ ಆಲಂ ತಬರೇಜ್ ರವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಮೊ.ಸಂ. 137/2018 ಕಲಂ 420, ಐಪಿಸಿ. ಕಲಂ 4, 5, 6, ಪ್ರೈಜ್ ಚಿಟ್ & ಮನಿ ಸರ್ಕೂಲೇಷನ್ ಸ್ಕೀಮ್ ಬ್ಯಾನಿಂಗ್ ಆಕ್ಟ್ 1978. ಪ್ರಕಾರ 2018ರ ಮೇ ತಿಂಗಳಲ್ಲಿ ಪ್ರಕರಣಗಳು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+