ಕ್ರಿಕೆಟ್ ಬೆಟ್ಟಿಂಗ್‌ ಅಡ್ಡೆ ಮೇಲೆ ಸಿಸಿಬಿ ದಾಳಿ: ಓರ್ವನ ಬಂಧನ

ಬೆಂಗಳೂರು, ಜೂನ್ 8: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಓರ್ವನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದು ಆತನಿಂದ 1,60,000 ರೂ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಗಾಣಿಗರ ಪಾಳ್ಯದ ಜ್ಞಾನಾಕ್ಷಿ ರೆಸಿಡೆನ್ಸಿಯಲ್ಲಿ ಸೂರಜ್ ಎಂಬ ವ್ಯಕ್ತಿಯು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯಾವಳಿ ಸಂಬಂಧಿಸಿದಂತೆ ತಂಡಗಳ ಸೋಲು ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದ.

ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ರೇಶ್ಯೋವನ್ನು ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾನೆ ಎಂದು ಸಿಸಿಬಿ ಅಧಿಕಾರಿಗಳಿಗೆ ದೂರು ಬಂದಿದ್ದ ಕಾರಣ ದಾಳಿ ನಡೆಸಿದ್ದಾರೆ.

CCB raid on cricket betting rocket

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎಸ್ ಗಿರೀಶ್ ಐಪಿಎಸ್, ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಎನ್ ಎಚ್ ರಾಮಚಂದ್ರಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+