ಯುವರಾಜ್ ಮಾದರಿಯಲ್ಲಿ ವಂಚನೆ ಮತ್ತೊಬ್ಬ ನಕಲಿ ವಂಚಕನಿಗಾಗಿ ಸಿಸಿಬಿ ಪೊಲೀಸರ ಶೋಧ
ಬೆಂಗಳೂರು, ಫೆಬ್ರವರಿ 15: ಆರ್‌ಎಸ್ಎಸ್ ನಾಯಕ ಸೋಗಿನಲ್ಲಿ ಪ್ರತಿಷ್ಠಿತರಿಗೆ ಮೋಸ ಮಾಡಿ ಜೈಲು ಸೇರಿರುವ ಯುವರಾಜ್ ಮಾದರಿಯಲ್ಲಿಯೇ ಮತ್ತೊಬ್ಬ ವಂಚಕನ ವಿರುದ್ಧ ಬೆಂಗಳೂರಿನಲ್ಲಿ ಕೇಸು ದಾಖಲಾಗಿದೆ.
ರಾಘವೇಂದ್ರ ಸರ್ವಂ ವಿರುದ್ಧ ಶಂಕರಪುರಂ ಪೊಲೀಸ್ ಠಾಣೆಯಲ್ಲಿದಾಖಲಾಗಿದ್ದ ಕೇಸನ್ನು ಇದೀಗ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಯುವರಾಜ್ ಆರ್‌ಎಸ್ಎಸ್ ಮುಖಂಡನ ಸೋಗಿನಲ್ಲಿ ನಾಮ ಹಾಕಿದರೆ, ರಾಘವೇಂದ್ರ ಸರ್ವಂ ಕಾಂಗ್ರೆಸ್ ಹಾಗೂ ಬಿಜೆಪಿಯ ಮುಖಂಡನ ಹೆಸರಿನಲ್ಲಿ ಸಾಕಷ್ಟು ಮಂದಿಗೆ ಮೋಸ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧಕ್ಷರಿಗೆ ಸುಳ್ಳು ಹೇಳಿ ವಂಚನೆ ಮಾಡಿರುವ ಸಂಬಂಧ ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜು ದೂರು ನೀಡಿದ್ದಾರೆ. ಬೆಂಗಳೂರಿಗೆ ವಿಶ್ವ ಹಿಂದೂ ಪರಿಷತ್ ಸಂಘಟನಾ ಅಧ್ಯಕ್ಷ ಅಲೋಕ್ ಕುಮಾರ್ ಆಗಮಿಸುವ ಬಗ್ಗೆ ಮಾಹಿತಿ ಪಡೆದು ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಗೆ ಕರೆ ಮಾಡಿದ್ದರು.

ತಾನು ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಬೇಕು. ಅಲೋಕ್ ಅವರ ಮೊಬೈಲ್ ನಂಬರ್ ಬೇಕು ಎಂದು ಕೇಳಿದ್ದಾರೆ. ನಂಬರ್ ಕೊಡಲಾಗುವುದಿಲ್ಲ ಎಂದು ಹೇಳಿದ ಬಳಿಕ ನಿಮ್ಮ ರಾಷ್ಟ್ರೀಯ ಅಧ್ಯಕ್ಷರೇ ನನಗೆ ಬರಲು ಹೇಳಿದ್ದಾರೆ. ಏರ್ ಪೋರ್ಟ್ ನಲ್ಲಿ ಒಂದು ಪುಸ್ರಕ ಬಿಡುಗಡೆ ಕಾರ್ಯಕ್ರಮವಿದೆ. ಅದು ಮುಗಿದ ನಂತರ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿಸಬೇಕು ಎಂದು ನಂಬಿಸಿದ್ದ.

ವಿಎಚ್ ಪಿ ರಾಷ್ಟ್ರಿಯ ಮುಖಂಡರನ್ನು ಭೇಟಿ ಮಾಡಿದ್ದ ರಾಘವೇಂದ್ರ ತಾನು ಕೇಂದ್ರ ಸರ್ಕಾರದ ಹಿಂದು ಸಲಹೆಗಾರ ಸಮಿತಿ ಸದಸ್ಯ ಎಂದು ಹೇಳಿಕೊಂಡಿದ್ದ. ಕೇಂದ್ರ ಸರ್ಕಾರ ಹಾಗೂ ವಿಎಚ್ ಪಿ ಸಲಹೆಗಾರ ಸಮಿತಿ ಹೆಸರು ಬಳಿಸಿದ್ದ. ಈ ವಿಚಾರ ಬಸವರಾಜು ಪ್ರಸ್ತಾಪ ಮಾಡಿದ್ದಕ್ಕೆ, ಐವತ್ತಕ್ಕಿಂತಲೂ ಹೆಚ್ಚು ಸಲ ಕರೆ ಮಾಡಿ ಬೆದರಿಕೆ ಹಾಕಿದ್ದ. ತಾನು ಫ್ರಭಾವಿ ವ್ಯಕ್ತಿ, ತನ್ನ ವಿರುದ್ಧ ಮಾತಾದ್ರೆ ಚೆನ್ನಾಗಿರ ಇರಲ್ಲ ಎಂದು ಬಸವರಾಜು ಅವರಿಗೆ ಬೆದರಿಕೆ ಹಾಕಿರುವುದು ದೂರಿನಿಂದ ಹೊರ ಬಂದಿದೆ. ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ರಾಘವೇಂದ್ರ ಸರ್ವಂ, ರಾಷ್ಟ್ರೀಯ ಪ್ರಭಾವಿ ನಾಯಕರ ಹೆಸರು ಬಳಿಸಿ ವಂಚನೆ ಮಾಡಿರುವ ಬಗ್ಗೆ ದೂರುಗಳು ಬಂದಿವೆ.

Recommended Video
ಸರ್ಕಾರಿ ಕೆಲಸ, ಪೋಸ್ಟಿಂಗ್ಮ ಟ್ರಾನ್ಸ್ ಫರ್ ಮಾಡಿಸುವ ಹೆಸರಿನಲ್ಲಿ ಹಲವರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಹಲವಾರು ಬಿಲ್ಡರ್ ಗಳಿಗೆ ಜಮೀನು ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಸಿಸಿಬಿ ಪೊಲೀಸರು ರಾಘವೇಂದ್ರ ಸರ್ವಂಗಾಗಿ ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications