ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಮೇಯರ್‌ ಸಂಪತ್‌ ರಾಜ್‌ಗೆ ಸಿಸಿಬಿ ನೋಟಿಸ್

|
Google Oneindia Kannada News

ಬೆಂಗಳೂರು, ನವೆಂಬರ್ 02 : ಸಿಸಿಬಿ ಪೊಲೀಸರು ಬೆಂಗಳೂರು ನಗರದ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಸಂಪತ್‌ ರಾಜ್‌ಗೆ ನೋಟಿಸ್ ನೀಡಿದ್ದಾರೆ. ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಆರೋಪಿ. ಆಸ್ಪತ್ರೆಯಿಂದ ಪರಾಗಿಯಾಗಿರುವ ಅವರಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಡಿಜೆ ಹಳ್ಳಿ ಗಲಭೆ: ನಾಪತ್ತೆಯಾದ ಸಂಪತ್ ರಾಜ್ ಪತ್ತೆಗೆ ವಿಶೇಷ ತಂಡ ರಚನೆಡಿಜೆ ಹಳ್ಳಿ ಗಲಭೆ: ನಾಪತ್ತೆಯಾದ ಸಂಪತ್ ರಾಜ್ ಪತ್ತೆಗೆ ವಿಶೇಷ ತಂಡ ರಚನೆ

ಪುಲಿಕೇಶಿ ನಗರದಲ್ಲಿರುವ ಸಂಪತ್ ರಾಜ್ ಅವರ ಎರಡು ಮನೆಗಳಿಗೆ ಬೀಗ ಹಾಕಲಾಗಿದೆ. ಭಾನುವಾರ ಪೊಲೀಸರು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದಾರೆ. ಮತ್ತೊಂದು ಕಡೆ ಸಿಸಿಬಿ ವಿಶೇಷ ತಂಡಗಳು ಹೊರ ರಾಜ್ಯದಲ್ಲಿ ಅವರಿಗಾಗಿ ಹುಡುಕಾಟ ನಡೆಸುತ್ತಿವೆ.

ಮಾಜಿ ಮೇಯರ್ ಸಂಪತ್ ರಾಜ್ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಕೆಶಿ! ಮಾಜಿ ಮೇಯರ್ ಸಂಪತ್ ರಾಜ್ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಕೆಶಿ!

ಈ ನೋಟಿಸ್ ನೋಡಿದ ಕೂಡಲೇ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ಎಸಿಪಿ ಬಿ. ಆರ್. ವೇಣುಗೋಪಾಲ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಸಂಪತ್ ರಾಜ್ ಮೊಬೈಲ್ ಸಹ ಸ್ವಿಚ್‌ ಆಫ್‌ ಆಗಿದೆ.

ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿ! ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿ!

ಕ್ರಮ ಕೈಗೊಳ್ಳುವ ಎಚ್ಚರಿಕೆ

ಕ್ರಮ ಕೈಗೊಳ್ಳುವ ಎಚ್ಚರಿಕೆ

ನೋಟಿಸ್ ನೋಡಿದ ಕೂಡಲೇ ಸಿಸಿಬಿ ಕಚೇರಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ವಿಚಾರಣೆಗೆ ಸಹಕಾರ ನೀಡುವುದಿಲ್ಲ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಸಿಬಿ ಭಯೋತ್ಪದನಾ ನಿಗ್ರಹ ದಳದ ಎಸಿಪಿ ಬಿ. ಆರ್. ವೇಣುಗೋಪಾಲ್ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಒಂದು ಬಾರಿ ವಿಚಾರಣೆ ಎದುರಿಸಿದ್ದಾರೆ

ಒಂದು ಬಾರಿ ವಿಚಾರಣೆ ಎದುರಿಸಿದ್ದಾರೆ

ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಆರೋಪಿ. ಒಂದು ಬಾರಿ ಅವರು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರು 2ನೇ ನೋಟಿಸ್ ನೀಡಿದ್ದರು. ಆಗ ಕೋವಿಡ್ ಬಂದಿದೆ ಎಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಮಾಹಿತಿ ನೀಡದೆ ಡಿಸ್ಚಾರ್ಜ್

ಮಾಹಿತಿ ನೀಡದೆ ಡಿಸ್ಚಾರ್ಜ್

ಸಂಪತ್ ರಾಜ್ ಕೋವಿಡ್ ಸೋಂಕಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಡಿಸ್ಚಾರ್ಜ್ ಮಾಡುವ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ, ಗುರುವಾರ ಅವರು ಡಿಸ್ಚಾರ್ಜ್ ಆಗಿದ್ದು, ಬಳಿಕ ನಾಪತ್ತೆಯಾಗಿದ್ದಾರೆ.

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada
ಸುಳ್ಳು ಸುದ್ದಿಗಳನ್ನು ಕೊಡುತ್ತಿದ್ದಾರೆ

ಸುಳ್ಳು ಸುದ್ದಿಗಳನ್ನು ಕೊಡುತ್ತಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಂಪತ್ ರಾಜ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸಂಪತ್ ರಾಜ್ ಎಲ್ಲೂ ಹೋಗಿಲ್ಲ, ವೈದ್ಯರ ಸಲಹೆ ಮೇರೆಗೆ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್. ಆರ್. ನಗರದಲ್ಲಿ ಚುನಾವಣೆ ಇದೆ. ಹಾಗಾಗಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಮಾಧ್ಯಮಗಳಿಗೆ, ಪತ್ರಿಕೆಗಳಿಗೆ ಸುಳ್ಳು ಸುದ್ದಿಗಳನ್ನು ಕೊಡುತ್ತಿದ್ದಾರೆ" ಎಂದು ಆರೋಪಿಸಿದರು.

English summary
CCB police issued notice to Bengaluru former mayor and Congress leader R.Sampath Raj. Sampath Raj absconding after discharged from hospital. He is accused in the mob violence case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X