ಆಂಬಿಡೆಂಡ್ ಕಂಪನಿ ಹಗರಣದ ಆರೋಪಿಗಳ ವಿರುದ್ಧ ಫ್ರೆಶ್‌ ಕೇಸ್

ಬೆಂಗಳೂರು, ಡಿಸೆಂಬರ್ 14 : ಆಂಬಿಡೆಂಟ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಫ್ರೆಶ್ ಕೇಸುಗಳು ದಾಖಲಾಗಿವೆ. ಆಂಬಿಡೆಂಟ್ ಮಾಲೀಕ ಸೇರಿದಂತೆ ಹಣಪಡೆದವರೆಲ್ಲರಿಂದ ಹಣ ವಾಪಸ್ ಪಡೆದು ಹೂಡಿಕೆದಾರರಿಗೆ ಹಿಂದಿರುಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಪಿಐಡಿ ಕಾಯ್ದೆಯಡಿ ಹೊಸ ಪ್ರಕರಣ ದಾಖಲಾಗಿದೆ.

ಆಂಬಿಡೆಂಟ್ 950 ಕೋಟಿಯಷ್ಟು ವಂಚನೆ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಕಂಪನಿ ಮಾಲೀಕ ಫರೀದ್‌ನಿಂದ ಈ ಹಣವನ್ನು ಹಲವಾರು ಮಂದಿ ನಾನಾ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಈ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡುವುಸು ಅನಿವಾರ್ಯವಾಗಲಿದೆ.

ಆಂಬಿಡೆಂಟ್ ಪ್ರಕರಣದ ತನಿಖೆ ಬಿಗಿಯಾದಷ್ಟು ಅಧಿಕಾರಿಗಳ ಮೇಲೆ ಆರೋಪ ಹೊರಿಡುವ ಸರಣಿ ಮುಂದುವರೆದಿದೆ. ಆರಂಭದಲ್ಲಿ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವಿರುದ್ಧ ಆರೋಪಿ ವಿಜಯ್ ಟಾಟಾ ಎಂಬಾತ ಆರೋಪ ಮಾಡಿದ್ದ. ತನಿಖಾಧಿಕಾರಿ ಬದಲಾದರು ಈಗ ಅಲೋಕ್ ಕುಮಾರ್ ವಿರುದ್ಧವೇ ಆರೋಪ ಮಾಡಿ ದೂರು ನೀಡಲಾಗಿದೆ.

CCB files Fresh case against Ambident fraud case accused under KPID Act

ಈಗಾಗಲೇ ಆಂಬಿಡೆಂಟ್‌ನಿಂದ ಹಣ ಪಡೆದ ಹಲವರಿಗೆ ಹಣ ವಾಪಸ್ ಕೊಡಲು ಸೂಚನೆ ನೀಡಲಾಗಿದೆ. ನೋಟಿಸ್ ಪಡೆದವರು ಹಣ ಹೊಂದಿರುಗಿಸದೆ ನಾಟಕವಾಡುತ್ತಿದ್ದಾರೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+