ಲಕ್ಷ್ಮಣನ ಹತ್ಯೆ ಸುಪಾರಿ ಪಡೆದಿದ್ದ ಕ್ಯಾಟ್ ರಾಜನಿಗೆ ವರ್ಷಿಣಿಯಿಂದ ಸಿಕ್ಕಿದ್ದೇನು?

ಬೆಂಗಳೂರು, ಮಾರ್ಚ್ 14: ಲಕ್ಷ್ಮಣ್ ಕೊಲೆಗೆ ಸಹಕರಿಸಿದ್ದ ಸುಪಾರಿ ಹಂತಕ ಕ್ಯಾಟ್ ರಾಜನಿಗೆ ವರ್ಷಿಣಿ ಪ್ರಿಯಕರನಿಂದ ಸಿಕ್ಕಿದ್ದು ಕೇವಲ 15 ಸಾವಿರ ಮೌಲ್ಯದ ಇಂಡಿಕಾ ಕಾರು ಎಂಬ ಸಂಗತಿ ಬಹಿರಂಗಗೊಂಡಿದೆ.

ತನ್ನ ಶತ್ರುವಿನ ಹತ್ಯೆಗೆ ನೆರವು ನೀಡಿದರೆ ಕಾರು ಕೊಡಿಸುವುದಾಗಿ ಕ್ಯಾಟ್ ರಾಜನಿಗೆ ವರ್ಷಿಣಿ ಪ್ರಿಯಕರ ರೂಪೇಶ್ ಹೇಳಿದ್ದ. ಈ ಪ್ರಸ್ತಾಪಕ್ಕೆ ಸಮ್ಮತಿಸಿ ಕೊಲೆಯಲ್ಲಿ ಕ್ಯಾಟ್ ರಾಜಾ ಕೈ ಜೋಡಿಸಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ನನಗರ ಜೀವ ಬೆದರಿಕೆ ಹಾಕಿ ಲೈಂಗಿಕವಾಗಿ ಲಕ್ಷ್ಮಣ್ ಶೋಷಣೆ ಮಾಡುತ್ತಿದ್ದ, ಇದರಿಂದಲೇ ಕೋಪಗೊಂಡು ಆತನ ಕೊಲೆಗೆ ನಿರ್ಧರಿಸಿದ್ದೆ ಎಂದು ವಿಚಾರಣೆ ವೇಳೆ ವರ್ಷಿಣಿ ಹೇಳಿಕೆ ನೀಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ ಆದರೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನುವುದನ್ನು ಸಿಸಿಬಿ ಪೊಲೀಸರು ನಿರಾಕರಿಸಿದ್ದಾರೆ.

cat raja got indica car for murdering rowdy lakshmana

ಮೊದಲಿನಿಂದಲೂ ಲಕ್ಷ್ಮಣ್ ಮತ್ತು ವರ್ಷಿಣಿ ನಡುವೆ ಆತ್ಮೀಯ ಒಡನಾಟವಿತ್ತು ಎಂಬುದಕ್ಕೆ ಮೊಬೈಲ್ ಸಂಭಾಷಣೆಗಳ ಪುರಾವೆಗಳಿವೆ ಇವುಗಳಲ್ಲಿ ಲೈಂಗಿಕ ಕಿರುಕುಳ ಪ್ರಸ್ತಾಪವಿಲ್ಲ ಎಂದಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಲಕ್ಷ್ಮಣ್ ಪತ್ನಿ ಚೈತ್ರಾ, ಸೋದರ ರೌಡಿ ರಾಮನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಸ್ಕಾನ್ ದೇವಸ್ಥಾನ ಬಳಿ ರೌಡಿ ಶೀಟರ್ ಲಕ್ಷ್ಮಣನ ಕೊಲೆಯಾಗಿತ್ತು. ಹಾಡ ಹಗಲೇ ರಸ್ತೆಯಲ್ಲೇ ಆತನನ್ನು ಕೊಲೆ ಮಾಡಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದ. ಲಕ್ಷ್ಮಣ ಇಸ್ಕಾನ್ ಬಳಿ ಇರುವ ಹೋಟೆಲ್ ಗೆ ಬರುವುದು ಮುಂಚಿತವಾಗಿಯೇ ದುಷ್ಕರ್ಮಿಗಳಿಗೆ ತಿಳಿಸಿದೆ.

ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಲಕ್ಷ್ಮಣನನ್ನು ಕೊಲೆ ಮಾಡಿದ್ದರು. ಲಕ್ಷ್ಮಣ ಮೃತ ದೇಹದ ಬಳಿ ಆತ ಬುಕ್ ಮಾಡಿದ್ದ ಹೋಟೆಲ್‌ ರೂಮಿನ ಕೀ ಕೂಡ ದೊರೆತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+