S.S. Mallikarjun: ಜಾತಿ ನಿಂದನೆ: ಉಪೇಂದ್ರ ಆಯ್ತು ಈಗ ಈ ಸಚಿವರ ವಿರುದ್ಧ ದೂರು
ಬೆಂಗಳೂರು, ಆಗಸ್ಟ್ 15: ದಲಿತರ ಜಾತಿ ನಿಂದನೆ ಆರೋಪದಲ್ಲಿ ಮೊನ್ನೆಯಷ್ಟೇ ನಟ, ನಿರ್ದೇಶಕ ಮತ್ತು ಪ್ರಜಾಕೀಯ ಪಕ್ಷದ ಸಂಸ್ಥಾಪಕ ವಿರುದ್ಧ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೆ ಕಾಂಗ್ರೆಸ್ ಸಚಿವರೊಬ್ಬರು ಮತ್ತದೇ 'ಪದ' ಬಳಕೆ ಮಾಡಿ ಜಾತಿ ನಿಂದಿಸಿದ್ದಾರೆ ಎಂದು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಟ ಉಪೇಂದ್ರ ಅವರು ಪ್ರಜಾಕೀಯ ಕುರಿತು ಲೈವ್‌ನಲ್ಲಿ ಮಾತನಾಡುವಾಗ 'ಊರು ಅಂದ ಮೇಲೆ ಹೊಲಗೇರಿ' ಇದ್ದೆ ಇರುತ್ತದೆ ಎಂದು ಹೇಳಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅವರ ಬೆನ್ನಲ್ಲೆ ಕಾಂಗ್ರೆಸ್‌ನ ಹಾಲಿ ತೋಟಗಾರಿಕೆ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

ಸದ್ಯ ಈ ವಿಚಾರ ಕುರಿತು ಧ್ವನಿ ಎತ್ತಿರುವ ನಟ ಉಪೇಂದ್ರ ಬೆಂಬಲಿಗರು ಮತ್ತು 'ಪ್ರಜಾಕೀಯ' ಕಾರ್ಯಕರ್ತರು, ನಿಮಗೆ ತಾಕತ್ತು ಇದ್ದರೆ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.
ಸಚಿವರಿಂದ ಆಕ್ಷೇಪಾರ್ಹ ಹೇಳಿಕೆ: ಸ್ಪಷ್ಟನೆ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕರು, ಈಗ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರು ಮೂರು ತಿಂಗಳ ಹಿಂದೆ ಸಚಿವರನ್ನು ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಸಂದರ್ಶನ ನಡೆಸಿದ್ದರು. ಈ ವೇಳೆ ಕಾಮಗಾರಿ ವಿಚಾರವಾಗಿ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಊರನ್ನು ಹೊಲಗೇರಿ ಮಾಡಬೇಡಿ ಎಂದು ಬೈದಿದ್ದೆ ಎಂದು ಸಚಿವರು ಹೇಳಿದ್ದರು.

ಈ ಹಳೇ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗಿತ್ತು. ಇದೀಗ ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತ್ತ ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ನಾನು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಸಚಿವರ ವಿರುದ್ಧ ರಾಜಾಜಿನಗರ ಪೊಲೀಸ್ NCR ದಾಖಲಿಸಿಕೊಂಡಿದ್ದಾರೆ.
ವಿವಿಧ ಠಾಣೆಗಳಲ್ಲಿ ಉಪೇಂದ್ರ ವಿರುದ್ಧ ದೂರು: ಹೈ ತಡೆ
ನಟ ಉಪೇಂದ್ರ ಅವರು ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಂತೆ ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಈ ಸಂಬಂಧ ಹೇಳಿಕೆ ನೀಡುವಂತೆ ಪೊಲೀಸರು ಕೇಳಿಕೊಂಡರು ಸಹಿತ ಉಪೇಂದ್ರ ಅವರಿಂದ ಉತ್ತರ ಬರಲಿಲ್ಲ. ಅವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು, ಎರಡು ದಿನ ಯಾರ ಕೈಗೂ ಸಿಕ್ಕಿರಲಿಲ್ಲ. ಚೆನ್ನಮ್ಮನ ಅಚ್ಚುಕಟ್ಟು ಪೊಲೀಸರು ಅವರ ನಿವಾಸಕ್ಕೆ ತೆರಳಿದ್ದರು ಅವರ ಸುಳಿವು ಸಿಕ್ಕಿರಲಿಲ್ಲ.
ಇದೇ ವೇಳೆ ಪ್ರಕರಣ ಸಂಬಂಧ ಅಟ್ರಾಸಿಟಿ ಕಾಯ್ದೆಯಡಿ ಉಪೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಹೈಕೋರ್ಟ್ ತಡೆ ನೀಡಿತು. ಒಂದು ಪದ ಬಳಕೆಗೆ ಇಷ್ಟೊಂದು ಎಫ್‌ಐಆರ್? ಎಂದು ಪ್ರಶ್ನಿಸಿದರು. ಬಳಿಕ ವಕೀಲರ ವಾದ ಆಲಿಸಿದ ನ್ಯಾಯಪೀಠ ತಡೆಯಾಜ್ಞೆ ನೀಡಿತು.












Click it and Unblock the Notifications