ಸಬರ್ಬನ್ ನಿಲ್ದಾಣವಾಗಿ ಕಂಟೋನ್ಮೆಂಟ್, ಹೆಜ್ಜಾಲ ರೈಲ್ವೆ ನಿಲ್ದಾಣ ಪರಿವರ್ತನೆ

ಬೆಂಗಳೂರು, ಮೇ 22: ಬೆಂಗಳೂರು ಉಪನಗರ ರೈಲು ಯೋಜನೆ ಇನ್ನೂ ಕನಸಾಗಿಯೇ ಉಳಿದಿದೆ. ಕಂಟೋನ್ಮೆಂಟ್ ಹಾಗೂ ಹೆಜ್ಜಾಲ ರೈಲ್ವೆ ನಿಲ್ದಾಣವನ್ನು ಉಪನಗರ ರೈಲು ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತಿದೆ.

ಈ ಎರಡು ರೈಲು ನಿಲ್ದಾಣಗಳು ಪರಿರ್ವತನೆಗೊಂಡ ಬಳಿಕ ಹೆಚ್ಚುವರಿ ರೈಲು ಸೇವೆಯನ್ನು ನೀಡಲು ಸಹಾಯಕವಾಗಲಿದೆ. ಈಗಾಗಲೇ ರೈಲ್ವೆ ಮಂಡಳಿಯು 37.9 ಕೋಟಿ ರೂವನ್ನು 2018-19ನೇ ಸಾಲಿನಲ್ಲೇ ಬಿಡುಗಡೆ ಮಾಡಿದೆ. ನಾಲ್ಕು ಹೆಚ್ಚುವರಿ ಪ್ಲಾಟ್‌ಫಾರ್ಮ್‌ ಗಳನ್ನು ನಿರ್ಮಿಸಲಾಗುತ್ತಿದೆ. ಈ ಹೆಚ್ಚುವರಿ ಪ್ಲಾಟ್‌ಫಾರಂಗಳು ಹೊಸೂರು, ಚಿಕ್ಕಬಳ್ಳಾಪುರ, ಹಿಂದುಪುರ, ದೇವನಹಳ್ಳಿಗೆ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ.

ಹೆಜ್ಜಾಲದಲ್ಲಿ 1200 ಕೋಟಿ ವೆಚ್ಚದಲ್ಲಿ ಕೋಚ್ ಮೇಂಟೆನೆನ್ಸ್ ಯಾರ್ಡ್ ನಿರ್ಮಾಣ ಮಾಡಲಾಗುತ್ತದೆ. ಒಟ್ಟು 500 ಎಕರೆ ಪ್ರದೇಶವನ್ನು ದತ್ತು ತೆಗೆದುಕೊಳ್ಳಲಾಗಿದೆ.ಅಲ್ಲಿ ಮೆಂಟೆನೆನ್ಸ್ ಯಾರ್ಡ್ ನಿರ್ಮಾಣ ಮಾಡಲಾಗುತ್ತದೆ.

Cantonment and Hejjala projects convert into suburban railway stations

ಅದರಲ್ಲಿ 12 ಪಿಟ್ ಲೈನ್, 12 ಮೆಂಟೆನೆನ್ಸ್ ಪಿಟ್ಸ್ ನಿರ್ಮಾಣವಾಗಲಿದೆ. ರೈಲ್ವೆ ಮಂಡಳಿಯಿಂದ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು 2014ರಲ್ಲೇ ಪರಿವರ್ತಿಸಲು ಯೋಜನೆ ರೂಪಿಸಲಾಗತ್ತು. ಇದರಿಂದ ರಾಮನಗರಕ್ಕೆ ತೆರಳುವ ರೈಲು ಹೊರತುಪಡಿಸಿ ಉಳಿದೆಲ್ಲ ರೈಲುಗಳು ನಿಲುಗಡೆಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+