ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರು: ಕೆಡೆಟ್ ಟ್ರೈನಿ ಶವ ಪತ್ತೆ, 6 ಅಧಿಕಾರಿಗಳ ವಿರುದ್ಧ ಕೊಲೆ ಆರೋಪ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 25: ಬೆಂಗಳೂರಿನಲ್ಲಿ 27 ವರ್ಷದ ಕೆಡೆಟ್ ಟ್ರೈನಿ ಒಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರು ವಾಯುಪಡೆ ಅಧಿಕಾರಿಗಳ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ.

ನಗರದ ಜಾಲಹಳ್ಳಿಯ ಏರ್‌ರ್ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (ಎಎಫ್‌ಟಿಸಿ) ಶನಿವಾರ ಅಂಕಿತ್ ಕುಮಾರ್ ಝಾ (27) ಎಂಬುವವರ ಮೃತದೇಹ ಪತ್ತೆಯಾಗಿದೆ. ಮೃತ ಟ್ರೈನಿ ವಿರುದ್ಧ ವಿರುದ್ಧ ನ್ಯಾಯಾಲಯವು ವಿಚಾರಣೆಗೆ ಆದೇಶಿಸಿತ್ತು. ಇದಾದಿ ನಂತರ ಕೆಡೆಟ್ ಟ್ರೈನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಲಹಳ್ಳಿ ಅಯ್ಯಪ್ಪಸ್ವಾಮಿ ದೇವಾಲಯ ಗರ್ಭದಗುಡಿ ಗೋಪುರಕ್ಕೆ ಚಿನ್ನದ ಲೇಪನ..! ಜಾಲಹಳ್ಳಿ ಅಯ್ಯಪ್ಪಸ್ವಾಮಿ ದೇವಾಲಯ ಗರ್ಭದಗುಡಿ ಗೋಪುರಕ್ಕೆ ಚಿನ್ನದ ಲೇಪನ..!

ಪೊಲೀಸ್ ಅಧಿಕಾರಿಗಳ ಪ್ರಕಾರ, ಕೆಡೆಟ್ ಟ್ರೈನಿ ಅಂಕಿತ್ ಕುಮಾರ್ ಝಾ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಆತ್ಮಹತ್ಯೆ ಪತ್ರದಲ್ಲಿ ಮೃತರು ಏರ್ ಕಮೋಡೋರ್, ವಿಂಗ್ ಕಮಾಂಡರ್ ಹಾಗು ಗ್ರೂಪ್ ಕ್ಯಾಪ್ಟನ್ ಹುದ್ದೆಗಳನ್ನು ಹೊಂದಿರುವ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಇದರ ಆಧಾರದಲ್ಲಿ ಆರು ಅಧಿಕಾರಿಗಳ ಕೊಲೆ ಆರೋಪ ಎದುರಿಸುತ್ತಿದ್ದಾರೆ ಎಂದು ತಿಳಿದ ಬಂದಿದೆ.

Cadet Trainees Body Found in Bengaluru, 6 Officers Accused of Murder

ಅಂಕಿತ್ ಕುಮಾರ್, ಕಾಲೇಜಿನಲ್ಲಿ ನಿರಂತರ ಕಿರುಕುಳ, ಚಿತ್ರಹಿಂಸೆ ಎದುರಿಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತನಿಖಾಧಿಕಾರಿಗಳಿಗೆ ಲಭ್ಯವಾದ ಮಾಹಿತಿ ಪ್ರಕಾರ ಮೃತ ಅಂಕಿತ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಆರಂಭಿಸಿದ ನಂತರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು ಎನ್ನಲಾಗಿದೆ.

Cadet Trainees Body Found in Bengaluru, 6 Officers Accused of Murder

ಕೊಲೆ ಆರೋಪ ಎದುರಿಸುತ್ತಿರುವ ಆರೋಪಿಗಳು ತಲೆಮರೆಸಿಕೊಂಡಿಲ್ಲ. ಮೃತರ ಸಹೋದರ ಈ ಸಂಬಂಧ ದೂರು ದಾಖಲಿಸಿದ್ದಾರೆ.ನಾವು ಕುಟುಂಬ ಸದಸ್ಯರು ಮಾಡಿದ ಹಕ್ಕುಗಳು ಮತ್ತು ಆರೋಪಗಳ ವಿರುದ್ಧ ಸಾಕ್ಷ್ಯವನ್ನು ಸಂಗ್ರಹ ಕೆಲಸ ನಡೆಯುತ್ತಿದೆ. ಆತ್ಮಹತ್ಯೆ ಟಿಪ್ಪಣಿ ಬರೆಯಲಾಗಿದೆ. ಅಲ್ಲದೇ ಮೃತ ವ್ಯಕ್ತಿ ವಿರುದ್ಧ ನ್ಯಾಯಾಲಯ ಶಿಸ್ತು ಕ್ರಮಕ್ಕೆ ಆದೇಶ ನೀಡಿತ್ತು. ಮುಖ್ಯವಾಗಿ ಅದೇ ದಿನ ಅಂಕಿತ್ ಕುಮಾರ್ ಅವರನ್ನು ತರಬೇತಿಯಿಂದ ಬಿಡುಗಡೆಗೊಳಿಸಲಾಗಿತ್ತು. ಇವೆಲ್ಲ ಆದ ನಂತರ ಕ್ಯಾಂಪಸ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Cadet trainee body found in Air force Technical College (AFTC) Jalahalli at Bengaluru on Saturday. 6 Air force officers accused of murder in This Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X