India
 • search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯೇಂದ್ರ ವಿರುದ್ಧEDಗೆ ಟಿ. ಜೆ. ಅಬ್ರಹಾಂ ಕೊಟ್ಟಿರುವ ದೂರಿನಲ್ಲಿ ಏನಿದೆ?

|
Google Oneindia Kannada News

ಬೆಂಗಳೂರು, ಜೂ. 11: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸುಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ "ED Inquiry" ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿಜಯೇಂದ್ರ ಇಡಿ ವಿಚಾರಣೆ ಎದುರಿಸಲು ದೆಹಲಿಗೆ ಹೋಗಿದ್ದರು ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ದೊಡ್ಡ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇಡಿ ವಿಚಾರಣೆಯಲ್ಲಿ ನನ್ನದು ತಪ್ಪು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಿಜಯೇಂದ್ರ ಕೇಂದ್ರ ವರಿಷ್ಠರಿಗೆ ಪರೋಕ್ಷ ಸಂದೇಶ ರವಾನೆ ಮಾಡಿರುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಇದೀಗ ಶುರುವಾಗಿದೆ.

ಇನ್ನು ಬಿ.ವೈ. ವಿಜಯೇಂದ್ರ ಅವರ ವಿರುದ್ಧ ದೆಹಲಿಯ ಇಡಿ ಕಚೇರಿಗೆ ನೀಡಿರುವ ದೂರಿನಲ್ಲಿ ಯಾವ ಅಂಶಗಳು ಇವೆ. ನಿಜವಾಗಿಯೂ ವಿಜಯೇಂದ್ರ ಇಡಿ ಕೇಸ್ ನಲ್ಲಿ ಲಾಕ್ ಆಗುತ್ತಾರಾ ಎಂಬ ಪ್ರಶ್ನೆಗಳು ಮೂಡಿರುವುದು ನಿಜ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವಿರುದ್ಧ ದೆಹಲಿ ಇಡಿ ಕಚೇರಿಗೆ ಸಲ್ಲಿಸಿರುವ ದೂರಿನ ಸತ್ಯಾಂಶಗಳನ್ನು ಒನ್ಇಂಡಿಯಾ ಕನ್ನಡ ವಿವರವಾಗಿ ಇಲ್ಲಿ ನೀಡಿದೆ.

ದೂರುದಾರರು ಯಾರು

ದೂರುದಾರರು ಯಾರು

ಬಿ.ವೈ. ವಿಜಯೇಂದ್ರ ಅವರ ವಿರುದ್ಧ ದೆಹಲಿಯ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ನೀಡಿರುವುದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ. 2012 ರಲ್ಲಿ ಭ್ರಷ್ಟಚಾರ ವಿರುದ್ಧ ಖಾಸಗಿ ದೂರುಗಳನ್ನು ಸಲ್ಲಿಸುವ ಮೂಲಕ ರಾಜಕಾರಣಿಗಳ ನಿದ್ದೆ ಗೆಡಿಸಿದ ಹೋರಾಟಗಾರರಲ್ಲಿ ಟಿ.ಜೆ. ಅಬ್ರಹಾಂ ಕೂಡ ಪ್ರಮುಖರು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕರ ವಿರುದ್ಧ ಟಿ.ಜೆ. ಅಬ್ರಹಾಂ ದೂರು ಸಲ್ಲಿಸಿ ಕಾನೂನು ಸಮರ ಸಾರಿದ್ದರು.


ನೈಸ್ ಅಶೋಕ್ ಖೇಣಿಯ ವಿರುದ್ದ ಸುಪ್ರೀಂಕೋರ್ಟ್ ವರೆಗೋ ಹೋಗಿದ್ದರು. ಬಿಡಿಎ ಅನೇಕ ಡಿ ನೋಟಿಫಿಕೇಷನ್ ಪ್ರಕರಣಗಳನ್ನು ಬಯಲಿಗೆ ತಂದಿದ್ದರು. ಎಸಿಬಿ ದಾಳಿಗೆ ಒಳಗಾದ ಬಿಡಿಎ ಅಧಿಕಾರಿ ಡಾ. ಸುಧಾ ಅವರ ವಿರುದ್ಧ ದೂರು ಸಲ್ಲಿಸಿದ್ದವರೂ ಇದೇ ಅಬ್ರಹಾಂ. ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರ ವಿರುದ್ಧ 2020 ನವೆಂಬರ್‌ನಲ್ಲಿಯೇ ಜಾರಿ ನಿರ್ದೇಶನಾಲಯಕ್ಕೆ ಅಬ್ರಹಾಂ ದೂರು ಸಲ್ಲಿಸಿದ್ದರು.

ದೂರು ಯಾರ ವಿರುದ್ಧ

ದೂರು ಯಾರ ವಿರುದ್ಧ

2020 ನವೆಂಬರ್‌ನಲ್ಲಿ ಟಿ.ಜೆ ಅಬ್ರಹಾಂ ಅವರು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಹದಿನೆಂಟು ಪುಟಗಳ ದೂರು ಸಲ್ಲಿಸಿದ್ದಾರೆ. ಅದರಲ್ಲಿ ಆರೋಪಿಗಳು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊದಲನೇ ಆರೋಪಿ. ಬಿ.ವೈ. ವಿಜಯೇಂದ್ರ ಎರಡನೇ ಆರೋಪಿ. ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ, ವಿರುಪಾಕ್ಷಪ್ಪ ಯಮಕನಮರಡಿ ಅವರ ಅಳಿಯ ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ವಿರುಪಾಕ್ಷಪ್ಪ ಯಮಕನಮಾರಡಿ ವಿರುದ್ಧ ದೂರು ಸಲ್ಲಿಕೆಯಾಗಿದೆ. ಬೇನಾಮಿ ವಹಿವಾಟಿನ ಕುರಿತು ಸಾಕ್ಷ್ಯಾಧಾರ ಆಧರಿಸಿ ದೂರು ನೀಡಿದ್ದಾರೆ.

ಏನಿದು ದೂರಿನ ಸಾರಾಂಶ

ಏನಿದು ದೂರಿನ ಸಾರಾಂಶ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕುಟುಂಬದ ಸದಸ್ಯರು ಭ್ರಷ್ಟಾಚಾರದ ಮೂಲಕ ಪಡೆದಿರುವ ಕೋಟ್ಯಂತರ ರೂಪಾಯಿ ಹಣ ವಹಿವಾಟು ನಡೆದಿದೆ. ಕೋಲ್ಕತಾ ಮೂಲದ ಶೆಲ್ ಕಂಪನಿ ಹಾಗೂ ಯಡಿಯೂರಪ್ಪ ಕುಟುಂಬ ಒಡೆತನಕ್ಕೆ ಸೇರಿದ ಹಲವು ಕಂಪನಿ ನಡುವೆ ಹಣಕಾಸಿನ ವಹಿವಾಟು ನಡೆದಿದ್ದು, ಇದೆಲ್ಲವೂ ಕಾನೂನು ಬಾಹಿರ ಬೇನಾಮಿ ವ್ಯವಹಾರ ನಡೆಸಿ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೇನಾಮಿ ವಹಿವಾಟು ನಿಯಂತ್ರಣ ಕಾಯ್ದೆ ಅಡಿ ಕೇಸುದ ದಾಖಲಿಸಿಕೊಳ್ಳಲು ದೂರಿನಲ್ಲಿ ಕೋರಲಾಗಿದೆ.

ರಾಮಲಿಂಗಂ ಕಂಪನಿ ಜತೆ 12 ಕೋಟಿ ರೂ. ವ್ಯವಹಾರ

ರಾಮಲಿಂಗಂ ಕಂಪನಿ ಜತೆ 12 ಕೋಟಿ ರೂ. ವ್ಯವಹಾರ

ರಾಮಲಿಂಗಂ ಕನ್‌ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ರಾಮಲಿಂಗಂ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ಮೂಲಕ ಪ್ರಭಾವ ಬೀರಿ ಹಲವು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಡತಗಳ್ನು ತ್ವರಿತ ವಿಲೇವಾರಿ, ಬಿಲ್ ಪಾವತಿ ಹೀಗೆ ನಾನಾ ಕಾರ್ಯಗಳನ್ನು ಮಾಡಿಸಿಕೊಂಡು ಅದಕ್ಕೆ ಪ್ರತಿಯಾಗಿ ಲಂಚನ್ನು ನೀಡಲಾಗಿದೆ. ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರ ಶಶಿಧರ್ ಮರಡಿ ಮೂಲಕ ಪ್ರಭಾವ ಬೀರಿಸಿ ಚಂದ್ರಕಾಂತ್ ರಾಮಲಿಂಗಂ ಕೋಟ್ಯಂತರ ರೂಪಾಯಿ ಅಕ್ರಮ ಹಣ ಪಾವತಿ ಮಾಡಿದ್ದಾರೆ.


ಈ ಸಂಬಂಧ ಶಶಿಧರ್ ಮರಡಿ ಹಾಗೂ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವೆ ವಾಟ್ಸಪ್ ಸಂದೇಶ ವಿನಿಮಯವಾಗಿದ್ದು ಅದರ ಪ್ರಕಾರ, ಮುಖ್ಯಮಂತ್ರಿಗಳ ಪ್ರಭಾವ ಬಳಿಸಿ ಹಲವು ಗುತ್ತಿಗೆಗಳನ್ನು ರಾಮಲಿಂಗಂ ಕಂಪನಿಗೆ ಕೊಡಿಸಿರುವ ಬಗ್ಗೆ ವಾಟ್ಸಪ್ ನಲ್ಲಿ ಸಂದೇಶ ವಿನಿಯಮ ಮಾಡಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶಶಿಧರ್ ಮರಡಿ ಐದು ಕೋಟಿ ರೂ. ಹಣವನ್ನು ನೀಡಲು ಸೂಚನೆ ಮಾಡಿ ವಾಟ್ಸಪ್ ಸಂದೇಶ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಚಂದ್ರಕಾಂತ್ ರಾಮಲಿಂಗಂ ಐದು ದಿನದಲ್ಲಿ ಅಷ್ಟು ಹಣ ಅರೇಂಜ್ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.


2019 ಅಕ್ಟೋಬರ್ ನಲ್ಲಿ ನಡೆದಿರುವ ಈ ವಾಟ್ಸಪ್ ಸಂದೇಶದಲ್ಲಿ ಯಡಿಯೂರಪ್ಪ ಕುಟುಂಬ ಸದಸ್ಯರು ರಾಮಲಿಂಗಂ ಕಂಪನಿಗೆ ಗುತ್ತಿಗೆ ಕೊಡಿಸಲು ಕೋಟಿ ಕೋಟಿ ಕಪ್ಪು ಹಣ ಕೊಟ್ಟಿರುವ ಬಗ್ಗೆ ವಾಟ್ಸಪ್ ಚಾಟ್ ಸಾಕ್ಷಿ ಆಧಾರಗಳನ್ನು ಅಬ್ರಹಾಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಾರೆ ಯಡಿಯೂರಪ್ಪ ಕುಟುಂಬ 12.5 ಕೋಟಿ ರೂ. ಕಪ್ಪ ಸಂಗ್ರಹ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಸಂಬಂಧಿಸಿದ ವಾಟ್ಸಪ್ ಸಂದೇಶ, ಸಾಕ್ಷಾಧಾರಗಳನ್ನು ನೀಡಲಾಗಿದೆ. ಇನ್ನು ಶಶಿಧರ್ ಮರಡಿ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವಿನ 12.5 ಕೋಟಿ ರೂ. ಹಣಕಾಸಿನ ವಹಿವಾಟು ಬ್ಯಾಂಕ್ ಖಾತೆಯ ವಹಿವಾಟಿನ ವಿವರಗಳನ್ನು ಇಡಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

  3 ನೇ ಅಲೆಗೆ ಈಗಲೇ ಆಕ್ಸಿಜನ್ ಬಸ್ ತಯಾರಿ ಮಾಡಿಕೊಂಡಿದ್ದಾರೆ | Oneindia Kannada
  ವಿಜಯಣ್ಣ ಎಂಟ್ರಿ

  ವಿಜಯಣ್ಣ ಎಂಟ್ರಿ

  ಬಿ.ವೈ. ವಿಜಯೇಂದ್ರ ಹಾಗೂ ಶಶಿಧರ್ ಮರಡಿ ನಡುವಿನ ವಾಟ್ಸಪ್ ಸಂದೇಶದಲ್ಲೂ ಸಹ ಅಕ್ರಮ ವಹಿವಾಟಿನ ವಿವರಗಳು ಸಿಕ್ಕಿಬಿದ್ದಿವೆ. ಚಂದ್ರಕಾಂತ್ ರಾಮಲಿಂಗಂ, , ಶಶಿಧರ್ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿಯ ಅಳಿಯ ಸಂಜಯ್ ಶ್ರೀ ಅವರ ನಡುವಿನ ಸಂಭಾಷಣೆಯಲ್ಲಿಯೇ ಸಂಚು ರೂಪಿಸಿರುವುದು, ಮುಖ್ಯಮಂತ್ರಿ ಕಾರ್ಯಾಲಯದ ಪ್ರಾಭಾವ ಬಳಿಸಿ 2019 ಜುಲೈ 10 ರಿಂದ 2020 ಜುಲೈ 15 ರ ಅವಧಿಯಲ್ಲಿನ ವಹಿವಾಟು ಪರಿಗಣಿಸಿದರೆ, ರೂಪಿಸಿರುವ ಸಂಚು ಹಣಕಾಸಿನ ಬೇನಾಮಿ ವಹಿವಾಟು ಎಲ್ಲವೂ ಬೆಳಕಿಗೆ ಬರುತ್ತದೆ ಎಂದು ಕೆಲವು ಮಹತ್ವದ ಸಾಕ್ಷಾಧಾರಗಳ ಸಮೇತ ದೂರಿನಲ್ಲಿ ಆರೋಪಿಸಲಾಗಿದೆ.


  ಈ ಹಂತದಲ್ಲಿ ವಿಜಯೇಂದ್ರ ಅವರ ಹೆಸರು ಎಂಟ್ರಿ ಆಗಿದೆ. ಮುಖ್ಯಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿ , ವಿರೂಪಾಕ್ಷಪ್ಪ ಯಮಕನಮರಡಿ ನಡುವಿನ ವಾಟ್ಸಪ್ ಸಂದೇಶದ ವಿವರಗಳು, ರೂಪಿಸಿರುವ ಸಂಚಿನ ಬಗ್ಗೆ ಉಲ್ಲೇಖಿಸಲಾಗಿದೆ. ಹೀಗೆ ನಾನಾ ಕಂಪನಿಗಳ ಜತೆ ಬೇನಾಮಿ ವಹಿವಾಟು ನಡೆಸಿರುವ ಯಡಿಯೂರಪ್ಪ ಕುಟುಂಬ ಸದಸ್ಯರ ಅಕ್ರಮ ವಹಿವಾಟು, ಬೇನಾಮಿ ದಂಧೆ ಕುರಿತು ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

  English summary
  Chief Minister B.S. Yediyurappa’s son B.Y. Vijayendra had gone to New Delhi in connection with Enforcement Directorate (ED) inquiry and not for discussing State politics with national leaders.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X