ಗೆಲುವು-ಸೋಲಿನಲ್ಲಿ ಎರಡೂ ಪಕ್ಷಕ್ಕೆ ಸಮಪಾಲು: ದಿನೇಶ್ ಗುಂಡೂರಾವ್‌

ಬೆಂಗಳೂರು, ನವೆಂಬರ್ 06: ಉಪಚುನಾವಣೆಯ ಫಲಿತಾಂಶ ಹೇಗೇ ಬರಲಿ ಕಾಂಗ್ರೆಸ್-ಜೆಡಿಎಸ್‌ ಎರಡೂ ಪಕ್ಷಕ್ಕೆ ಸಮನಾಗಿ ಹಂಚಿಕೆ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಸಮಾನವಾಗಿ ಚುನಾವಣೆಯಲ್ಲಿ ತೊಡಗಿಕೊಂಡಿವೆ. ಎರಡೂ ಪಕ್ಷಗಳು ಸಮಾನ ಶ್ರಮವನ್ನು ಚುನಾವಣೆಗಾಗಿ ಹಾಕಿವೆ ಹಾಗಾಗಿ ಫಲಿತಾಂಶದ ಶ್ರೇಯ ಸಹ ಎರಡೂ ಪಕ್ಷಗಳಿಗೆ ಸಮಾನವಾಗಿ ಹಂಚಿಕೆ ಆಗುತ್ತದೆ ಎಂದು ಅವರು ಹೇಳಿದರು.

ಬಿಜೆಪಿಗೆ ಚುನಾವಣೆಗೆ ಬೇರೆ ಯಾವುದೇ ಅಜೆಂಡಾ ಇರಲಿಲ್ಲ ಹಾಗಾಗಿ, ಕೇವಲ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ ಹೋಗಿತ್ತು. ಕೋಮುವಾದಿಗಳಿಗೆ ಸೂಲು ಖಂಡಿತ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.

By election 2018: election result credit must go both parties: Dinesh Gundu Rao

ಉಪಚುನಾವಣೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಗೆ ಗೆಲುವಾಗಲಿದೆ, ಲೋಕಸಭೆ ಚುನಾವಣೆಗೆ ಕರ್ನಾಟಕದಿಂದಲೇ ಬಿಜೆಪಿಯ ಪಥನ ಆರಂಭವಾಗುತ್ತದೆ ಎಂದು ಅವರು ಹೇಳಿದರು.

ಟಿಪ್ಪು ಜಯಂತಿ ಬಗ್ಗೆ ಸಹ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು, ಆದರೆ ಪ್ರತಿಭಟನೆ ಹಿಂಸಾತ್ಮಕವಾಗಿ ಇರಬಾರದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+