ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಪ್ರತಿವರ್ಷ ಏರಿಕೆ ಆಗಲಿದೆ ಜಲಮಂಡಳಿ ನೀರಿನ ದರ?

|
Google Oneindia Kannada News

ಬೆಂಗಳೂರು, ನವೆಂಬರ್ 17; ವಿದ್ಯುತ್ ದರದ ಮಾದರಿಯಲ್ಲಿಯೇ ಪ್ರತಿ ವರ್ಷವೂ ನೀರಿನ ದರ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಬೆಂಗಳೂರು ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.

ವರ್ಷದಿಂದ ವರ್ಷಕ್ಕೆ ವೆಚ್ಚಗಳು ಏರಿಕೆಯಾಗುತ್ತಿವೆ. ಆದರೆ ದರಗಳನ್ನು ಪರಿಷ್ಕರಣೆ ಮಾಡದ ಕಾರಣ ಮಂಡಳಿಗೆ ಆರ್ಥಿಕ ತೊಂದರೆ ಉಂಟಾಗಿದೆ ಎಂದು ಪ್ರಸ್ತಾವನೆಯಲ್ಲಿ ಜಲಮಂಡಳಿ ವಿವರಣೆ ನೀಡಿದೆ.

ಬೆಂಗಳೂರಿಗೆ 2027ಕ್ಕೆ ಕುಡಿಯುವ ನೀರಿನ ಸಮಸ್ಯೆ: ಜಲಮಂಡಳಿ ಪ್ಲಾನ್ ಏನು? ಬೆಂಗಳೂರಿಗೆ 2027ಕ್ಕೆ ಕುಡಿಯುವ ನೀರಿನ ಸಮಸ್ಯೆ: ಜಲಮಂಡಳಿ ಪ್ಲಾನ್ ಏನು?

ವಿದ್ಯುತ್ ದರ ಏರಿಕೆ ಮಾದರಿಯಲ್ಲಿಯೇ ಜಲಮಂಡಳಿಯಲ್ಲಿಯೂ ದರವನ್ನು ಏರಿಕೆ ಮಾಡಲು ಅನುಮತಿ ನೀಡಬೇಕು. ಕನಿಷ್ಠ ಪಕ್ಷ ವರ್ಷಕ್ಕೊಮ್ಮೆ ದರವನ್ನು ಏರಿಸಲು ಸರ್ಕಾರ ಅನುಮೋದನೆ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ.

ಕಾರ್ಮಿಕನ ಕಣ್ಣಿಗೆ ಹಾನಿ; ಜಲಮಂಡಳಿ ಕೊಟ್ಟಿಲ್ಲ ಪರಿಹಾರ ಕಾರ್ಮಿಕನ ಕಣ್ಣಿಗೆ ಹಾನಿ; ಜಲಮಂಡಳಿ ಕೊಟ್ಟಿಲ್ಲ ಪರಿಹಾರ

BWSSB Seeks Water Traffic Hike Year Govt Yet Approve

ಅಕ್ಟೋಬರ್ 20, 2014ರ ಬಳಿಕ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಆದರೆ ಈ ಅವಧಿಯಲ್ಲಿ 10 ಸಲ ವಿದ್ಯುತ್ ದರ ಪರಿಷ್ಕರಣೆಯಾಗಿದೆ. ಜಲಮಂಡಳಿ ಸಲ್ಲಿಕೆ ಮಾಡಿರುವ ಪ್ರಸ್ತಾಪಕ್ಕೆ ಸರ್ಕಾರ ಉತ್ತರ ನೀಡಿಲ್ಲ.

ಜಲಮಂಡಳಿ ಬಿಲ್ ಪಾವತಿಯಲ್ಲಿ ಮಹತ್ವದ ಬದಲಾವಣೆಜಲಮಂಡಳಿ ಬಿಲ್ ಪಾವತಿಯಲ್ಲಿ ಮಹತ್ವದ ಬದಲಾವಣೆ

ಬಿಬಿಎಂಪಿ ಚುನಾವಣೆ ಮತ್ತು ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದು ಅನುಮಾನ. ಆದರೆ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಕುರಿತ ಚರ್ಚೆಗಳು ಮತ್ತೆ ಆರಂಭವಾಗಲಿವೆ.

ಈ ವರ್ಷದ ಜನವರಿಯಲ್ಲಿ ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ ಒಪ್ಪಿಗೆ ನೀಡದ ಕಾರಣ ದರ ಏರಿಕೆ ಆಗಿರಲಿಲ್ಲ.

ಗೃಹ ಬಳಕೆಗೆ ಶೇ 16, ವಾಣಿಜ್ಯ ಬಳಕೆಗೆ ಶೇ 21ರಷ್ಟು ದರ ಏರಿಕೆ ಮಾಡಲು ಅನುಮತಿ ನೀಡುವಂತೆ ಜಲಮಂಡಳಿ ಕೇಳಿದೆ. ಎರಡು ವರ್ಷಗಳ ಹಿಂದೆ ಮತ್ತೆ ಜಲಮಂಡಳಿ ನೀರಿನ ದರ ಏರಿಕೆ ಬಗ್ಗೆ ಕೇಳಿದಾಗ ಕೋವಿಡ್ ನೆಪ ಹೇಳಿದ ಸರ್ಕಾರ ಮನವಿ ತಿರಸ್ಕಾರ ಮಾಡಿತ್ತು.

English summary
The Bangalore Water Supply And Sewerage Board (BWSSB) seeks water bill hike every year. Board submit proposal to Karnataka government on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X