BWSSB: ಕಾವೇರಿ 6ನೇ ಹಂತದ ಯೋಜನೆ; ಯಾವ ಪ್ರದೇಶಗಳಿಗೆ ನೀರು?

ಬೆಂಗಳೂರು, ಫೆಬ್ರವರಿ 12: ಈ ಬಾರಿ ನಿರೀಕ್ಷಿಸಿದ ಮಟ್ಟದಲ್ಲಿ ಮಳೆಯಾಗದ ಕಾರಣ ರಾಜ್ಯದ ಅನೇಕ ಭಾಗಗಳಲ್ಲಿ ಬರಗಾಲ ಆರಂಭವಾಗಿದೆ. ಹಲವೆಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು, ಬೆಂಗಳೂರು ನಗರ ಕೂಡ ಇದಕ್ಕೆ ಹೊರತಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನೀರಿನ ಕೊರತೆ ಆರಂಭವಾಗಿದ್ದು, ನೀರಿನ ಅವಶ್ಯಕತೆ ಮತ್ತು ಅವಲಂಬನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಅತ್ಯಂತ ದುರ್ಬಲ ನಗರಗಳಲ್ಲಿ ಒಂದಾಗಿದೆ.

ಈ ಬಾರಿ ಬೇಸಿಗೆ ಆರಂಭಕ್ಕೂ ಮೊದಲೇ ನೀರಿನ ಕೊರತೆ ಉಂಟಾಗುತ್ತಿದ್ದು, ಈ ಮಧ್ಯೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರಿನ ಜನತೆಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಬೆಂಗಳೂರಿನ ಹೊರವಲಯಗಳಿಗೂ ಕಾವೇರಿ ನೀರು ಬಿಡಲು ಬಿಡಬ್ಲ್ಯೂಎಸ್‌ಎಸ್‌ಬಿ ನಿರ್ಧರಿಸಿದ್ದು, ನಗರಕ್ಕೆ ಮಂಜೂರು ಮಾಡಿದ ಕಾವೇರಿ ನೀರಿನ ಪಾಲನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ತನ್ನ ಜಾಲವನ್ನು ವಿಸ್ತರಿಸಲು ಮುಂದಾಗಿದೆ.

BWSSB Plans To Expand Cauvery Water Network To City Outskirts

ಬೆಂಗಳೂರಿಗೆ ಇನ್ನೂ ಆರು ಟಿಎಂಸಿ ಅಡಿ ನೀರನ್ನು ಬೆಂಗಳೂರಿನ ಹೊರವಲಯಗಳಿಗೆ ಮಂಜೂರು ಮಾಡಲು ಕಾವೇರಿ 6ನೇ ಹಂತದ ವಿವರವಾದ ಯೋಜನಾ ವರದಿ (ಡಿಪಿಆರ್) ಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡುತ್ತಿದೆ.

ಬೆಂಗಳೂರಿಗೆ ಇನ್ನೂ ಆರು ಟಿಎಂಸಿ ಅಡಿ ನೀರನ್ನು ಮಂಜೂರು ಮಾಡಲು ಕಾವೇರಿ 6ನೇ ಹಂತದ ವಿವರವಾದ ಯೋಜನಾ ವರದಿ ಸಿದ್ಧವಾಗುತ್ತಿದೆ. ಇದೀಗ ಬೆಂಗಳೂರು 19 ಟಿಎಂಸಿ ಅಡಿ ನೀರನ್ನು ಬಳಸುತ್ತಿದ್ದು, ಪೂರ್ಣಗೊಳ್ಳುವ ಹಂತದಲ್ಲಿರುವ ಕಾವೇರಿ ಐದನೇ ಹಂತದ ಯೋಜನೆ ಪೂರ್ಣಗೊಂಡರೆ ನಗರಕ್ಕೆ ಮಂಜೂರಾಗಿರುವ 35 ಟಿಎಂಸಿ ಅಡಿಗಳಲ್ಲಿ ಇನ್ನೂ 10 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಅರ್ಥಮಾಡಿಕೊಳ್ಳಲು ಡಿಪಿಆರ್‌ ಸಹಾಯ ಮಾಡುತ್ತದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ. ರಾಮ್ ಪ್ರಸಾತ್‌ ಮನೋಹರ್ ತಿಳಿಸಿದ್ದು, ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಾವು ಭವಿಷ್ಯದ ಬಗ್ಗೆ ಯೋಜಿಸಬೇಕಾಗಿದೆ. ಭವಿಷ್ಯದಲ್ಲಿ ಉದ್ಭವಿಸಬಹುದಾದ ಡಿಪಿಆರ್ ಸಹಾಯ ಮಾಡುತ್ತದೆ. ಇನ್ನು ಬೆಂಗಳೂರಿನ ಹೊರವಲಯಗಳಿಗೂ ಕಾವೇರಿ ನೀರು ಬಿಡಲು ಈ ಪ್ರದೇಶಗಳಲ್ಲಿನ ನಗರ ಸ್ಥಳೀಯ ಸಂಸ್ಥೆಗಳು (ULB) ಪೈಪ್‌ ಲೈನ್‌ಗಳು ಮತ್ತು ಸಂಪರ್ಕಗಳನ್ನು ನೋಡಿಕೊಳ್ಳಬೇಕಾಗುತ್ತದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 110 ಹಳ್ಳಿಗಳಿಗೆ ನೀರಿನ ಸಂಪರ್ಕವನ್ನು ವಿಸ್ತರಿಸಲು ಕಾವೇರಿ ಐದನೇ ಹಂತದ ಯೋಜನೆಯನ್ನು 2017ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ವಿಳಂಬವಾಗಿದ್ದು, ಈ ವರ್ಷದ ಮೇ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+