Water Crisis: ರಾಜಧಾನಿಯ ನೀರಿನ ಬಿಕ್ಕಟ್ಟು ಬಗೆಹರಿಸಲು ಬಂದಿವೆ ನಾಲ್ಕು ಆಪ್‌ಗಳು!

ಬೆಂಗಳೂರು, ಮಾರ್ಚ್ 15: ಸಿಲಿಕಾನ್ ಸಿಟಿಯಲ್ಲಿ ನಿರಿನ ಬಿಕ್ಕಟ್ಟು ನೀಗಿಸಲು ಜಲಮಂಡಳಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೆ ಮುಂದುವರಿದ ಭಾಗವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ನಾಲ್ಕು ಮೊಬೈಲ್ ರೆಸ್ಪಾನ್ಸಿವ್ ವೆಬ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.

ಈ ನಾಲ್ಕು ಆ್ಯಪ್‌ಗಳೆಂದರೆ ಜಲಮಿತ್ರ (Jalamithra), ಪರಿಸರ ಜಲಸ್ನೇಹಿ (Parisara Jalasnehi), ಅಂದರ್ ಜಲ (Andar Jala) ಮತ್ತು ಸಂರಕ್ಷಕ (Samrakshaka). ಈ ಅಪ್ಲಿಕೇಷನ್‌ಗಳ ಮೂಲಕ ಬೆಂಗಳೂರಿಗರು ಈಗ ನೀರಿನ ಸೋರಿಕೆ ಪತ್ತೆ ಸಮೀಕ್ಷೆಗಳಿಗೆ ಸ್ವಯಂಸೇವಕರಾಗಬಹುದು, ಸಂಸ್ಕರಿಸಿದ ನೀರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು, ಬೋರ್‌ವೆಲ್ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ತಮ್ಮ ಫೋನ್‌ಗಳಲ್ಲಿ ನೀರಿನ ದುರುಪಯೋಗದ ವಿರುದ್ಧ ದೂರು ನೀಡಬಹುದು.

BWSSB launched four mobile web applications to tackle water crisis

ಜಲಮಿತ್ರ

ಜಲಮಿತ್ರ ವೆಬ್ ಅಪ್ಲಿಕೇಶನ್ ಮೂಲಕ ನೀರಿನ ಸೋರಿಕೆ ಪತ್ತೆ ಮಾಡುವುದು, ಸಮೀಕ್ಷೆಗಳು ಮತ್ತು ಜಲ ಮಂಡಳಿಯೊಂದಿಗೆ ಕೆಲಸ ಮಾಡಲು ಸ್ವಯಂಪ್ರೇರಿತವಾಗಿ ಸ್ವಯಂಸೇವಕರಾಗಲು ಸಿದ್ಧರಿರುವವರನ್ನು ಹುಡುಕುತ್ತದೆ. ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿಕೆಲಸ ಮಾಡುವವರು ಕೂಡ ಇದರಲ್ಲಿ ಭಾಗವಹಿಸಬಹುದು

ಈ ಕೆಲಸದಲ್ಲಿ ಆಸಕ್ತಿಯಿಂದ ಭಾಗವಹಿಸುವವರು ತಿಂಗಳಿಗೆ ನಾಲ್ಕು ದಿನಗಳನ್ನು ಮೀಸಲಿಡಬೇಕಾಗುತ್ತದೆ. ಆಸಕ್ತ ಅರ್ಜಿದಾರರು BWSSB ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆ ಮಾಡಲಾಗುತ್ತದೆ. ಈ ಸೇವೆಗೆ ಯಾವುದೇ ಧನ ಸಹಾಯ, ಸಂಬಳ ಇರುವುದಿಲ್ಲ.

ಪರಿಸರ ಜಲಸ್ನೇಹಿ

ಪರಿಸರ ಜಲಸ್ನೇಹಿ ಅಪ್ಲಿಕೇಶನ್ ನಾಗರಿಕರಿಗೆ ಮನೆ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಗಳು ಸೇರಿದಂತೆ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಸಹಾಯ ಮಾಡುತ್ತದೆ.

ಅಂದರ್ ಜಲ

ಬೋರ್‌ವೆಲ್ ಕೊರೆಸಲು ಅನುಮತಿಗಳಿಗಾಗಿ ನಾಗರಿಕರು ಅರ್ಜಿ ಸಲ್ಲಿಸಲು ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಪಡೆಯಲು ಅಂದರ್ ಜಲಾ ಅನುಮತಿಸುತ್ತದೆ. ನಾಗರಿಕರು ಕುಡಿಯುವ, ಗೃಹಬಳಕೆ ಉದ್ದೇಶಗಳಿಗಾಗಿ ಬಾವಿಗಳು, ಬೋರ್‌ವೆಲ್‌ಗಳನ್ನು ಕೊರೆಯಲು ಅರ್ಜಿಗಳನ್ನು ಸಲ್ಲಿಸಬಹುದು. ಈ ಅರ್ಜಿಗಳನ್ನು ತಾಂತ್ರಿಕ ಸಮಿತಿಯು ಪರಿಶೀಲಿ, ಅನುಮೋದಿಸುತ್ತದೆ.

BWSSB launched four mobile web applications to tackle water crisis

ಸಂರಕ್ಷಕ

ಕುಡಿಯುವ ನೀರನ್ನು ಅನಿವಾರ್ಯವಲ್ಲದ ಉದ್ದೇಶಗಳಿಗೆ ಬಳಸುವ ಮೂಲಕ ನೀರನ್ನು ದುರ್ಬಳಕೆ ಮಾಡಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವುದು ಸಂರಕ್ಷಕನ ಗುರಿಯಾಗಿದೆ. ತಪ್ಪಿತಸ್ಥರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು. ಮಾರ್ಚ್ 16 ರಿಂದ ಸ್ಪಾಟ್ ಪೆನಾಲ್ಟಿಗಳನ್ನು ವಿಧಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಸಿಬ್ಬಂದಿ ಸಂರಕ್ಷಕ ಆಪ್ ಬಳಸುತ್ತಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ ಇತ್ತೀಚೆಗೆ ಅಗತ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದೆ. ಮಾರ್ಚ್ 7 ರ ಆದೇಶದ ಪ್ರಕಾರ, ವಾಹನಗಳನ್ನು ಸ್ವಚ್ಛಗೊಳಿಸುವುದು, ತೋಟಗಾರಿಕೆ, ಕಾರಂಜಿ, ಕಟ್ಟಡ ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಂತಹ ಚಟುವಟಿಕೆಗಳಿಗೆ ಕುಡಿಯುವ ನೀರನ್ನು ಬಳಸಬಾರದು. ಮಾಲ್‌ಗಳು ಮತ್ತು ಥಿಯೇಟರ್‌ಗಳು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಅನುಮತಿಸಲಾಗಿದೆ. ಇಲ್ಲದಿದ್ದರೇ 5,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.

ಇನ್ನು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾರ್ಚ್ 14 ರಂದು ವಿಧಾನಸೌಧದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ 'ನೀರು ಉಳಿಸಿ, ಬೆಂಗಳೂರು ಬೆಳಸಿ' ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನ ನೀರಿನ ಸಂರಕ್ಷಣೆಯನ್ನು ಹೆಚ್ಚಿಸುವ, ಅದರ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+