ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಾವೇರಿ ನೀರಿನ ದರ ಏರಿಕೆ ಶಾಕ್

By Mahesh
|
Google Oneindia Kannada News

ಬೆಂಗಳೂರು, ನ.2: ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಲಿ(ಬಿಡಬ್ಲ್ಯೂಎಸ್ಎಸ್ ಬಿ) ಭಾನುವಾರದಂದು ಕಾವೇರಿ ನೀರು ಕುಡಿಯುವ ಬೆಂಗಳೂರಿಗರಿಗೆ ಶಾಕ್ ನೀಡಿದ್ದಾರೆ. ಗೃಹ ಉಪಯೋಗಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸುವ ನೀರಿನ ದರಕಗಳನ್ನು ಇಂದಿನಿಂದ ಏರಿಕೆ ಮಾಡಿ ಜಲಮಂಡಳಿ ಪ್ರಕಟಣೆ ಹೊರಡಿಸಿದೆ.

ಬಿಡಬ್ಲ್ಯೂಎಸ್ಎಸ್ ಬಿ ನೀಡಿರುವ ಬೆಲೆ ಏರಿಕೆ ಶಿಫಾರಸ್ಸಿಗೆ ರಾಜ್ಯ ಸರ್ಕಾರದ ಅಂಕಿತ ಬಿದ್ದಿರುವುದರಿಂದ ನೀರಿನ ಬಿಲ್ ದರ ಏರಿಕೆ ಅನಿವಾರ್ಯ. ನೀರು ಬಳಕೆ, ಸೇವಾದರ ಹಾಗೂ ಒಳಚರಂಡಿ ವ್ಯವಸ್ಥೆ ದರ ಎಲ್ಲವನ್ನೂ ಏರಿಕೆ ಮಾಡಲಾಗಿದೆ. [ನೀರಿನ ಬಿಲ್ ಆನ್ ಲೈನ್ ನಲ್ಲೇ ಕಟ್ಟಿ]

BWSSB hikes tariff for domestic and commercial connections

ಬೆಲೆ ಏರಿಕೆ : ಗೃಹೋಪಯೋಗಿ ನೀರಿನ ದರ 1 ಸಾವಿರ ಲೀ.ಗೆ 7 ರುಪಾಯಿ ಆಗಿದೆ. ಈ ಹಿಂದೆ 6 ರು ಇತ್ತು.ವಾಣಿಜ್ಯ ಬಳಕೆ ನೀರಿನ ದರ 14ರು ಏರಿಕೆ ಕಂಡು 1 ಸಾವಿರ ಲೀ.ಗೆ 50 ರು ಆಗಿದೆ. ಈ ಮುಂಚೆ 36ರು ನಷ್ಟಿತ್ತು. [ಬೆಂಗಳೂರಿಗರು ನಿದ್ದೆಯಿಂದ ಎದ್ದಿಲ್ಲ]

ಜಲಮಂಡಳಿ ಸಮರ್ಥನೆ: ವಿದ್ಯುತ್‌ ದರ ಏರಿಕೆಯಿಂದ ಆಗುತ್ತಿರುವ ನಷ್ಟವನ್ನು ತುಂಬಿಕೊಳ್ಳಲು ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ. 2005ರಿಂದ ನೀರಿನ ದರ್ ಏರಿಕೆ ಮಾಡಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ. [ನೀರು ಬೇಕಾ? ಇಲ್ಲಿಗೆ ಅರ್ಜಿ ಸಲ್ಲಿಸಿ]

ಗ್ರಾಹಕರು ಇನ್ಮುಂದೆ ಕನಿಷ್ಠ 83 ರು ದರದ ಬದಲಿಗೆ 100 ರು ಕಟ್ಟಬೇಕಾಗುತ್ತದೆ. ಬೆಲೆ ಏರಿಕೆಯಿಂದಾಗಿ ಜಲಮಂಡಳಿಗೆ ಸುಮಾರು 73.73 ಕೋಟಿ ರು ಅಧಿಕ ಅದಾಯ ನಿರೀಕ್ಷೆಯಿದೆ.

English summary
The Bangalore Water Supply and Sewerage Board (BWSSB) hikes tariff of both domestic and commercial connections. There will increase in water charges, service charges and sanitary charges. The last hike in water tariff took place in 2005 and there has been no hike for the past nine years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X