• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಜಲಮಂಡಳಿ ನೌಕರರ ಒಕ್ಕೂಟಕ್ಕೆ ಅ. 5ಕ್ಕೆ ಚುನಾವಣೆ

|

ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘಕ್ಕೆ ಮುಂದಿನ ತಿಂಗಳು, ಅಕ್ಟೋಬರ್ 5ನೇ ತಾರೀಕು ಚುನಾವಣೆ ನಡೆಯಲಿದೆ. 1800 ನೌಕರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು, ಮೂರು ಗುಂಪುಗಳ ಮಧ್ಯೆ ಪೈಪೋಟಿ ನಡೆಯುವಂತೆ ಕಂಡುಬರುತ್ತಿದೆ.

ಸೆಪ್ಟೆಂಬರ್ 24, 25ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಇದೇ ತಿಂಗಳ 28ರಂದು ನಾಮಪತ್ರ ಸಮರ್ಪಕವಾಗಿ ಸಲ್ಲಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ. ಆ ನಂತರ 29ರಂದು ನಾಮಪತ್ರ ಹಿಂಪಡೆಯುವುದಕ್ಕೆ ಅವಕಾಶ ಇದೆ. ಅಕ್ಟೋಬರ್ 5ನೇ ತಾರೀಕಿನ ಶುಕ್ರವಾರ ಚುನಾವಣೆ ನಡೆದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಬೆಂಗಳೂರು ಜಲಮಂಡಳಿಯಲ್ಲಿ 270 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಹಾಕಿ

ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಮೂರು ತಂಡಗಳ ಪೈಕಿ 'ಉದಯ ಸೂರ್ಯ' ತಂಡದ ನೇತೃತ್ವ ವಹಿಸಿರುವ ರುದ್ರೇಗೌಡ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದೆ. ಅಸಿಸ್ಟೆಂಟ್ ಮಾರ್ಕೆಟಿಂಗ್ ಆಫೀಸರ್ ಆಗಿರುವ ಅವರು, 2002ರಿಂದ 2015ರ ತನಕ ನಿರಂತರವಾಗಿ ಸಂಘದಲ್ಲಿ ಅಧ್ಯಕ್ಷ ಹುದ್ದೆಯೂ ಸೇರಿದ ಹಾಗೆ ವಿವಿಧ ಜವಾಬ್ದಾರಿ ನಿರ್ವಹಿಸಿದವರು.

ಜಲಮಂಡಳಿ ನೌಕರರಿಗೆ ವೇತನ ಪರಿಷ್ಕರಣೆ ಬಾಕಿ ಇದೆ. ಜುಲೈನಿಂದ ಅನ್ವಯ ಆಗುವಂತೆ ಅದು ಸಿಗಬೇಕು. ಇನ್ನು ತುರ್ತಾಗಿ ನೇಮಕಾತಿ ನಡೆಯಲೇಬೇಕು. ಈಗಿರುವ ಉದ್ಯೋಗಿಗಳ ಮೇಲೆ ಭಾರೀ ಒತ್ತಡ ಇದೆ. ಸದ್ಯಕ್ಕೆ ಇರುವ ಉದ್ಯೋಗಿಗಳ ಪೈಕಿ ಇನ್ನೆರಡು ವರ್ಷದಲ್ಲಿ ಇನ್ನಷ್ಟು ಮಂದಿ ನಿವೃತ್ತರಾಗುತ್ತಾರೆ. ಇನ್ನು ಪೆನ್ಷನ್ ಫಂಡ್ ಎಂಬುದೊಂದನ್ನು ಮಾಡಬೇಕು ಎಂದರು ರುದ್ರೇಗೌಡ.

ತಮ್ಮ ತಂಡದ 'ಪ್ರಣಾಳಿಕೆ'ಯನ್ನು ತುಂಬ ಸ್ಥೂಲವಾಗಿ ತಿಳಿಸಿದ ಅವರು, ಮಂಡಳಿಯ ಸಿ ಅಂಡ್ ಆರ್ ನಿಯಮಗಳು ಬದಲಾಗಬೇಕು ಎಂಬುದು ಸೇರಿದ ಹಾಗೆ ಇನ್ನಷ್ಟು ಕೆಲಸ ಅಂದುಕೊಂಡಿದ್ದೀನಿ. ನನ್ನ ಮೇಲೆ ಜಲಮಂಡಳಿಯ ಅನ್ನದ ಋಣ ಇದೆ. ಅದನ್ನು ತೀರಿಸಲೇ ಬೇಕು. ನಮ್ಮ ಭರವಸೆಯ ಪೂರ್ತಿ ವಿವರವನ್ನು ಇನ್ನೇನು ಬಿಡುಗಡೆ ಮಾಡ್ತೀವಿ. ಆ ಪೈಕಿ ಯಾವುದೇ ಒಂದು ಈಡೇರಲಿಲ್ಲ ಅಂದರೂ ನನ್ನನ್ನು ನಿಲ್ಲಿಸಿ ಕೇಳಬಹುದು ಎಂದು ವಿಶ್ವಾಸದಿಂದ ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ರುದ್ರೇಗೌಡ ಮತ್ತೆ ಅಧ್ಯಕ್ಷ ಹುದ್ದೆಗಾಗಿ ಸ್ಪರ್ಧೆಯಲ್ಲಿದ್ದಾರೆ. ಅವರ ತಂಡದಿಂದ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸಿದವರ ವಿವರ ಹೀಗಿದೆ.

ರುದ್ರೇಗೌಡ- ಅಧ್ಯಕ್ಷ

ಎಸ್.ಜಿ.ಮುರಳಿ- ಉಪಾಧ್ಯಕ್ಷ

ಎ.ಗೋವಿಂದರಾಜು- ಪ್ರಧಾನ ಕಾರ್ಯದರ್ಶಿ

ಕೂಡಲ ಸಂಗಪ್ಪ- ಜಂಟಿ ಕಾರ್ಯದರ್ಶಿ

ಎಚ್.ಬೈಲಾಂಜನೇಯ- ಸಂಘಟನಾ ಕಾರ್ಯದರ್ಶಿ

ಎಸ್.ರವಿಚಂದ್ರ- ಖಜಾಂಚಿ

ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ:

ಟಿ.ಭರತ್ ಕುಮಾರ್

ಎಸ್.ಸಿ.ಚಂದ್ರಮೋಹನ್

ಗಿರಿಗೌಡ

ಎಸ್.ಗೋವರ್ಧನ್

ಜಿ.ಮಹೇಂದ್ರ ರಾಜು

ಬಿ.ಮಹೇಶ್

ಮುನಿರೆಡ್ಡಿ

ಸಿ.ಪ್ರಶಾಂತ್

ರಾಮಲಿಂಗ

ಸಿ.ರಮೇಶ್

ಸಿ.ರವಿಕುಮಾರ್

ಎಚ್.ರೂಪಾ

ಬಿ.ಸಂದೀಪ್

ಎಚ್.ಆರ್.ತೇಜಸ್ ಕುಮಾರ್

ಜಿ.ವರದರಾಯಸ್ವಾಮಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BWSSB employees association election will be on October 5th. Here is the some information about elections and Udaya Surya, one of the team contesting for elections, led by Rudre Gowda spoke to Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more