• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಲಮಂಡಳಿ ಮ್ಯಾರೇಜ್ ಹಾಲ್‌ನಲ್ಲಿ ನಿಗದಿಯಾಗಿದ್ದ ಎಲ್ಲಾ ಬುಕಿಂಗ್ ರದ್ದು!

|

ಬೆಂಗಳೂರು, ಫೆಬ್ರವರಿ 26: ಜಲಮಂಡಳಿಯ ವೆಡ್ಡಿಂಗ್ ಹಾಲ್ ರಜತಭವನದಲ್ಲಿ ನಿಗದಿಯಾಗಿದ್ದ 16ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರದ್ದುಪಡಿಸಿದೆ.

ಇದರಿಂದ ಬೆಂಗಳೂರು ಜನತೆಗೆ ಆತಂಕ ಕಾಡಿದೆ. ಫೆಬ್ರವರಿ 22 ರಂದು ಸುತ್ತೋಲೆಯೊಂದನ್ನೂ ಹೊರಡಿಸಿದ್ದು ಅದರ ಪ್ರಕಾರ ಏಪ್ರಿಲ್‌-ಜೂನ್ ವರೆಗೆ ರಜತಭವನದಲ್ಲಿ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಹಾಗೆಯೇ ಅವರಿಗೆ ಸಲ್ಲಬೇಕಾದ ಹಣವನ್ನು ಹಿಂದಿರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕೊಪ್ಪಳದಲ್ಲಿ ವಧುವಿಲ್ಲದೇ ಮದುವೆ ನೋಂದಣಿ ಮಾಡಿಸಿದ ಭೂಪ

ಯಾಕಿಷ್ಟು ನಿಷ್ಠೂರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನೋಡುವುದಾದರೆ ಒಂದೊಮ್ಮೆ ರಜತ ಭವನದಲ್ಲಿ ಮದುವೆ ಇನ್ನಿತರೆ ಶುಭ ಕಾರ್ಯಗಳನ್ನು ಮಾಡಬೇಕಿದ್ದರೆ ಆರು ತಿಂಗಳ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.

ಹಾಗಾಗಿ ಈಗಾಗಲೇ ಐದಾರು ತಿಂಗಳುಗಳ ಹಿಂದೆಯೇ ಹಾಲ್ ಬುಕ್ ಮಾಡಿ ಆಗಿತ್ತು. ಆದರೆ ಕಾರ್ಯಕ್ರಮಗಳು ಇನ್ನೇನು ಬಂದೇ ಬಿಟ್ಟಿತು ಎನ್ನುವ ಹೊತ್ತಿಗೆ ರದ್ದು ಮಾಡಿದರೆ ಈಗ ಮದುವೆ ಹಾಲ್‌ಗಳನ್ನು ಎಲ್ಲಿ ಹುಡುಕಬೇಕು ಎನ್ನುವುದು ಜನರ ವಾದವಾಗಿದೆ.

1961ರ ಆದಾಯ ತೆರಿಗೆ ನೀತಿ ಪ್ರಕಾರ ಸರ್ಕಾರದ ಸ್ವಾಯತ್ತ ಸಂಸ್ಥೆಯೂ ಯಾವುದೇ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ, ಅವರಿಗೆ ಆದಾಯ ತೆರಿಗೆಯಿಂದ ಯಾವುದೇ ರಿಯಾಯಿತಿ ಕೂಡ ಇರುವುದಿಲ್ಲ.

ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ಕಡ್ಡಾಯವಾಗಿ ತಿಳಿಸಲಾಗಿದೆ ಹಾಗಾಗಿ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಆದರೆ ಈ ಕಾರ್ಯಕ್ರಮಗಳು ಮುಗಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್ 31ರೊಳಗಿರುವ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
he Bangalore Water Supply and Sewerage Board’s (BWSSB) decision to peremptorily ban booking of its Rajatha Bhavana, Malleswaram, by public and cancel the reservation of the venue by 16 families for weddings and other events has left hundreds of Bengalureans shocked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X