ಮಾರ್ಚ್ 4ಕ್ಕೆ ಬೆಂಗಳೂರಿನಲ್ಲಿ 'ಬಸ್ ಭಾಗ್ಯ ಬೇಕು' ಅಭಿಯಾನ

ಬಿಎಂಟಿಸಿ ಟಿಕೆಟ್ ದರವನ್ನು ಇಳಿಸಲು, ತಂಗುದಾಣ ನಿರ್ಮಿಸಲು ಸೇರಿದಂತೆ ವಿವಿಧ ಕೆಲಸಗಳಿಗೆ ರಾಜ್ಯ ಸರಕಾರದಿಂದ ಈ ಬಾರಿ ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ಮೀಸಲಿಡಬೇಕು ಎಂಬ ಬಸ್ ಭಾಗ್ಯ ಬೇಕು ಎಂಬ ಅಭಿಯಾನ ಮಾರ್ಚ್ 4ರಂದು ನಡೆಯಲಿದೆ

ಬೆಂಗಳೂರು, ಮಾರ್ಚ್ 2: ಬೆಂಗಳೂರಿನಲ್ಲಿ ಅಭಿಯಾನ ಆರಂಭವಾಗಲಿದೆ. ಅದರ ಹೆಸರು 'ಬಸ್ ಭಾಗ್ಯ'. ಇದರ ಉದ್ದೇಶ ಏನೆಂದರೆ ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರಕಾರದಿಂದ ಬಿಎಂಟಿಸಿಗೆ ಕನಿಷ್ಠ ಒಂದು ಸಾವಿರ ಕೋಟಿ ಮೀಸಲಿರಸಬೇಕು ಎಂದು ಒತ್ತಾಯಿಸುವುದು.

ಎಲ್ಲ ಬಸ್ ನಿಲ್ದಾಣದಲ್ಲಿ ತಂಗುದಾಣ ನಿರ್ಮಾಣ ಮಾಡುವುದಕ್ಕೆ, ಪ್ರಯಾಣ ದರ ಕೈಗೆಟುಕುವಂತೆ ಮಾಡುವುದಕ್ಕೆ, ಅಗತ್ಯಕ್ಕೆ ತಕ್ಕಷ್ಟು ಬಸ್ ಗಳನ್ನು ಖರೀದಿಸುವುದಕ್ಕೆ, ಬಿಎಂಟಿಸಿ ನೌಕರರಿಗೆ ಬಾಕಿಯಿರುವ ಮೊತ್ತವನ್ನು ಪಾವತಿಸುವುದಕ್ಕೆ ಆ ಹಣವನ್ನು ಬಳಸಬೇಕು ಎಂದು ಒತ್ತಾಯಿಸಿ, ಸಹಿ ಸಂಗ್ರಹ ಮಾಡಲಾಗುತ್ತದೆ.[ಬಸ್ಸು ಕೆಟ್ಟು ನಿಂತಾಗ ಆಪದ್ಬಾಂಧವನಾದ ಟ್ರಾಫಿಕ್ ಪೊಲೀಸ್!]

BusBhagyaBeku compaign in Bengaluru on March 4th

ಕೈಗೆಟುಕುವ, ಆರಾಮದಾಯಕವಾದ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಾಗಿ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸುವ ಈ ಅಭಿಯಾನಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಲಾಗಿದೆ. ಹೇಗೆ ಆಹಾರ ಮತ್ತು ಹಾಲು ಜೀವನಾವಶ್ಯಕವೋ ಅದೇ ರೀತಿ ಕೆಲಸ, ಶಿಕ್ಷಣ ಹಾಗೂ ಉತ್ತಮ ಆರೋಗ್ಯ ವ್ಯವಸ್ಥೆಗೆ ಸಾರಿಗೆ ವ್ಯವಸ್ಥೆ ಅಷ್ಟೇ ಮುಖ್ಯ ಎಂಬುದು ಅಭಿಯಾನದ ಬೇಡಿಕೆಯ ಮೂಲ.[ಫೆಬ್ರವರಿ 15ರಿಂದ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಪಡೆಯಿರಿ]

ಬೆಂಗಳೂರಿನಲ್ಲಿ ಒಂದು ಕುಟುಂಬ ಗೌರವಯುತವಾದ ಜೀವನ ನಡೆಸುವುದಕ್ಕೆ ತಿಂಗಳಿಗೆ ಇಪ್ಪತ್ತು ಸಾವಿರ ರುಪಾಯಿ ಆದಾಯ ಅಗತ್ಯ. ಆದರೆ ಇಲ್ಲಿನ ಲಕ್ಷಾಂತರ ಮಂದಿ ಆದಾಯ ತಿಂಗಳಿಗೆ ನಾಲ್ಕೈದು ಸಾವಿರ ಇದೆ. ಕನಿಷ್ಠ ವೇತನಕ್ಕಿಂತ ಕಡಿಮೆ ಮೊತ್ತ ಇದು. ಇಂಥ ಸನ್ನಿವೇಶದಲ್ಲಿ ತಿಂಗಳ ಬಸ್ ಪಾಸ್ ಗೆ ಒಂದು ಸಾವಿರ ರುಪಾಯಿಯನ್ನು ಬಿಎಂಟಿಸಿ ನಿಗದಿಪಡಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಲಾಗುತ್ತಿದೆ.[5,500 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ]

ಮಾರ್ಚ್ 4 ಶನಿವಾರದಂದು ಡಬಲ್ ರೋಡ್ ಶಾಂತಿನಗರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 11ಕ್ಕೆ ಬಸ್ ಭಾಗ್ಯ ಬೇಕು ಅಭಿಯಾನ ನಡೆಯಲಿದೆ. ರಾಕ್ ಸ್ಟಾರ್ ಬ್ರೂಸ್ ಲೀ ಮಣಿ ಭಾಗವಹಿಸಲಿದ್ದಾರೆ. ಈ ಅಭಿಯಾನ ಬೆಂಬಲಿಸಲು ಫೋ- 080 30 47 47 74ಗೆ ಒಂದು ಮಿಸ್ ಕಾಲ್ ಕೊಡಿ. ಮಾರ್ಚ್ 4ರಂದು ಬೆಳಗ್ಗೆ 9.30ಕ್ಕೆ ಮೆಜೆಸ್ಟಿಕ್ ಹಾಗೂ ಕೋರಮಂಗಲ, 9.45ಕ್ಕೆ ಬನಶಂಕರಿ, 10ಕ್ಕೆ ಜಯನಗರ, ಶಿವಾಜಿನಗರದಲ್ಲಿ ಬಸ್ ಯಾತ್ರಾ ನಡೆಯಲಿದೆ.[ಬಸ್ ಭಾಗ್ಯ ಬೇಕು ಫೇಸ್ ಬುಕ್ ಪೇಜ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+