ಬಿಬಿಎಂಪಿಯಿಂದ ಕಟ್ಟಡ ಸ್ಯಾಟ್‌ಲೈಟ್ ಸರ್ವೆ: ಅನಧಿಕೃತ ಕಟ್ಟಡ ಮಾಲೀಕರಿಗೆ ನಡುಕ

ಬೆಂಗಳೂರು, ಅಕ್ಟೋಬರ್ 28: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಟ್ಟಡ ದುರಂತ ಬೆನ್ನಲ್ಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ( BBMP) ಸರ್ಕಾರ ಸೂಚನೆಯ ಆಧಾರದಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ಸಾರಿದೆ. ನಗರದಲ್ಲಿ ಎಲ್ಲೆಲ್ಲಿ ಅನೃಕೃತವಾಗಿ, ನಿಯಮ ಮೀರಿ ಕಟ್ಟಡಗಳು ನಿರ್ಮಾಣವಾಗಿವೆಯೋ, ನಿರ್ಮಾಣವಾಗುತ್ತಿವೆಯೋ ಅವುಗಳ ಸ್ಯಾಟ್‌ಲೈಟ್‌ ಸರ್ವೇಗೆ ಮುಂದಾಗಿದೆ.

ಹೌದು, ಭಾರೀ ಮಳೆ ಬೆನ್ನಲ್ಲೆ ಇತ್ತೀಚೆಗೆ ನಿಯಮ ಮೀರಿ ಬಾಬುಸಪಾಳ್ಯದಲ್ಲಿ ಎತ್ತರವಾಗಿ ನಿರ್ಮಿಸಿದ್ದ ಕಟ್ಟಡ ಕುಸಿದು ಬಿದ್ದು 9 ಕಾರ್ಮಿಕರು ದುರ್ಮರಣಕ್ಕಿಡಾದರು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ನೀಡಿದ್ದ ಸೂಚನೆ ಬೆನ್ನಲ್ಲೆ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಲ್ಲ ಎಂಟು ವಲಯಗಳಲ್ಲಿಯೂ 03 ಹಂತಗಳಲ್ಲಿ ಸ್ಯಾಟ್‌ಲೈಟ್ ಸಮೀಕ್ಷೆ ಕೈಗೊಳ್ಳಲು ಸಜ್ಜಾಗುತ್ತಿದೆ. ಇದರಿಂದ ನಿಯಮ ಮೀರಿ ಬಹುಮಹಡಿ ಕಟ್ಟಡ, ಇನ್ನಿತರ ಕಟ್ಟಡ ಕಟ್ಟಿದವರಿಗೆ ನಡುಕ ಶುರುವಾಗಿದೆ.

Building Collapse BMMP Will Unauthorized building Satellite Survey will be start From Oct 29th

ಮಂಗಳವಾರದಿಂದ 08 ವಲಯದಲ್ಲಿ ಸ್ಯಾಟ್‌ಲೈಟ್ ಸರ್ವೇ

ಏಕೆಂದರೆ ಬಿಬಿಎಂಪಿಯು ಪೋಟೋ, ವಿಡಿಯೋ, ಸಂಗ್ರಹಿಸುವ ಮೂಲಕ, ಪರವಾನಿಗೆ ಪರಿಶೀಲಿಸಿ, ಜಿಪಿಎಸ್ ಸ್ಯಾಟ್‌ಲೈಟ್ ಆಧಾರದಲ್ಲಿ ಎಲ್ಲ ನಗರದ 08 ವಲಯ ವ್ಯಾಪ್ತಿಯಲ್ಲಿ ಮೂರು ಹಂತಗಳಲ್ಲಿ ಸರ್ವೇಗೆ ಮುಂದಾಗಿದೆ. ವಿಶೇಷವೆಂದರೆ, ಅಕ್ರಮ, ನಿಯಮ ಉಲ್ಲಂಘನೆ, ಅನಧಿಕೃತ ಎಂಬುದು ಗೊತ್ತಾಗುತ್ತಿದ್ದಂತೆ ಕಟ್ಟಡ ಮಾಲೀಕರಿಂದಲೇ ತೆರವು ಕಾರ್ಯ ಮಾಡಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳುವ ಪ್ರಕಾರ, ನಾಳೆ ಮಂಗಳವಾರ ಅಕ್ಟೋಬರ್ 29ರಿಂದಲೇ ದಿನಗಳಲ್ಲಿ ಅನಧಿಕೃತ ಕಟ್ಟಡಗಳ ಮುಂದೆ ಬಿಬಿಎಂಪಿ ಜೆಸಿಬಿಗಳು ಘರ್ಜಿಸಲಿವೆ ಎಂದು ತಿಳಿಸಿದ್ದಾರೆ.

ಮಹದೇವಪುರ ವಲಯ ಅನಧಿಕೃತ ಕಟ್ಟಡ ತೆರವು

ಈಗಾಗಲೇ ಬಿಬಿಎಂಪಿಯು ವಿವಿಧ ವಲಯಗಳಲ್ಲಿ ಅನಧಿಕೃತ ಕಟ್ಟಡ ಹಾಗೂ ರಾಜಕಾಲುವೆ ಇನ್ನಿತರ ಒತ್ತುವರಿ ಜಾಗ ತೆರವು ಮಾಡುತ್ತಿದೆ. ಮಹದೇವಪುರ ವಲಯದ ಹೂಡಿ ಉಪ ವಿಭಾಗದ ಆಲ್ಫಾ ಗಾರ್ಡನ್ ನಲ್ಲಿ ನಿರ್ಮಾಣ ಹಂತದ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿಯ ತೆರವು ಕಾರ್ಯಾಚರಣೆಯನ್ನು ಸೋಮವಾರ (ಅ.28) ಆರಂಬಿಸಲಾಯಿತು.

ಮನವಿ ಮೇರೆಗೆ 10 ದಿನಗಳಲ್ಲಿ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿ ತೆರವುಗೊಳಿಸಲು ಮಾಲೀಕರೇ ಸೂಚಿಸಲಾಗಿದೆ. ಈ ಆಲ್ಫಾ ಗಾರ್ಡನ್ 5ನೇ ಕ್ರಾಸ್ ಸರ್ವೇ ಸಂ. 40 ರಲ್ಲಿ ಸುರೇಶ್ ತಮ್ಮಿನಾ ಮಾಲೀಕತ್ವ 40X60 ಜಾಗದಲ್ಲಿ ನೆಲಮಹಡಿ + 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮೂದನೆ ಪಡೆಯಲಾಗಿತ್ತು. ಆದರೆ ಮಾಲೀಕರು ಹೆಚ್ಚುವರಿಯಾಗಿ 1 ಅಂತಸ್ತನ್ನು ನಿರ್ಮಿಸಿದ್ದು ಕಂಡು ಬಂದಿದೆ ಎಂದು ಪಾಲಿಕೆ ತಿಳಿಸಿದೆ.

ತೆರವು ಕಾರ್ಯಾಚರಣೆಯ ವೇಳೆ ನೆಲಮಹಡಿಯಲ್ಲಿ ಒಂದು ಭಾಗದ ಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಅದರ ಖರ್ಚನ್ನು ಸ್ವತಃ ಮಾಲೀಕರಿಂದಲೇ ಮಾಡಿಸಲಾಗಿದೆ. ವ್ಯತಿರಿಕ್ತ ಭಾಗಗ ತೆರವು ವೇಳೆ ಯಾವುದೇ ಅನಾಹುತಗಳು ಸಂಭವಿಸದಂತೆ 10 ದಿನಗಳ ಒಳಗಾಗಿ ತೆರವುಗೊಳಿಸಲು ಹೇಳಲಾಗಿದೆ ಎಂದು ವಲಯ ಆಯುಕ್ತರು, ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+