ಫ್ಲ್ಯಾಟ್ ಆಸೆ ತೋರಿಸಿ 100 ಕೋಟಿ ವಂಚನೆ ಮಾಡಿದ್ದ ಬಿಲ್ಡರ್ ಬಂಧನ

ಬೆಂಗಳೂರು, ಜನವರಿ 4: ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ಆಸೆ ತೋರಿಸಿ ಹಣ ಲಪಟಾಯಿಸುತ್ತಿದ್ದ ಬಿಲ್ಡರ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಮೂಲದ ಅವಿನಾಶ್ ಪ್ರಭು ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವಿನಾಶ್ 100 ಕೋಟಿ ರೂ ಗೂ ಅಧಿಕ ಹಣ ವಂಚಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಫ್ಲ್ಯಾಟ್‌ ಕೊಡಿಸುವುದಾಗಿ ಆಸೆ ತೋರಿಸಿ ಹಣ ಸಂಗ್ರಹಿಸಿದ್ದ ಆರೋಪಿ ಸ್ಕೈಲೈನ್ ಕನ್‌ಸ್ಟ್ರನ್ ಹೌಸಿಂಗ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೆಶಕ ಅವಿನಾಶ್ ಪ್ರಭು, ಬೆಂಗಳೂರಿನ ವಿವಿಧ ಭಾಗಗಳಲ್ಲಿ 11 ಕಲ್ಮನೆ ಕಾಫಿ ಔಟ್‌ಲೆಟ್‌ಗಳು, ಬೆಂಗಳೂರು, ಮಂಗಳೂರು, ಚೆನ್ನೈ, ಕನಕಪುರ ಸೇರಿ ನಗರದ ಹಲವು ಭಾಗಗಳಲ್ಲಿ ಕೋಟ್ಯಂತರ ರೂ ಮೌಲ್ಯದ ಜಮೀನು ಖರೀಸಿರುವುದು ತನಿಖೆ ವೇಳೆ ಪತ್ತೆಯಾಗಿದೆ.

Builder held for cheating buyers of Rs 100 crore

ಆರೋಪಿ ಅವಿನಾಶ್, ಫ್ಲ್ಯಾಟ್ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಕ್ರಿಸ್ಟೋಫರ್ ರೀಗಲ್ ಎಂಬುವವರು ದೂರು ನೀಡಿದ್ದರು.

ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ವರ್ಗಾವಣೆಯಾದ ಬಳಿಕ ತನಿಖೆ ಚುರುಕುಗೊಳಿಸಿದ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ ತಂಡ, ಆರೋಪಿ ಅವಿನಾಶ್ ಪ್ರಭುವನ್ನು ಬಂಧಿಸಿದೆ. ಜೊತೆಗೆ ಆತನ ಬಳಿಯಿದ್ದ ಒಂದು ರೇಂಜ್ ರೋವರ್, ಅಡಿ ಹಾಗೂ ಇನೋಔಆ ಕಾರನ್ನು ಜಪ್ತಿ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+