Bengaluru Suburban Rail; ಸಬ್ ಅರ್ಬನ್ ರೈಲು ಯೋಜನೆ, ಯಾವ ಮಾರ್ಗದಲ್ಲಿ ಮೊದಲು ಸಂಚಾರ

ಬೆಂಗಳೂರು, ಡಿಸೆಂಬರ್ 07: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಯನ್ನು ಜಾರಿಗೊಳಿಸುತ್ತಿದೆ. 148 ಕಿ. ಮೀ. ಉದ್ದದ ಈ ಯೋಜನೆ ಒಟ್ಟು 4 ಕಾರಿಡಾರ್‌ಗಳನ್ನು ಒಳಗೊಂಡಿದೆ. ಇವುಗಳ ಪೈಕಿ ಎರಡು ಕಾರಿಡಾರ್‌ಗಳ ಕೆಲಸ ಪ್ರಗತಿಯಲ್ಲಿದೆ. ನಗರದಲ್ಲಿ ಸಬ್ ಅರ್ಬನ್ ರೈಲು ಸಂಚಾರ ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಯೋಜನೆಯನ್ನು ಕರ್ನಾಟಕ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಹಂತ ಹಂತವಾಗಿ ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಸಂಚಾರ ಆರಂಭವಾಗಲಿದೆ.

BSRP Will Open Up For Public In December 2026

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಬಿಎಸ್‌ಆರ್‌ಪಿಯ ಎರಡು ಮಾರ್ಗದಲ್ಲಿ ಮೊದಲ ಹಂತದ ಸಂಚಾರ 2027ರಲ್ಲಿ ಆರಂಭವಾಗಲಿದೆ. ಮೂರು ಬೋಗಿಯ ರೈಲು 10 ನಿಮಿಷಗಳ ಅಂತರದಲ್ಲಿ ಸಂಚಾರವನ್ನು ನಡೆಸಲಿವೆ. ಬಳಿಕ ರೈಲು ಸಂಚಾರದ ಅವಧಿಯನ್ನು 5 ನಿಮಿಷಕ್ಕೆ ತರಲಾಗುತ್ತದೆ.

ಯಾವ ಮಾರ್ಗ ಮೊದಲು ಆರಂಭ?; ವರದಿಯ ಪ್ರಕಾರ 2026ರ ಡಿಸೆಂಬರ್‌ನಲ್ಲಿ ಚಿಕ್ಕಬಣಾವರ-ಯಶವಂತಪುರ ನಡುವಿನ 8 ಕಿ. ಮೀ. ಮಾರ್ಗ ಕಾರಿಡಾರ್‌-2 ಸಂಚಾರಕ್ಕೆ ಮುಕ್ತವಾಗಲಿದೆ. ನಾಲ್ಕು ತಿಂಗಳ ಬಳಿಕ ಹೀಗಲಿಗೆ-ಬೆನ್ನಿಗಾನಹಳ್ಳಿ ಕಾರಿಡಾರ್ -4ರ 17 ಕಿ. ಮೀ. ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. 2028ರ ಡಿಸೆಂಬರ್‌ನಿಂದ 2029ರ ಜೂನ್‌ ನಡುವೆ ಬಿಎಸ್ಆರ್‌ಪಿಯ ಎಲ್ಲಾ 148 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸಲಿದೆ.

ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಬಿಎಸ್‌ಆರ್‌ಪಿ ಯೋಜನೆಗೆ 306 ರೈಲು ಬೋಗಿ ಖರೀದಿ ಮಾಡಲು ಒಪ್ಪಿಗೆ ನೀಡಿದೆ. ಕೆ-ರೈಡ್ ಈ ಕುರಿತು ಸರ್ಕಾರದ ಅಧಿಕೃತ ಆದೇಶಕ್ಕೆ ಕಾಯುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಶೇ 50ರಷ್ಟು ಅನುದಾನವನ್ನು ಬೋಗಿಯ ಖರೀದಿಗೆ ನೀಡಲಿವೆ. ಇದಕ್ಕೆ ಸುಮಾರು 4270 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಬೋಗಿ ಖರೀದಿಗೆ ಟೆಂಡರ್ ಕರೆಯಲು ನಾವು ತಯಾರಿ ನಡೆಸಿದ್ದೇವೆ. ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದ ಬಳಿಕ ರೈಲ್ವೆ ಬೋರ್ಡ್‌ಗೆ ಉಳಿದ ಶೇ 50ರಷ್ಟು ಅನುದಾನಕ್ಕಾಗಿ ಪತ್ರವನ್ನು ಬರೆಯಲಾಗುತ್ತದೆ. ಅನುದಾನ ಬಂದ ಬಳಿಕ ಟೆಂಡರ್ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೋಗಿಯನ್ನು ಪೂರೈಸುವ ಕಂಪನಿ 5 ವಿನ್ಯಾಸಗಳನ್ನು ನೀಡಬೇಕಿದೆ. ಕೆ-ರೈಡ್ ಒಂದು ವಿನ್ಯಾಸ ಅಂತಿಮಗೊಳಿಸಲಿದೆ. ಬೆಂಗಳೂರು ಮೆಟ್ರೋ ಮಾದರಿಯಲ್ಲಿ ಮೊದಲು 3 ಬೋಗಿಯ ರೈಲು ಓಡಿಸಲಾಗುತ್ತದೆ ಬಳಿಕ ಇದನ್ನು 6 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ.

ಬಿಎಸ್‌ಆರ್‌ಪಿ ಒಂದು ಕಾರಿಡಾರ್ ಸಂಪೂರ್ಣವಾಗುವ ತನಕ ನಾವು ಕಾಯುವುದಿಲ್ಲ. ಎರಡು ಕಾರಿಡಾರ್‌ನ ಒಂದು ಹಂತ ಕೆಲಸಗಳು ಪೂರ್ಣವಾದಾಗ ರೈಲು ಬೋಗಿಯ ಲಭ್ಯತೆ ನೋಡಿಕೊಂಡು ಸಂಚಾರವನ್ನು ಆರಂಭಿಸುತ್ತೇವೆ. ಮಾರ್ಗ ಸಂಚಾರಕ್ಕೆ ಸಿದ್ಧವಾಗುವ ಹೊತ್ತಿಗೆ 8 ರಿಂದ 10 ಬೋಗಿಗಳು ಆಗಮಿಸುವ ನಿರೀಕ್ಷೆ ಇದೆ.

ಈ ರೈಲು ಬೋಗಿಗಳು ದೆಹಲಿ ಮೆಟ್ರೋ ಮಾದರಿಯಲ್ಲಿ ಇರಲಿವೆ. ಪ್ರತಿ ಬೋಗಿಯಲ್ಲಿ 80 ಸೀಟುಗಳು ಇರಲಿದ್ದು, 300 ಜನರು ಸಂಚಾರ ನಡೆಸಬಹುದು. ಸದ್ಯಕ್ಕೆ ಪ್ರತಿ 10 ನಿಮಿಷಕ್ಕೊಂದು ರೈಲು ಎಂದು ಯೋಜನೆ ರೂಪಿಸಲಾಗಿದೆ. ಬೆಳಗ್ಗೆ 4.30ರಿಂದ ರಾತ್ರಿ 11.30ರ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಕೆ-ರೈಡ್ ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+