'ನಾನು ಮೋದಿಯನ್ನು ಮೀರಿಸುತ್ತಿದ್ದೆ' : ಬಿಎಸ್ವೈ

ಬೆಂಗಳೂರು, ಜು.7: 'ನಾನು ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸಿದ್ದರೆ, ಕರ್ನಾಟಕವನ್ನು ಗುಜರಾತ್‌ಗಿಂತಲೂ ಅಭಿವೃದ್ಧಿ ರಾಜ್ಯವಾಗಿ ಮಾಡುತ್ತಿದ್ದೆ. ನಮ್ಮವರೇ ನನ್ನನ್ನು ಕಾಲು ಎಳೆದಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇಲ್ಲದಿದ್ದರೆ ಅಭಿವೃದ್ಧಿ ವಿಷಯದಲ್ಲಿ ಮೋದಿ ಅವರನ್ನು ಮೀರಿಸುತ್ತಿದೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ವಿಜಯನಗರದಲ್ಲಿ ಕರ್ನಾಟಕ ವೀರಶೈವ ಅಭಿವೃದ್ಧಿ ಸಂಸ್ಥೆಯಿಂದ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸವೇಶ್ವರ ಸುಜ್ಞಾನ ಮಂಟಪ ಹಾಗೂ ಅಲ್ಲಮ ಪ್ರಭು ಆತ್ಮಜ್ಞಾನ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸುಗಳಿದ್ದವು ಎಂದು ಹೇಳಿದರು.

ನನ್ನವರೇ ನನಗೆ ಮುಳ್ಳಾದರು: ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ರೈತರನ್ನೊಳಗೊಂಡ ಸಮಗ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿತ್ತು. ಆದರೆ ಇದನ್ನು ಸಹಿಸದವರು ಪಿತೂರಿ ಮಾಡಿದರು, ನಮ್ಮವರೇ ನನ್ನ ಕಾಲು ಎಳೆದರು. ಹೀಗಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು. ಸಮಾರಂಭದ ಚಿತ್ರಗಳು, ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ ಮಾತುಗಳು ಮುಂದೆ ಇವೆ...

ನನ್ನವರೇ ನನಗೆ ಮುಳ್ಳಾದರು: ಯಡಿಯೂರಪ್ಪ

ನನ್ನವರೇ ನನಗೆ ಮುಳ್ಳಾದರು: ಯಡಿಯೂರಪ್ಪ

ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ರೈತರನ್ನೊಳಗೊಂಡ ಸಮಗ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿತ್ತು. ಆದರೆ ಇದನ್ನು ಸಹಿಸದವರು ಪಿತೂರಿ ಮಾಡಿದರು, ನಮ್ಮವರೇ ನನ್ನ ಕಾಲು ಎಳೆದರು. ಹೀಗಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.

ಬಸವ ತತ್ತ್ವಕ್ಕೆ ಜಾಗತಿಕವಾಗಿ ಪ್ರಚಾರ ಬೇಕು

ಬಸವ ತತ್ತ್ವಕ್ಕೆ ಜಾಗತಿಕವಾಗಿ ಪ್ರಚಾರ ಬೇಕು

'ನಾನು ಮುಖ್ಯಮಂತ್ರಿಯಾಗಿದ್ದಾಗ ಬಸವೇಶ್ವರ ಸಂಶೋಧನಾ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.ಗಳ ಅನುದಾನ ನೀಡಿದ್ದೆ. ಆದರೆ ನಾನು ಅಧಿಕಾರ ಕಳೆದುಕೊಂಡ ನಂತರ ಮುಖ್ಯಮಂತ್ರಿಗಳಾದವರು ಅದನ್ನು ಜಾರಿಗೆ ತರಲಿಲ್ಲ. ಈಗಿನ ಸರ್ಕಾರವೂ ಕೂಡ ನಿರ್ಲಕ್ಷ್ಯತೆ ತೋರುತ್ತಿದೆ. ಸಮಾಜವೂ ಕೂಡ ಇದನ್ನು ಪ್ರಶ್ನಿಸಿಲ್ಲ ಎಂದರು. ಬಸವಣ್ಣನವರ ಚಿಂತನೆ, ಆದರ್ಶಗಳು ಅಧ್ಯಯನಗೊಳ್ಳಬೇಕು, ಜಾಗತಿಕವಾಗಿ ಪ್ರಚಾರ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ವರುಣನ ಕೃಪೆಗಾಗಿ ಎಲ್ಲರೂ ಪ್ರಾರ್ಥಿಸೋಣ

ವರುಣನ ಕೃಪೆಗಾಗಿ ಎಲ್ಲರೂ ಪ್ರಾರ್ಥಿಸೋಣ

ದೇಶದಲ್ಲೇ ಬರದ ಪರಿಸ್ಥಿತಿ ಇದೆ. ದೇವರ ಕೃಪೆಯಿಂದ ಮಳೆ ಬಾರದಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ವರುಣನ ಕೃಪೆಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದ ಅವರು, ಇನ್ನು ಮುಂದೆ ನಾನು ರಾಜಕೀಯ ಚರ್ಚೆ ಮಾಡುವುದಿಲ್ಲ. ನರೇಂದ್ರ ಮೋದಿ ಅವರ ಜೊತೆ ಕೈ ಜೋಡಿಸಿ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂದರು.

ಬಸವಣ್ಣನವರು ಅನುಭವ ಮಂಟಪ ಮೊದಲ ಸಂಸತ್

ಬಸವಣ್ಣನವರು ಅನುಭವ ಮಂಟಪ ಮೊದಲ ಸಂಸತ್

ಸಂಸದ ಅನಂತ್‌ಕುಮಾರ್ ಮಾತನಾಡಿ, ಇಂಗ್ಲೆಂಡ್‌ನ ಸಂಸತ್ ವಿಶ್ವದಲ್ಲೇ ಮೊದಲ ಸಂಸತ್ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕಿಂತಲೂ ಮೊದಲು ಬಸವಣ್ಣನವರು ಅನುಭವ ಮಂಟಪವನ್ನು ಜಾರಿಗೆ ತಂದಿದ್ದರು. ಇದು ಜಗತ್ತಿನಲ್ಲೇ ಮೊಟ್ಟಮೊದಲ ಸಂಸತ್ ಎಂದು ಅಭಿಪ್ರಾಯಪಟ್ಟರು. ರಾಜಕೀಯ ಸಂಸತ್‌ಗಿಂತಲೂ ಸಮಗ್ರ ಚಿಂತನೆಗಳನ್ನೊಳಗೊಂಡ ಅನುಭವ ಮಂಟಪವನ್ನು ಸ್ಥಾಪಿಸಿದ ಬಸವಣ್ಣನವರ ಪ್ರಯತ್ನಗಳು ವಿಶ್ವಮಾನ್ಯತೆ ಪಡೆದಿವೆ ಎಂದರು.

ಇಂಗ್ಲೆಂಡ್‌ನ ಥೇಮ್ಸ್ ನದಿಯ ಪಕ್ಕದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸಮಾರಂಭದ ಬಗ್ಗೆ ಟ್ವೀಟ್ ಮಾಡಿದ ಬಿಎಸ್ ವೈ

ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಮಾಜಿ ಸಚಿವ ಸೋಮಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಮಾರಂಭದ ಬಗ್ಗೆ ಟ್ವೀಟ್ ಮಾಡಿದ ಬಿಎಸ್ ಯಡಿಯೂರಪ್ಪ. ಈ ಚಿತ್ರಸರಣಿಯ ಚಿತ್ರಗಳು ಎಚ್.ಎನ್ ಅನಂತಕುಮಾರ್ ಅವರ ಫೇಸ್ ಬುಕ್ ನಿಂದ ಹೆಕ್ಕಿದ್ದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+