ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರಿಗೆ ಬಂದು ಅಡ್ವಾಣಿ ಮರೆತ ಬಿಎಸ್ ವೈ

By Mahesh
|
Google Oneindia Kannada News

ಬೆಂಗಳೂರು, ಫೆ.17: ಕರ್ನಾಟಕದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೊನೆಗೂ ಟ್ವಿಟ್ಟರ್ ಹಕ್ಕಿ ಬೆನ್ನು ಬಿದ್ದಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳ ಮಹತ್ವದ ಪಾತ್ರದ ಬಗ್ಗೆ ಬೂಕನಕೆರೆಯ 'ರೈತ ಪುತ್ರ' ಯಡಿಯೂರಪ್ಪ ಅವರಿಗೆ ಅರಿವು ಮೂಡಿದೆ. ಮೂರು ಟ್ವೀಟ್ ಮಾಡಿರುವ ಬಿಎಸ್ ವೈ ಹಿಂಬಾಲಕರ ಸಂಖ್ಯೆ ನಿಧಾನಗತಿಯಿಂದ ಏರಿಕೆ ಕಾಣುತ್ತಿದೆ. ಆದರೆ, ಬಿಎಸ್ ವೈ ಟ್ವಿಟ್ಟರಿಗೆ ಬಂದ್ರು ಅಡ್ವಾಣಿ ವಿರುದ್ಧ ಮುನಿಸು ಮುಂದುವರೆಸಿದಂತೆ ಕಾಣುತ್ತದೆ.

ಸುಮಾರು 34 ಟ್ವೀಟ್ ಖಾತೆಗಳನ್ನು ಫಾಲೋ ಮಾಡುತ್ತಿರುವ ಬಿಎಸ್ ಯಡಿಯೂರಪ್ಪ(@BSYBJP) ಅವರು ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನು ಫಾಲೋ ಮಾಡುವುದನ್ನು ಹೇಗೆ ಮರೆತರು? ಅಥವಾ ಇದು ಜಾಣ ಮರೆವೇ? ಅಡ್ವಾಣಿ ಅವರ ರಾಜಕೀಯ ಅನುಭವದ ಜತೆಗೆ ಯಡಿಯೂರಪ್ಪ ಅವರಿಗೆ ತಂತ್ರಜ್ಞಾನದ ಪಾಠವೂ ಅಡ್ವಾಣಿ ಅವರಿಂದ ಸಿಗುತ್ತಿತ್ತು. ಕಾರಣ, ಅಡ್ವಾಣಿ ಒಬ್ಬ ಉತ್ತಮ ಬ್ಲಾಗರ್ ಎಂಬುದನ್ನು ಮರೆಯುವಂತಿಲ್ಲ.

BS Yeddyurappa joins a new group and his followers shoot up

ಇನ್ನೂ ತಮಾಷೆ ಸಂಗತಿ ಎಂದರೆ ಯಡಿಯೂರಪ್ಪ ಅವರ ರಾಜಕೀಯ ಎದುರಾಳಿ ಅಥವಾ ಸಮಬಲ ನಾಯಕ ಎಂದೇ ಬಿಂಬಿತರಾಗಿರುವ ಅನಂತಕುಮಾರ್ ಅವರ ಅಕೌಂಟ್ ಅನ್ನು ಯಡಿಯೂರಪ್ಪ ಫಾಲೋ ಮಾಡುತ್ತಿದ್ದಾರೆ. ಆದರೆ, ಈ ಭಾಗ್ಯ ಅಡ್ವಾಣಿ ಅವರ (@LKAdvaniBJP) ಟ್ವೀಟ್ ಖಾತೆಗೆ ಸಿಕ್ಕಿಲ್ಲ.

ಅಡ್ವಾಣಿ ಅವರ ಟ್ವೀಟ್ ಖಾತೆ ಇನ್ನೂ ಪರಿಶೀಲನೆಗೆ ಒಳಪಟ್ಟಿಲ್ಲ. ಅದು ಫೇಕ್ ಖಾತೆ ಇರಬಹುದು ಹೀಗಾಗಿ ಅದನ್ನು ಫಾಲೋ ಮಾಡುತ್ತಿಲ್ಲ ಎಂದು ಯಡಿಯೂರಪ್ಪ ಅವರ ಖಾತೆ ನಿರ್ವಾಹಕರು ಸಮರ್ಥಿಸಿಕೊಂಡರೂ ಯಡಿಯೂರಪ್ಪ ಅವರು ಫಾಲೋ ಮಾಡುತ್ತಿರುವ ಜನಪ್ರಿಯ ದೈನಿಕದ ಸಂಪಾದಕರು ಹಾಗೂ ಉತ್ತಮ ಭಾಷಣಗಾರರೊಬ್ಬರ ಟ್ವೀಟ್ ಖಾತೆಗಳಿಗೂ ಅಧಿಕೃತ ಮುದ್ರೆಗಳು ಬಿದ್ದಿಲ್ಲ. ಅಷ್ಟೇಕೆ ಬಿಜೆಪಿ ಕರ್ನಾಟಕ ಟ್ವೀಟ್ ಖಾತೆಗೂ ಅಧಿಕೃತ ಮಾನ್ಯತೆ ಸಿಕ್ಕಿಲ್ಲ.

ಒಟ್ಟಾರೆ ಸಾಮಾಜಿಕ ಜಾಲ ತಾಣಗಳಿಗೆ ಬಂದಿರುವ ಯಡಿಯೂರಪ್ಪ ಅವರಿಗೆ ಎಲ್ಲಾ ಸ್ತರದ ಹಿಂಬಾಲಕರು ಸಿಗುತ್ತಿದ್ದಾರೆ. ವಿದ್ಯಾರ್ಥಿಗಳು, ಯುವಕರು, ರಾಜಕೀಯ ಆಸಕ್ತಿಯುಳ್ಳವರು ಅವರ ಅಭಿಮಾನಿಗಳು ಯಡಿಯೂರಪ್ಪ ಅವರನ್ನು ಸ್ವಾಗತಿಸಿದ್ದಾರೆ. ಮುಂಬರುವ ದಿನಗಳಲ್ಲಿ ಯಡಿಯೂರಪ್ಪ ಅವರ ಟ್ವೀಟ್ಸ್ ಗಳು ಯಾವ ರೀತಿ ಇರುತ್ತದೆ 140 ಕ್ಯಾರೆಕ್ಟರ್ ಗಳಲ್ಲಿ ಯಾವ ರೀತಿ ಭಾವನೆಗಳನ್ನು ತುಂಬಿ ಜನರಿಗೆ ಹತ್ತಿರರಾಗುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ. ಅಂದ ಹಾಗೆ, ಓದುಗರು ನಮ್ಮ ಟ್ವೀಟ್ (@OneindiaKannada) ಐಡಿ ಫಾಲೋ ಮಾಡುತ್ತಾ ಕಾಲಕಾಲಕ್ಕೆ ಅಪ್ಡೇಟ್ ಪಡೆಯುವುದನ್ನು ಮುಂದುವರೆಸಿ..

English summary
Former Karnataka chief minister and BJP leader BS Yeddyurappa joined social networking website Twitter on Sunday. While he announced his arrival on Twitter in his first tweet, he spoke about his visit to northern Karnataka and first public meeting with Modi. But BSY is yet to follow LK Advani
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X