ಕರಗ ಪೇಟೆ ಕರಗ ಮಹೋತ್ಸವಕ್ಕೆ ಬಿಎಸ್‌ವೈ ಚಾಲನೆ

ನಗರದ ನಗರದ ಬಿನ್ನಿಮಿಲ್ ರಸ್ತೆಯಲ್ಲಿರುವ ಅಂಗಳಪರಮೇಶ್ವರಿ ಕಾಳಿಕ ದೇವಾಲಯದಲ್ಲಿ ಶಿವರಾತ್ತಿ ಸಂಭ್ರಮದ ನಡುವೆ 41ನೇ ವರ್ಷದ ಪೇಟೆ ಕರಗ ಮಹೋತ್ಸವಕ್ಕೆ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅದ್ದೂರಿ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು ಇದೇ ಮೊದಲ ಬಾರಿಗೆ ಅಂಗಳಪರಮೆಶ್ವರಿ ದರ್ಶನ ಭಾಗ್ಯ ಲಭಿಸಿದ್ದು ದೇವಿಯ ದರ್ಶನದಿಂದ ಧನ್ಯನಾಗಿದ್ದೇನೆ. ರಾಜ್ಯದಲ್ಲಿ ಮಳೆ ಬೆಳೆ ಸುಭೀಕ್ಷವಾಗಿ ಆಗಲಿ ಮತ್ತು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ಶಕ್ತಿ ನೀಡೆದು ಕೇಳಿಕೊಂಡಿರುವುದಾಗಿ ತಿಳಿಸಿದರು. ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಆರ್ಶೀವಾದದಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ತಾಯಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಎಂ. ಬಿ. ಶಿವಪ್ಪ ನೇತೃತ್ವದಲ್ಲಿ ನಡೆಯುತ್ತೀರುವ ಕರಗ ಮಹೋತ್ಸವವು ಕಾಳಿ ದೇವಿಯ ಮೆರವಣಿಗೆಯೊಂದಿಗೆ ಆರಂಭವಾಗಿದೆ. ಕರಗ ಹೋತ್ತು ನಡೆಯುತ್ತೀರುವ ಕಾಳಿ ಮೆರವಣಿಗೆಯು ಶ್ರೀರಾಮಪುರದ ರುದ್ರ ಭೂಮಿಯಲ್ಲಿ ಮಹಿಷಾಸುರ ಸಂಹಾರ ಮಾಡಿ ತದನಂತರ ದೇವಾಲಯಕ್ಕೆ ವಾಪಸ್ಸಾಗುವ ಮುನ್ನ ಅಗ್ನಿ ಪ್ರವೇಶ ಮಾಡಲಿದೆ.

BS Yeddyurappa flags for karaga fest in Karagapet

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಎಂ. ಬಿ. ಶಿವಪ್ಪ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+