ಮಹಿಳೆ ಮೇಲೆ ಆಕೆಯ ಮೈದುನರಿಂದ ಅತ್ಯಾಚಾರಕ್ಕೆ ಯತ್ನ: ಪೊಲೀಸ್ ದೂರು
ಬೆಂಗಳೂರು, ಫೆ. 07: ಮಹಿಳೆ ಮೇಲೆ ಆಕೆ ಪತಿಯೇ ಇಬ್ಬರು ಸಹೋದರರನ್ನು ಬಿಟ್ಟು ಅತ್ಯಾಚಾರ ಮಾಡಿಸಲು ಪ್ರಚೋದನೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತನ್ನ ಪತಿಯ ಮಾತು ಕೇಳಿ ಇಬ್ಬರು ಮೈದುನರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2007 ರಲ್ಲಿ ಅಬ್ದುಲ್ ನಬಿ ಎಂಬಾತನೊಂದಿಗೆ ಸಂತ್ರಸ್ತ ಮಹಿಳೆ ಮದುವೆಯಾಗಿದ್ದರು. ಮಗುವಿಗೆ ಜನ್ಮ ಕೊಡಲೆಂದು ತವರು ಮನೆಗೆ ಹೋಗಿದ್ದಳು. ಮಗು ಜನಿಸಿದ ಬಳಿಕ ಐದು ಲಕ್ಷ ರೂಪಾಯಿ ಹಣದೊಂದಿಗೆ ಮನೆಗೆ ಬರುವಂತೆ ಅಬಿ ಪತ್ನಿಗೆ ಬೇಡಿಕೆ ಇಟ್ಟಿದ್ದಾನೆ. ಹಣ ತರಲು ನಿರಾಕರಿಸಿದ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಹೀಗಾಗಿ ಕಳೆದ ಎರಡು ವರ್ಷದಿಂದ ಸಂತ್ರಸ್ತ ಮಹಿಳೆ ತನ್ನ ತವರು ಮನೆಯಲ್ಲಿದ್ದಳು.

ಎರಡು ತಿಂಗಳ ಹಿಂದೆ ನಬಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆಯಾಗಿದ್ದಾನೆ. ಈ ವಿಷಯ ತಿಳಿದ ಸಂತ್ರಸ್ತ ಮಹಿಳೆ ಪತಿಯ ಮನೆಗೆ ಹೋಗಿ ಪ್ರಶ್ನಿಸಿದ್ದಾಳೆ. ಈ ವೇಳೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ತನ್ನ ಇಬ್ಬರು ಸಹೋದರರನ್ನು ಅತ್ಯಾಚಾರ ಮಾಡುವಂತೆ ಪ್ರೇರಪಿಸಿದ್ದಾನೆ. ಸಂತ್ರಸ್ತ ಮಹಿಳೆ ಪತಿಯ ಮಾತು ಕೇಳಿ ಆಕೆಯ ಮೈದುನರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದರಿಂದ ನೊಂದ ಮಹಿಳೆ ಇದೀಗ ನ್ಯಾಯ ಕೋರಿ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.












Click it and Unblock the Notifications