ಜಯನಗರದ ಜನಾನುರಾಗಿ ಶಾಸಕ ಬಿಎನ್ ವಿಜಯ್ ಕುಮಾರ್
Recommended Video

ಹೃದಯಾಘಾತದಿಂದ ಇಂದು(ಮೇ 04) ಬೆಳಿಗ್ಗಿನ ಜಾವ 1 ಗಂಟೆಗೆ ಅಕಾಲಿಕ ಮರಣ
ಹೊಂದಿದ ಜಯನಗರ ಬಿಜೆಪಿ ಶಾಸಕ ವಿಜಯ ಕುಮಾರ್ ಒಬ್ಬ ಸರಳ ಸಜ್ಜನ, ರಾಜಕಾರಣಿ ಎಂದೇ ಹೆಸರಾಗಿದ್ದವರು.
ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯಕುಮಾರ್ ಅವರು ನಿನ್ನೆ(ಮೇ 03) ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.
ಜಯನಗರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಯಾವ ವಿವಾದವನ್ನೂ ತಮ್ಮತ್ತ ಸುತ್ತಿಸಿಕೊಳ್ಳದ, ನಿರ್ವಿವಾದ ನಾಯಕ. ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

* 1958 ರಲ್ಲಿ ಬೆಂಗಳೂರಿನಲ್ಲಿ ಜನನ.
* ಬ್ರಾಹ್ಮಣ ಕುಟುಂಬದಲ್ಲಿ ಜನನ.
* ದಿ.ಪಿ ಎನ್ ನಾರಾಯಣ್ ಹಾಗೂ ಶಂಕ್ರಮ್ಮ ದಂಪತಿಗಳ 4 ನೇ ಪುತ್ರ.
* ತಂದೆ ಪಿಎನ್ ನಾರಾಯಣ್ ಮಾಗಡಿಯ ಬಾನ್ವಾಡಿಯವರು, ಬಿಎಚ್ ಇಎಲ್ ಕೆಲಸ ಮಾಡುತ್ತಿದ್ದವರು.
* ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ವಿಜಯ್ ಕುಮಾರ್.
* ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ಕುಟುಂಬ.
ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ
* ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ವಿಜಯ್ ಕುಮಾರ್.
* 1990 ರಲ್ಲಿ ಬಿಜೆಪಿ ಪಕ್ಷಕ್ಕೆ ಪಾದಾರ್ಪಣೆ.
* ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸೇವೆ.
* 2008 ರಲ್ಲಿ ಮೊದಲ ಬಾರಿಗೆ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಜಯ.
* 2013 ರಲ್ಲೂ ಎರಡನೇ ಬಾರಿ ಶಾಸಕರಾಗಿ ಆಯ್ಕೆ.
** ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು.












Click it and Unblock the Notifications