ಕನ್ನಡಿಗರೇ ಎಚ್ಚರ.. ಎಚ್ಚರ.. ಮೆದುಳು ತಿನ್ನುವ ಹುಳು ಬಂದಿದೆ ಎಚ್ಚರ... Health Alert
ಭೂಮಿ ಮೇಲೆ ಮನುಷ್ಯರು ಸರ್ವನಾಶ ಆಗಿ ಹೋಗುವಂತೆ ಹೊಸದಾಗಿ ಏನೇನೋ ರೋಗಗಳು ಬರುತ್ತಿವೆ. ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ರೋಗಗಳು & ಕಾಯಿಲೆಗಳು ಮನುಷ್ಯರ ನಾಶಕ್ಕೆ ಮುನ್ನುಡಿ ಬರೆಯುತ್ತಿರುವ ಆರೋಪ ಕೇಳಿ ಬರುತ್ತಿದೆ. ಇಂತಹ ಪರಿಸ್ಥಿತಿ ಎದುರಾಗಿರುವ ಸಮಯದಲ್ಲೇ ದಿಢೀರ್ ಕರ್ನಾಟಕ ಸೇರಿದಂತೆ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಅಪ್ಪಳಿಸಿದ ಸಮಯದಲ್ಲಿ ಕೋಟಿ ಕೋಟಿ ಜನರು ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದರು. ಹೀಗಿದ್ದಾಗಲೇ, ಕನ್ನಡಿಗರೇ ಎಚ್ಚರ.. ಎಚ್ಚರ.. ಮೆದುಳು ತಿನ್ನುವ ಹುಳು ಬಂದಿದೆ ಎಚ್ಚರ...
ಹೌದು, ಜಗತ್ತಿನಲ್ಲಿ ವಿಚಿತ್ರ ವಿಚಿತ್ರ ರೋಗಗಳು ಆವರಿಸುತ್ತಿವೆ. ಈ ರೀತಿಯಾಗಿ ಎದುರಾಗುತ್ತಿರುವ ವಿಚಿತ್ರ ರೋಗಗಳ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಕೂಡ ಇದೆ. ಮತ್ತೊಂದು ಕಡೆ ದಿಢೀರ್ ಅಂತಾ ಇನ್ನೊಂದು ಮಹಾಮಾರಿ ಭಯ ಶುರುವಾಗಿದೆ. ಅಂದಹಾಗೆ ನಮ್ಮ ಮೆದುಳು ಒಳಗೆ ಸೇರಿ, ನಮ್ಮ ಅರಿವಿಗೆ ಬರದ ರೀತಿಯಾಗಿ ನಮ್ಮ ಮೆದುಳನ್ನು ತಿಂದು ಹಾಕುವ ವಿಚಿತ್ರ ಅಮೀಬಾ ಅಂದ್ರೆ ಏಕಕೋಶ ಜೀವಿ ಒಂದು ಇದೀಗ ಭಾರತಕ್ಕೂ ಎಂಟ್ರಿ ಕೊಟ್ಟಿದೆ. ಇದರ ಭಯ ಇದೀಗ ಹೆಚ್ಚಾಗಿದ್ದು, ಜನ ಸಾವಿರ ಬಾರಿ ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ಇದೀಗ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ.

ನಾಗ್ಲೆರಿಯಾ ಫೌಲೆರಿ ಹಾವಳಿ ಜೋರಾಯ್ತು...
'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುವ ವಿಚಿತ್ರವಾದ ಜೀವಿ ಕಳೆದ ಕೆಲವು ತಿಂಗಳಿಂದ ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ದೊಡ್ಡ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿದೆ. ಹೀಗಿದ್ದಾಗ 'ನಾಗ್ಲೆರಿಯಾ ಫೌಲೆರಿ' ಹಾವಳಿ ಕಾರಣಕ್ಕೆ ಕೇರಳದಲ್ಲಿ ಜನರು ಬೆಚ್ಚಿಬಿದ್ದಿದ್ದಾರೆ. ಇಂತಹ ಸಮಯದಲ್ಲೇ ಕರ್ನಾಟಕ ಮೂಲದ ಭಕ್ತರು ಇದೀಗ ಕೇರಳಗೆ ಹೋಗಿ ಶಬರಿಮಲೆ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲೇ ಕೇರಳಗೆ ಹೋಗುವ ಕನ್ನಡಿಗರಿಗೆ ವಿಶೇಷ ಸಂದೇಶ ರವಾನಿಸಲಾಗಿದ್ದು, ಮೆದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಹಾಗಾದರೆ ಈ ಮೆದುಳು ತಿನ್ನುವ ಅಮೀಬಾ ಮನುಷ್ಯನ ದೇಹಕ್ಕೆ ಸೇರುವುದು ಹೇಗೆ?
ಮೆದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರಿಕೆ
ಅಷ್ಟಕ್ಕು ನಾಗ್ಲೆರಿಯಾ ಫೌಲೆರಿ ಎಂಬ ವೈಜ್ಞಾನಿಕ ಹೆಸರು ಇರುವ ಮೆದುಳು ತಿನ್ನುವ ವೈರಸ್ ಏಕ ಕೋಶ ಜೀವಿ ಆಗಿದೆ. ಇದೇ ಕಾರಣಕ್ಕೆ ಇದನ್ನು ಅಮೀಬಾ ಎಂದು ಕರೆಯಲಾಗುತ್ತದೆ. ಮನುಷ್ಯರ ಮೆದುಳು ಮೇಲೆ ನೇರವಾಗಿ ಇದು ದಾಳಿ ಮಾಡುತ್ತದೆ. ಮೊದಲು ಮನುಷ್ಯನ ಮೂಗಿನ ಒಳಗಡೆ ಪ್ರವೇಶ ಮಾಡುವ ವೈರಸ್, ಅಲ್ಲಿಂದ ನೇರ ಮೆದುಳು ಸೇರಿ ನಂತರ ಬೆನ್ನುಹುರಿಗೂ ನುಸುಳುತ್ತದೆ. ಹೀಗೆ ಮೆದುಳು ಸೇರಿದ ವೈರಸ್ ಮನುಷ್ಯನ ಮೆದುಳನ್ನ ತಿನ್ನಲು ಪ್ರಾರಂಭಿಸಿ, ಕೊನೆಗೆ ಜೀವವನ್ನೂ ತೆಗೆಯುತ್ತದೆ. ಹೀಗಾಗಿಯೇ ಈ ಮೆದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.












Click it and Unblock the Notifications