• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು : ಕಾಲ್ ಸೆಂಟರ್ ಉದ್ಯೋಗಿ ಮೇಲೆ ಗ್ಯಾಂಗ್ ರೇಪ್

|

ಬೆಂಗಳೂರು, ಅಕ್ಟೋಬರ್ 06 : ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.

ಅಕ್ಟೋಬರ್ 3ರ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಎರಡು ದಿನದಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯನ್ನು ಸೋಮವಾರ ಡಿಸ್‌ಜಾರ್ಜ್ ಮಾಡಲಾಗಿದೆ. ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಘಟನೆ ಕುರಿತು ಸೋಮವಾರ ಹೇಳಿಕೆ ನೀಡಿದ್ದಾಳೆ. [ಕುಂದಾಪುರದಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ]

ಟೆಂಪೋ ಟ್ರಾವೆಲರ್‌ನಲ್ಲಿದ್ದ ಪಾನಮತ್ತ ಚಾಲಕ ಮತ್ತು ಕ್ಲೀನರ್ 22 ವರ್ಷದ ಯುವತಿ ಮೇಲೆ ವಾಹನದಲ್ಲೇ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ನಂತರ ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆ ಹಾಕಿ, ಮಡಿವಾಳ ಪೊಲೀಸ್ ಠಾಣೆ ಸಮೀಪದ ಬಸ್ ನಿಲ್ದಾಣದ ಬಳಿ ಆಕೆಯನ್ನು ರಸ್ತೆಗೆ ತಳ್ಳಿ ಪರಾರಿಯಾಗಿದ್ದಾರೆ.[ನಿರ್ಭಯ ದೆಹಲಿ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಡಬಲ್ ಶಿಕ್ಷೆ]

ಮೂರು ವಿಶೇಷ ತಂಡ ರಚನೆ : ಅತ್ಯಾಚಾರ ನಡೆಸಿದ ಆರೋಪಿಗಳನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ವಾಹನದ ನೋಂದಣಿ ಸಂಖ್ಯೆಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದ್ದಾಗ..]

ಘಟನೆ ವಿವರ : ಅತ್ಯಾಚಾರಕ್ಕೊಳಗಾದ ಯುವತಿ ಮಧ್ಯಪ್ರದೇಶ ಮೂಲದವಳು ಎಂದು ತಿಳಿದುಬಂದಿದ್ದು, ಎಲೆಕ್ಟ್ರಾನಿಕ್ ಸಿಟಿ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೊಮ್ಮನಹಳ್ಳಿಯಲ್ಲಿ ಗೆಳತಿಯರ ಜೊತೆ ವಾಸವಾಗಿದ್ದ ಯುವತಿ ಅಕ್ಟೋಬರ್ 3ರ ಶನಿವಾರ ರಾತ್ರಿ ದೊಮ್ಮಲೂರಿನ ಹೋಟೆಲ್‌ಗೆ ಊಟಕ್ಕೆಂದು ತೆರಳಿದ್ದರು.

ಊಟ ಮುಗಿಸಿಕೊಂಡು ಸ್ನೇಹಿತನ ಬೈಕ್‌ನಲ್ಲಿ ಮಡಿವಾಳದ ಅಯ್ಯಪ್ಪಸ್ವಾಮಿ ದೇವಾಲಯದ ಬಸ್ ನಿಲ್ದಾಣಕ್ಕೆ ರಾತ್ರಿ 10 ಗಂಟೆ ಸುಮಾರಿಗೆ ಡ್ರಾಪ್ ಪಡೆದಿದ್ದಾರೆ. ಈ ವೇಳೆ ಬಸ್ ನಿಲ್ದಾಣದಲ್ಲಿ ಕೆಲವು ಜನರಿದ್ದರು. ಆಗ ಅಲ್ಲಿಗೆ ಟಿಟಿ (ಟೆಂಪೋ ಟ್ರಾವೆಲರ್) ವಾಹನ ಬಂದಿದ್ದು, ಕ್ಲೀನರ್ ಬೊಮ್ಮನಹಳ್ಳಿ, ಹೊಸೂರು ರಸ್ತೆ ಕಡೆಗೆ ಹೋಗುವುದಾಗಿ ಕೂಗಿದ್ದಾನೆ.

ಡ್ರಾಪ್ ಕೊಟ್ಟ ಸ್ನೇಹಿತನ ಮುಂದೆಯೇ ಯುವತಿ ಟಿಟಿ ಹತ್ತಿದ್ದಾಳೆ. ಬಳಿಕ ಸ್ನೇಹಿತ ಹೊರಟು ಹೋಗಿದ್ದಾನೆ. ಯುವತಿ ಟಿಟಿ ಹತ್ತಿದಾಗ ಅದರಲ್ಲಿ ಚಾಲಕ ಮತ್ತು ಕ್ಲೀನರ್ ಮಾತ್ರ ಇದ್ದರು. ವಾಹನ ಸ್ವಲ್ಪ ದೂರ ಚಲಿಸಿದ ಬಳಿಕ, ಚಾಲಕ ಮಾರ್ಗ ಬದಲಾವಣೆ ಮಾಡಿದ್ದಾನೆ. ಆಗ ಗಾಬರಿಗೊಂಡ ಆಕೆ ಟಿಟಿ ನಿಲ್ಲಿಸಿ ನಾನು ಇಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

ಆಗ ಯುವತಿಗೆ ಚಾಕು ತೋರಿಸಿ ಬೆದರಿಸಿದ ಕ್ಲೀನರ್ ಆಕೆಯನ್ನು ಟಿಟಿಯ ಹಿಂಬದಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ದುಪ್ಪಟದಿಂದ ಆಕೆಯನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ನಡೆಸಿದ್ದಾನೆ. ದೊಮ್ಮಲೂರು ಸಮೀಪ ಅಜ್ಞಾತ ಸ್ಥಳಕ್ಕೆ ವಾಹನ ತಂದು ನಿಲ್ಲಿಸಿದ ಚಾಲಕ ನಂತರ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BPO employee was allegedly gang-raped by two men in Bengaluru, Madiwala police station limits on October 3, Saturday night. The woman who is from Madhya Pradesh, was waiting for transport to return home at around 10 PM when two men stopped their vehicle and offered to drop her to her destination. They took her to a deserted spot, raped her and then dropped her back in Madiwala area.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more