ಹೊಸವರ್ಷದಂದು ಕಾಣೆಯಾಗಿದ್ದ ಬಾಲಕ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ
ಬೆಂಗಳೂರು, ಜನವರಿ 5: ಹೊಸ ವರ್ಷದಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದದ ನಾಲ್ಕು ವರ್ಷದ ಬಾಲಕ ಮನೆಯಿಂದ 300 ಮೀ ದೂರದಲ್ಲಿರುವ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಹೊಸಕೋಟೆಯ ದೊಡ್ಡದುಣ್ಣ ಸಂದ್ರದ ಅನುಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ಗುರುವಾರ ಮನೆಯ ಹತ್ತಿರದಲ್ಲಿರುವ ನೀಲಗಿರಿ ತೋಪಿನಲ್ಲಿ ಶವ ಪತ್ತೆಯಾಗಿದ್ದು ಆದರೆ ಶವದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ಬಾಲಕ(ರೀನ್ಸ್) ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಪೋಸ್ಟ್‌ಮಾರ್ಟಮ್ ಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಬಾಲಕನ ತಂದೆ ಸಿಬೇಶ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಿಬೇಶ್ ಮೂಲತಃ ಜಾರ್ಖಂಡ್‌ನವರಾಗಿದ್ದು, ಹೆಂಡತಿ ರಾಜಾಮುನಿ ದೇವಿ, ಮಗ ರೀನ್ಸ್ ಜೊತೆಗೆ ವಾಸವಾಗಿದ್ದರು. ಆನ್‌ಲೈನ್ ಮಾರ್ಕೆಟಿಂಗ್ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಹೊಸ ವರ್ಷದಂದು ಸಂಜೆ 6.30ರಿಂದ ರೀನ್ಸ್ ನಾಪತ್ತೆಯಾಗಿದ್ದ, ಎಲ್ಲೋ ಕೊಲೆ ಮಾಡಿ ಬಳಿಕ ನೀಲಗಿರಿ ತೋಪಿನಲ್ಲಿ ಎಸೆದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.











Click it and Unblock the Notifications