ಬೊಮ್ಮನಹಳ್ಳಿ ಚುನಾವಣಾ ಫಲಿತಾಂಶ 2023: ಉಮಾಪತಿ ಗೌಡ ವಿರುದ್ಧ ಗೆದ್ದು ಬೀಗಿದ ಸತೀಶ್ ರೆಡ್ಡಿ
ಬೆಂಗಳೂರು, ಮೇ 13: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸತೀಶ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ ವಿರುದ್ಧ 14225 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸತೀಶ್ ರೆಡ್ಡಿ 79340 ಮತಗಳನ್ನು ಗಳಿಸಿದರೆ, 65115 ಮತಗಳನ್ನು ಗಳಿಸಿದ್ದಾರೆ.
ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿಯ ಸತೀಶ್ ರೆಡ್ಡಿ ನಾಲ್ಕನೇ ಬಾರಿಗೂ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ. ಬೇಗೂರು ಜಿಲ್ಲಾ ಪಂಚಾಯಿತಿ ಹಾಗೂ ಬೊಮ್ಮನಹಳ್ಳಿ ನಗರಸಭೆ ಸದಸ್ಯನಾಗಿದ್ದ ಅವರು ರಾಜಕೀಯ ಪಟ್ಟುಗಳನ್ನು ಕಲಿತ ಬಳಿಕ 2008ರಲ್ಲಿ ಇಲ್ಲಿಂದ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸೌಧಕ್ಕೆ ಪ್ರವೇಶ ಪಡೆದುಕೊಂಡಿದ್ದರು.

ಜನ ಈ ಬಾರಿಯೂ ಬಿಜೆಪಿಗೆ ಬಹುಪರಾಕ್ ಹೇಳಿದ್ದಾರೆ. 2018ರ ಚುನಾವಣೆ ಯಲ್ಲಿ ಶಾಸಕ ಸತೀಶ್ ರೆಡ್ಡಿ 1,11,863 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಯಾ ಸುಷ್ಮಾ ರಾಜಗೋಪಾಲ ರೆಡ್ಡಿ (64,701) ಅವರನ್ನು 47,162 ಮತಗಳ ಅಂತರದಿಂದ ಮಣಿಸಿದ್ದರು. ಜೆಡಿಎಸ್‌ನ ಟಿ ಆರ್ ಪ್ರಸಾದ್ 9,379 ಮತಗಳನ್ನು, ಪಿಪಿಪಿಯ ಸೋಮಶೇಖರ್ 2,142 ಮತಗಳನ್ನು ಪಡೆದಿದ್ದರು.
ಈ ಬಾರಿ ಕಾಂಗ್ರೆಸ್ ನಿರ್ಮಾಪರ, ಉದ್ಯಮಿ ಉಮಾಪತಿ ಗೌಡ ಅವರನ್ನು ಕಣಕ್ಕಿಳಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಒಕ್ಕಲಿಗರ ಮತಗಳನ್ನು ಸೆಳೆಯುವಲ್ಲಿ ವಿಫಲವಾಗಿರುವುದು ಕಾಂಗ್ರೆಸ್ ಸೋಲಿಗೆ ಕಾರಣ ಎನ್ನಬಹುದು. ವಲಸಿಗರ ಮತಗಳು ನಿರ್ಣಾಯಕವಾಗಿದ್ದು ತೆಲುಗು ಮತ್ತು ತಮಿಳು ಭಾಷಿಕರು ಸತೀಶ್ ರೆಡ್ಡಿಗೆ ಮತ ಹಾಕಿರುವುದು ಕೂಡ ಕಾಂಗ್ರೆಸ್ ಸೋಲಿಗೆ ಕಾರಣ ಎನ್ನಬಹುದು.

ಕ್ಷೇತ್ರದಲ್ಲಿ ಅಂತಹ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದರೂ, ಮತದಾರರು ಮಾತ್ರ ಶಾಸಕರ ಮೇಲೆ ನಂಬಿಕೆ ಇಟ್ಟಿದ್ದಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ, ಘನತ್ಯಾಜ್ಯ ಸಂಗ್ರಹಕಾರದಿಂದ ಸ್ಥಳೀಯ ಕೆರೆಗಳು ಕಲುಷಿತವಾಗಿದೆ. ಮಳೆ ಬಂದರೆ ಸಾಕು ಕ್ಷೇತ್ರದಲ್ಲಿ ಪ್ರವಾಸ ಸಮಸ್ಯೆ ತಲೆದೋರುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದ್ದರೆ, ಅಭಿವೃದ್ಧಿ ಕಾರ್ಯ ಮುಂದುವರೆಸಲು ಇನ್ನೊಂದು ಅವಕಾಶ ನೀಡಿ ಎಂದು ಬಿಜೆಪಿ ಮನವಿ ಮಾಡಿತ್ತು.
ಕಾಂಗ್ರೆಸ್‌ಗೆ ಕೈ ಕೊಟ್ರಾ ಒಕ್ಕಲಿಗರು?
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಒಟ್ಟು 4,27,300 ಮತದಾರರನ್ನು ಹೊಂದಿದೆ. ದಲಿತ ಸಮುದಾಯದ ಮತಗಳು 1,23,300 ಇದ್ದು ಅತಿ ದೊಡ್ಡ ಮತದಾರ ವರ್ಗವಾಗಿದೆ. 95000 ಸಾವಿರ ಒಕ್ಕಲಿಗ ಮತಗಳನ್ನು ಈ ಕ್ಷೇತ್ರ ಹೊಂದಿದೆ. 55 ಸಾವಿರ ಹಿಂದುಳಿದ ಸಮುದಾಯಗಳು, 43 ಸಾವಿರ ಬ್ರಾಹ್ಮಣ ಮತಗಳು, 27,500 ಅಲ್ಪಸಂಖ್ಯಾತರು ಮತ್ತು 2000 ಲಿಂಗಾಯತ ಮತಗಳನ್ನು ಹೊಂದಿದ್ದವು. ಬ್ರಾಹ್ಮಣದ ಮತಗಳು ಬಿಜೆಪಿಗೆ ಹೋಗಿದ್ದು, ಒಕ್ಕಲಿಗ ಮತಗಳು ವಿಭಜನೆಯಾಗಿರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎನ್ನಲಾಗಿದೆ.












Click it and Unblock the Notifications