ಪಂಬನ್ ಬ್ರಿಡ್ಜ್‌ನಲ್ಲಿ ಬಾಂಬ್ : ಸುಳ್ಳು ಕರೆ, ಮಾಜಿ ಸೈನಿಕನ ಬಂಧನ

ಬೆಂಗಳೂರು, ಏ.27: ತಮಿಳುನಾಡಿನ ಬಂಪನ್ ಬ್ರಿಡ್ಜ್‌ನಲ್ಲಿ ಯಾರೋ ಬಾಂಬ್ ಇಟ್ಟಿದ್ದಾರೆ ಎಂದು ಕರೆ ಮಾಡಿ ಸುಳ್ಳು ಸುದ್ದಿ ನೀಡಿದ್ದ ಮಾಜಿ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ರಾಮನಾಥಪುರಂಗೆ 19 ಉಗ್ರರು ತಲುಪೊದ್ದು, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸುಂದರ ಮೂರ್ತಿ ಎಂಬುವವರು ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದರು.

ಕರೆ ಬರುತ್ತಿದ್ದಂತೆ ಆರೋಪಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಆದರೆ ಕಂಟ್ರೋಲ್​ ರೂಂಗೆ ಕರೆ ಮಾಡಿದ ಬಳಿಕ ಸುಂದರಮೂರ್ತಿ ಮೊಬೈಲ್​ ಸ್ವಿಚ್​ ಆಫ್​ ಮಾಡಿದ್ದ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿವೆಂಕಟೇಶ್ವರ ಲೇಔಟ್​ನಲ್ಲಿರುವ ಅವರ ಮನೆಯಲ್ಲೇ ಬಂಧಿಸಲಾಗಿದೆ. ಶ್ರೀಲಂಕಾದಲ್ಲಿ ಬಾಂಬ್​ ಸ್ಫೋಟವಾಗಿತ್ತು. ಹಾಗೇ ನಮ್ಮಲ್ಲೂ ಆಗಬಹುದು ಎಂದು ಊಹಿಸಿದೆ. ನನ್ನ ಮನಸಿಗೆ ಬಂದಿದ್ದರಿಂದ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದ.

Bomb threat to Pamban bridges turns out to be hoax

ಅದನ್ನು ನಂಬಿದ ಪೊಲೀಸರು ಕರ್ನಾಟಕದಾದ್ಯಂತ ಕಟ್ಟೆಚ್ಚರ ವಹಿಸಿದ್ದಲ್ಲದೆ, ಆ ಚಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಈಗ ಅದೊಂದು ಹುಸಿ ಕರೆ ಎಂಬುದು ಬೆಳಕಿಗೆ ಬಂದಿದ್ದು, ಚಾಲಕ ಸುಂದರಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಡಿಜಿಪಿ ನೀಲಮಣಿ ಎನ್​.ರಾಜು ಅವರಿಂದ ಮಾಹಿತಿ ಪಡೆದಿದ್ದಾರೆ. ಇದೊಂದು ಸುಳ್ಳು ಕರೆ ಎಂದು ಇಲಾಖೆ ಹೇಳಿದ್ದರೂ ಕಟ್ಟೆಚ್ಚರದಿಂದ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+