ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ತನಿಖೆಗೆ ವಿಶೇಷ ತಂಡ ರಚನೆ
ಬೆಂಗಳೂರು, ಡಿಸೆಂಬರ್ 2: ಶುಕ್ರವಾರ ಬಾಂಬ್ ಬೆದರಿಕೆ ಮೇಲ್ ಬಂದ ಬೆಂಗಳೂರು ನಗರದ 48 ಶಾಲೆಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಿವೆ. ಈ ಸಂಬಂಧ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.
ಮೇಲ್‌ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಮೇಲ್‌ಗಳನ್ನು ವಿದೇಶದಿಂದ '[email protected]' ಎಂಬ ಇಮೇಲ್ ಮೂಲಕ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬೀಬಲ್ ಥರ್ಡ್ ಪಾರ್ಟಿ ಆಕ್ಸೆಸ್ ಇಲ್ಲದ ಖಾಸಗಿ ಸುರಕ್ಷಿತ ಇಮೇಲ್ ಸೇವೆಯಾಗಿದೆ. ಆದ್ದರಿಂದ ಬೆದರಿಕೆ ಮೇಲ್ ಕಳುಹಿಸುವವರನ್ನು ಗುರುತಿಸಲು ಸಹಾಯ ಮಾಡುವ ಮಾಹಿತಿಯನ್ನು ಪಡೆಯುವ ಬಗ್ಗೆ ನಗರ ಪೊಲೀಸರು ಕಂಪನಿಗೆ ಪತ್ರ ಬರೆದಿದ್ದಾರೆ. ಪ್ರಕರಣದ ತನಿಖೆಗಾಗಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಶುಕ್ರವಾರ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಸುಳ್ಳು ಕರೆಗಳನ್ನು ಪತ್ತೆಹಚ್ಚುವುದು ಸುಲಭ. ಆದರೆ ಇಲ್ಲಿ ಕಳುಹಿಸಲಾದ ನಿಗದಿತವಲ್ಲದ ಇಮೇಲ್‌ಗಳನ್ನು ಪತ್ತೆಹಚ್ಚಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಬಾಂಬ್ ಬೆದರಿಕೆ ಮೇಲ್ ಬಂದ ನಂತರ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಬೇಕಾಗಿ ಬಂದ ಕಾರಣ ಶುಕ್ರವಾರ ಶಾಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ಬೆದರಿಕೆಯ ಮೇಲ್‌ನಿಂದ ಶುಕ್ರವಾರ ಮುಚ್ಚಲಾಗಿದ್ದ ಎಲ್ಲಾ 48 ಶಾಲೆಗಳು ಶನಿವಾರ ತೆರೆದು ವಿದ್ಯಾರ್ಥಿಗಳು ಎಂದಿನಂತೆ ಮರಳಿದರು.
ಬಾಂಬ್ ಬೆದರಿಕೆಗಳು ಹೆಚ್ಚಳ:
ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಶುಕ್ರವಾರ ಸಂಜೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಬಿ ದಯಾನಂದ ಮತ್ತು ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಹುಸಿ ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಸಭೆ ನಡೆಸಿದರು.
ಸಭೆಯ ನಂತರ, ಗೃಹ ಸಚಿವರು ಮಾತನಾಡಿ, ಇದು ನಕಲಿ ಇ-ಮೇಲ್‌ನಂತೆ ಕಂಡುಬಂದರೂ ಶಾಲೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಕಳೆದ ವರ್ಷವೂ ಇಂತಹ ಹುಸಿ ಕರೆಗಳು ಬಂದಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.












Click it and Unblock the Notifications