ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್
ಬೆಂಗಳೂರು, ನವೆಂಬರ್ 21: ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಸೈಯದ್ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ, ರಕ್ತದ ಮಡುವಿನಲ್ಲಿದ್ದರೂ ನನ್ನನ್ನು ಬದುಕಿಸು ಎಂದು ಹೆಂಡತಿಗೆ ಕರೆ ಮಾಡಿ ಅಂಗಲಾಚಿದ್ದ.
ಶಿವಾಜಿನಗರದ ಸಿಸಿ ರಸ್ತೆ ನಿವಾಸಿ ಸೈಯದ್ ಇರ್ಫಾನ್ ಪತ್ನಿ ಸಹಾಯದಿಂದ ಆಸ್ಪತ್ರೆಗೆ ದಾಖಲಾದರೂ , ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಮನೆಯಿಂದ ಅಂಗಡಿಯೊಂದಕ್ಕೆ ತಂಪು ಪಾನೀಯ ತರಲಂದು ಹೋಗುತ್ತಿದ್ದಾಗ ಬೈಕ್‌ಗಳಲ್ಲಿ ಬಂದ ಮೂವರು ಹೆಲ್ಮೆಟ್ ಧಾರಿಗಳು ಆತನನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಇರ್ಫಾನ್ ತನ್ನ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ, ಆತಂಕಗೊಂಡ ಪತ್ನಿ ಸ್ಥಳೀಯರ ಸಹಾಯದೊಂದಿಗೆ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಗೆ ಕಾರಣ: ಕೃತ್ಯಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಆದರೆ ಪ್ರಾಥಮಿಕ ತನಿಖೆಯಲ್ಲಿ ಹಣಕಾಸು, ಯುವತಿ ವಿಚಾರಕ್ಕೆ ಕೊಲೆಯಾಗಿರುವ ಸಾಧ್ಯತೆ ಇದೆ ಇದೆ ತಿಳಿದುಬಂದಿದೆ.












Click it and Unblock the Notifications