ಮೆಟ್ರೋ ಫೀಡರ್ ಸೇವೆ: 15 ಬಸ್ ಗಳನ್ನು ಹಿಂಪಡೆದ ಬಿಎಂಟಿಸಿ

ಬೆಂಗಳೂರು, ಜನವರಿ 1 : ನಿರೀಕ್ಷಿತ ಆದಾಯ ಸಿಗದ ಹಿನ್ನೆಲೆಯಲ್ಲಿ ಬಿಎಂಟಿಸಿಯು ಮೆಟ್ರೋ ಫೀಡರ್ ಸೇವೆ ಒದಗಿಸುತ್ತಿದ್ದ 15 ಬಸ್ ಗಳನ್ನು ಹಿಂಪಡೆದಿದೆ.

ಯಲಚೇನಹಳ್ಳಿ ಮೆಟ್ರೋ ಮಾರ್ಗವು ಸ್ಥಾಪನೆಯಾಗುವ ಮುನ್ನ ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಮಾರ್ಗ ಪ್ರಾರಂಭವಾದ ಸಂದರ್ಭದಲ್ಲಿ ಬಿಎಂಟಿಸಿಯು ಮೆಟ್ರೋ ಸೇವೆಗೆಂದು ಬಸ್ ಗಳನ್ನು ಒದಗಿಸಿತ್ತು. ಅದು ಮೆಜೆಸ್ಟಿಕ್ ನಿಂದ ಸಂಪಿಗೆ ರಸ್ತೆ, ಸಂಪಿಗೆ ರಸ್ತೆಯಿಂದ ಮೈಸೂರು ರಸ್ತೆ ಹೀಗೆ ಹಲವಾರು ಮಾರ್ಗಗಳಲ್ಲಿ ಸಂಚರಿಸುತ್ತಿತ್ತು.

ಯಲಚೇನಹಳ್ಳಿ, ಜಯನಗರ ಮಾರ್ಗದಲ್ಲಿ ಮೆಟ್ರೋ ಸಂಚಾರ ಪ್ರಾರಂಭವಾದ ನಂತರದ ದಿನಗಳಲ್ಲಿ ಒಂದು ಮೆಟ್ರೋ ನಿಲ್ದಾಣದಿಂದ ಇನ್ನೊಂದು ಮೆಟ್ರೋ ನಿಲ್ದಾಣಕ್ಕೆ ಬಸ್ ಮೂಲಕ ತೆರಳುವವರ ಸಂಖ್ಯೆ ಕಡಿಮೆಯಾಗಿದೆ.

BMTC withdraw feeder service to Namma Metro

ಮತ್ತೊಂದು ಮಾರ್ಗದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ತೆರಳುವುದಾದರೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮಾರ್ಗ ಬದಲಾವಣೆ ಮಾಡಿಕೊಂಡು ಮೆಟ್ರೋ ದ ಮೂಲಕವೇ ತೆರಳುತ್ತಾರೆ.

ಹೀಗಾಗಿ ಬಿಎಂಟಿಸಿ ಫೀಡರ್ ಬಸ್ ಗೆ ಆದಾಯ ಕಡಿಮೆಯಾಗಿದೆ. ನಗರದ ವಿವಿಧ ಭಾಗಗಳಲ್ಲಿ ಮೆಟ್ರೋ ರೈಲು ನಿಲ್ದಾಣಗಳಿಗೆ ಸಂಪರ್ಕಿಸಲು ಪೂರಕವಾಗುವಂತೆ 173 ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇವುಗಳಲ್ಲಿ 15ಬಸ್ ಗಳನ್ನು ವಾಪಾಸ್ ಪಡೆದು ಬೇರೆ ಮಾರ್ಗಗಳಿಗೆ ನಿಯೋಜಿಸಲಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಬೆಂಗಳೂರು ವ್ಯಾಪ್ತಿ ಯಲ್ಲಿ ಹೆಚ್ಚಿನ ಬಸ್ ಗಳನ್ನು ವಾಪಾಸ್ ಪಡೆಯಲಾಗಿದೆ. ಈ ಬಸ್ ಗಳು ಕಿ.ಮೀ 10 ರೂ. ಆದಾಯವನ್ನೂ ತಂದುಕೊಡುತ್ತಿರಲಿಲ್ಲ. ಜನರಿಗೆ ಸೇವೆ ಒದಗಿಸುವುದು ನಮ್ಮ ಧ್ಯೇಯವಾದರೂ ವಿಪರೀತ ನಷ್ಟ ಮಾಡಿಕೊಂಡು ಕಾರ್ಯಾಚರಣೆ ಗೊಳಿಸಲಾಗುವುದಿಲ್ಲ. ಒಟ್ಟಾರೆ ಮೆಟ್ರೋ ಫೀಡರ್ ಸೇವೆಯೇ ನಷ್ಟದಲ್ಲಿದೆ. ಹೆಚ್ಚು ಬೇಡಿಕೆ ಇದ್ದಲ್ಲಿ ಹೆಚ್ಚು ಸಂಖ್ಯೆಯ ಬಸ್ ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ. ಬೇಡಿಕೆ ಕಡಿಮೆ ಇದ್ದಲ್ಲಿ ಕಡಿಮೆ ಬಸ್ ಗಳನ್ನು ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

ಯಲಚೇನಹಳ್ಳಿ, ಬನಶಂಕರಿ, ಜಯನಗರ, ಆರ್ ವಿ ರಸ್ತೆ ನಿಲ್ದಾಣಕ್ಕೆ ಒದಗಿಸಲಾಗುತ್ತಿದ್ದ ಬಸ್ ಗಳ ಕಾರ್ಯಾಚರಣೆಯನ್ನು ಕಡಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+