ಬಿಎಂಟಿಸಿ 'ಶಕ್ತಿ' ಹೆಚ್ಚಳಕ್ಕೆ ಜಾಹೀರಾತು ಪ್ರದರ್ಶನ ಆಸರೆ: 3,400 ಬಸ್ಗಳಿಂದ 263 ಕೋಟಿ ರೂ. ಆದಾಯ
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯ ನಾಲ್ಕು ಸಾರಿಗೆ ನಿಗಮಗಳಿಗೆ ಕೊಡಬೇಕಾದ ಹಣ ಬಾಕಿ ಉಳಿಸಿಕೊಂಡಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ 'ಶಕ್ತಿ' ಕುಂದಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೆ ಆದಾಯ ಹೆಚ್ಚಿಸಿಕೊಳ್ಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮುಂದಾಗಿದೆ. ಸಂಸ್ಥೆ ತನ್ನ ಎರಡು ವರ್ಗದ ಬಸ್ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಏಜೆನ್ಸಿಗಳಿಗೆ ಷರತ್ತು ಸಹಿತ ಒಪ್ಪಂದದ ಮೇರೆಗೆ ಅವಕಾಶ ಕಲ್ಪಿಸಿದೆ. ಇದರಿಂದ ಭವಿಷ್ಯದಲ್ಲಿ ಬಿಎಂಟಿಸಿ ನಿಗಮವು ಒಟ್ಟು 263 ಕೋಟಿ ರೂಪಾಯಿಗೆ ಆದಾಯ ಗಳಿಸಲಿದೆ.
ಸಾರಿಗೇತರ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಿಎಂಟಿಸಿ ಮುಂದಿನ 3-4 ವರ್ಷಗಳ ಕಾಲ ಖಾಸಗಿ ಏಜೆನ್ಸಿಗಳಿಗೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಬಿಎಂಟಿಸಿ 3000 ಸಾಮಾನ್ಯ ಬಸ್ಗಳು ಹಾಗೂ 400 ವೊಲ್ವೊ ಬಸ್ಗಳ ಮೇಲೆ ಜಾಹೀರಾತುಗಳು ಪ್ರದರ್ಶನಗೊಳ್ಳಲಿವೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿದೆ.

ಬಸ್ಗಳ ಹಿಂದೆ ಮತ್ತು ಮುಂದಿನ ಗ್ಲಾಜು ಹೊರತುಪಡಿಸಿ ಉಳಿದ ಭಾಗದಲ್ಲಿ ಜಾಹೀರಾತು ಪ್ರದರ್ಶನಗೊಳ್ಳಲಿವೆ. ಇದಕ್ಕಾಗಿ ಒಂದು ವರ್ಷ ಹಿಂದೆ 2024ರ ಡಿಸೆಂಬರ್ನಲ್ಲಿ ಬಿಎಂಟಿಸಿ ಟೆಂಡರ್ ಆಹ್ವಾನಿಸಿತ್ತು. ಟೆಂಡರ್ನಲ್ಲಿ ಪಾಲ್ಗೊಂಡು ಹೆಚ್ಚು ಬಿಡ್ ಸಲ್ಲಿಸಿದ್ದ ಎರಡು ಏಜೆನ್ಸಿಗಳು ಪ್ರದರ್ಶಿಸುವ ಜಾಹೀರಾತುಗಳು 2028ರವರೆಗೆ ಬಿಎಂಟಿಸ್ ಬಸ್ಗಳ ಮೇಲೆ ರಾರಾಜಿಸಲಿವೆ.
ಒಂದೊಂದು ಬಸ್ಗೆ ಇಂತಿಷ್ಟು ಶುಲ್ಕ ನಿಗದಿ
ಸಾಯಿ ಏಜೆನ್ಸಿಗೆ 2029ರವರೆಗೆ ನಾಲ್ಕು ವರ್ಷಗಳ ಕಾಲ ಮತ್ತು 2028ರವರೆಗೆ ಸೈನ್ಪೋಸ್ಟ್ ಏಜೆನ್ಸಿಗೆ ಟೆಂಡರ್ ನೀಡಲಾಗಿದೆ. 3000 ಸಾಮಾನ್ಯ ಬಸ್ಗಳಲ್ಲಿ ಪ್ರತಿ ಒಂದು ಬಸ್ಗೆ ಮಾಸಿಕ 12,616 ರೂಪಾಯಿಯಂತೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಬೆಂಗಳೂರು ಏರ್ಪೋರ್ಟ್, ಬಹುರಾಷ್ಟ್ರೀಯ ಕಂಪನಿಗಳು ಇರುವ ಮಾರ್ಗದಲ್ಲಿ ಸಂಚರಿಸುವ ವೊಲ್ವೋ ಬಸ್ಗಳ ಮೇಲಿನ ಜಾಹೀರಾತು ಪ್ರದರ್ಶನಕ್ಕೆ ಮಾಸಿಕ 25,255 ರೂಪಾಯಿ ಪರವಾನಿಗೆ ಶುಲ್ಕ ನಿಗದಿ ಮಾಡಲಾಗಿದೆ. ಇದರೊಂದಿಗೆ ಒಂದಷ್ಟು ಇತರ ಶುಲ್ಕವನ್ನು ಸಹ ಏಜೆನ್ಸಿಗಳು ಪಾವತಿಸಬೇಕಿದೆ.
ಪ್ರತಿ ಸಾಮಾನ್ಯ ಬಸ್ವೊಂದು ತಿಂಗಳಿಗೆ 12,616 ರೂ.ನಂತೆ ವರ್ಷಕ್ಕೆ ಸುಮಾರು 45 ಕೋಟಿ ರೂ. ಹಾಗೂ 400 ವೊಲ್ವೋ ಬಸ್ಗಳ ಪೈಕಿ ಒಂದು ಬಸ್ ಮಾಸಿಕ 25,255 ರೂ.ನಂತೆ ವಾರ್ಷಿಕ ಸುಮಾರು 36 ಕೋಟಿ ರೂಪಾಯಿ ಆದಾಯ ಗಳಿಸಲಿವೆ. ಟೆಂಡರ್ ಅವಧಿ ಮುಗಿಯುವುದರೊಳಗೆ ಒಟ್ಟು 263 ಕೋಟಿ ರೂಪಾಯಿ ಆದಾಯ ಬಿಎಂಟಿಸಿ ಖಜಾನೆ ಸೇರಲಿದೆ.
ಜಾಹೀರಾತು ಪ್ರದರ್ಶನಕ್ಕೆ ಷರತ್ತುಗಳು ಏನೇನು?
ಯುವ ಜನರನ್ನು ಮದ್ಯಪಾನ, ಧೂಮ್ರಪಾನಕ್ಕೆ ಪ್ರಚೋದಿಸುವ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವ ಜಾಹೀರಾತುಗಳನ್ನು ಬಸ್ಗಳ ಮೇಲೆ ಪ್ರದರ್ಶಿಸುವಂತಿಲ್ಲ. ಅಲ್ಲದೇ ಸರ್ಕಾರ ಜಾಹೀರಾತು ಪ್ರದರ್ಶನಕ್ಕಾಗಿ ಜಾರಿಗೆ ತಂದಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸಿದಲ್ಲಿ ಅಂತಹ ಏಜೆನ್ಸಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ ಎಂಬುದನ್ನು ಒಪ್ಪಂದದಲ್ಲಿ ತಿಳಿಸಲಾಗಿದೆ. ಇದೆಲ್ಲದ್ದಕ್ಕೆ ಒಪ್ಪಿಗೆ ನೀಡಿದ ಏಜೆನ್ಸಿಗಳು ಬಿಎಂಟಿಸಿ ಜೊತೆಗೆ ಕೈ ಜೋಡಿಸಿವೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications