BMTC UPI Payment: ಯುಪಿಐ ಪಾವತಿ ಬಗ್ಗೆ ಕಂಡಕ್ಟರ್‌ಗಳಿಗೆ ಬಿಎಂಟಿಸಿ ಕಟ್ಟುನಿಟ್ಟಿನ ಸೂಚನೆ
BMTC UPI Payment: ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಈ ಸಾರಿಗೆಯಲ್ಲಿ ನಗದು ಇಲ್ಲದೆ, ಯುಪಿಐ ಮೂಲಕ ಪಾವತಿ ಮಾಡಲು ಬಿಎಂಟಿಸಿ ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ, ಪ್ರಯಾಣಿಕರು ಇದರಲ್ಲಿ ಪಾವತಿ ಮಾಡಲು ಹೋದರೆ ಕಂಡಕ್ಟರ್‌ಗಳು ಹಣ ಕೊಡಿ ಎಂದು ಕೇಳಿತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದವು. ಬಳಿಕ ಎಚ್ಚೆತ್ತ ಬಿಎಂಟಿಸಿ ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬಿಎಂಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಗಳು ಯುಪಿಐ ಪಾವತಿಯನ್ನು ನಿರಾಕರಿಸಿ ನಗದು ಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ರಂದು ಪ್ರಯಾಣಿಕರು ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಕಂಡಕ್ಟರ್‌ಗಳಿಗೆ ಯುಪಿಐ ಪಾವತಿ ಸ್ವೀಕರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಹಲವು ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಹಾಗೂ ನಗರದ ಟೆಕ್ ಕಾರಿಡಾರ್‌ಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸ್ಥಿರ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಅಂಟಿಸಲಾಗಿದೆ. ಆದರೂ ಈ ಮೂಲಕ ಪಾವತಿ ಮಾಡಿಕೊಳ್ಳಲು ಕಂಡಕ್ಟರ್‌ಗಳು ನಿರಾಕಸುತ್ತಿದ್ದಾರೆ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ.
ಕೆಲಸಕ್ಕಾಗಿ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರು, ಕೆಲವು ಬಸ್‌ಗಳಲ್ಲಿ ನಾವು ಪ್ರತಿ ಬಾರಿ ಹತ್ತುವಾಗವೂ ಸರಿಯಾಗಿ ಚಿಲ್ಲರೆ ಹಣ ನೀಡಲು ಸಾಧ್ಯವಿಲ್ಲ. ಆದ್ದರಿಂದ ಯುಪಿಐ ಪಾವತಿ ಅತ್ಯಗತ್ಯ ಆಗಿವೆ. ಕಂಡಕ್ಟರ್‌ಗಳು ಯುಪಿಐ ಪಾವತಿಗಳನ್ನು ನಿರಾಕರಿಸಿದರೆ, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಹಗ್ರಹಿಸಿದ್ದರು.
ನಮ್ಮ ಸುಮಾರು ಶೇಕಡ 10ರಷ್ಟು ಬಸ್‌ಗಳನ್ನು ಹೊರತುಪಡಿಸಿ, ಎಲ್ಲಾ ಬಸ್‌ಗಳು ಬಸ್ ಪ್ಯಾನೆಲ್‌ಗಳಲ್ಲಿ ಸ್ಥಿರ ಕ್ಯೂಆರ್ ಕೋಡ್‌ಗಳನ್ನು ಹೊಂದಿವೆ. ಪ್ರಯಾಣಿಕರು ಕೋಡ್ ಅನ್ನು ಸ್ಕ್ಯಾನ್ ಮಾಡಿ ಮೊತ್ತವನ್ನು ಪಾವತಿಸಬಹುದು. ಬಳಿಕ ಟಿಕೆಟ್ ನೀಡಲಾಗುತ್ತದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್ ರೆಡ್ಡಿ ಅವರು ತಿಳಿಸಿದ್ದಾರೆ.
ಕ್ಯೂಆರ್ ಕೋಡ್‌ಗಳ ಜೊತೆ ಹ್ಯಾಂಡ್‌ಹೆಲ್ಡ್ ಎಲೆಕ್ಟ್ರಾನಿಕ್ ಟಿಕೆಟ್ ವೆಂಡ್ಡಿಂಗ್ ಯಂತ್ರಗಳು ಕೂಡ ಡೈನಾಮಿಕ್ ಕ್ಯೂಆರ್ ಕೋಡ್‌ಗಳನ್ನು ನೀಡುತ್ತವೆ. ಪ್ರಯಾಣಿಕರು ಸ್ಕ್ಯಾನ್ ಮಾಡಲು ಮತ್ತು ಪಾವತಿ ಮಾಡಲು ಡೈನಾಮಿಕ್ ಕ್ಯೂಆರ್ ಕೋಡ್ ಅನ್ನು ಬಳಕೆ ಮಾಡಬಹುದು ಎಂದು ವಿವರಣೆ ನೀಡಿದರು.
ಈ ಕ್ರಮ ಆರಂಭಿಸಿದಾಗಿನಿಂದ, ಯುಪಿಐ ವಹಿವಾಟುಗಳು ಗಮನಾರ್ಹವಾಗಿ ಹೆಚ್ಚಳ ಆಗಿದೆ. ಈ ಹಿಂದೆ, ದೈನಂದಿನ 3 ಕೋಟಿ ರೂಪಾಯಿ ಆದಾಯದಲ್ಲಿ ಕೇವಲ 20-25 ಲಕ್ಷ ರೂಪಾಯಿ ಯುಪಿಐ ಪಾವತಿಗಳಿಂದ ಬರುತ್ತಿತ್ತು. ಈಗ ಅದು 60 ಲಕ್ಷ ರೂಪಾಯಿಗಳನ್ನು ದಾಟಿದೆ ಎಂದು ಹೇಳಿದರು.
ಬಿಎಂಟಿಸಿ ಶೀಘ್ರದಲ್ಲೇ ದೈನಂದಿನ ಯುಪಿಐ ವಹಿವಾಟುಗಳಲ್ಲಿ 1 ಕೋಟಿ ರೂಪಾಯಿಗಳನ್ನು ತಲುಪುವ ಗುರಿ ಹೊಂದಿದೆ. ಪ್ರಯಾಣಿಕರು ತಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆ ಮಾಡಲು ಮುಕ್ತರಾಗಿದ್ದಾರೆ ಹಾಗೂ ಕಂಡಕ್ಟರ್‌ಗಳು ಇನ್ಮುಂದೆ ಯುಪಿಐ ಪಾವತಿಗಳನ್ನು ನಿರಾಕರಿಸುವಂತಿಲ್ಲ ಎಂದು ಸೂಚಿಸಿದರು.












Click it and Unblock the Notifications