ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: ಶೀಘ್ರವೇ ಮೆಟ್ರೋ ನಿಲ್ದಾಣಗಳಿಗೆ ಮಿನಿ ಬಸ್ ಸೇವೆ

|
Google Oneindia Kannada News

ಬೆಂಗಳೂರು, ನವೆಂಬರ್ 22: ಬೆಂಗಳೂರಿನ ಸಾಕಷ್ಟು ನಿವಾಸಿಗಳು ಸಂಚಾರಕ್ಕೆ ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. ಈ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲು ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣಗಳಿಗೆ ಮಿನಿ ಬಸ್ ಸೇವೆ ಆರಂಭಿಸಲು ಮುಂದಾಗಿದೆ.

ಮುಂದಿನ ದಿನಗಳಲ್ಲಿ ನೀವು ನಿಮ್ಮ ಮನೆಯಿಂದಲೇ ಮೆಟ್ರೋ ನಿಲ್ದಾಣಗಳಿಗೆ ಈ ಮಿನಿ ಬಸ್‌ನಲ್ಲೇ ತೆರಳಬಹುದು. ಆಯ್ಕೆ ಮಾಡಲಾಗುವ ಪ್ರದೇಶಗಳಲ್ಲಿ ನಿಮ್ಮ ಮನೆಯ ಸಮೀಪ ನಿಲುಗಡೆಯಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆ ಜಾರಿ ಸಂಬಂಧ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಬಿಎಂಟಿಸಿ ಜೊತೆಗೆ ಮಾತುಕತೆ ನಡೆಸಿದೆ.

Namma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣNamma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣ

ಈಗಾಗಲೇ ಹಲವು ಯೋಜನೆಗಳ ಜಾರಿ ಮೂಲಕ ಪ್ರಯಾಣಿಕ ಸ್ನೇಹಿಯಾಗಿರುವ 'ನಮ್ಮ ಮೆಟ್ರೋ' ಆದಷ್ಟು ಶೀಘ್ರವೇ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆ ಜಾರಿಯಾದರೆ ನಿಗದಿತ ವಸತಿ ಸಮುಚ್ಚಯ ಬಳಿ ಬಸ್ ಬರಲಿದೆ.

BMTC Mini Bus will Start in Between Metro Station and Passenger House Soon BMRCL

ಹಾಲಿ ಮೆಟ್ರೋ ಫಿಡರ್ ಬಸ್‌ಗಳು ಬಿಎಂಟಿಸಿ ಬಸ್‌ ನಿಲ್ದಾಣಗಳಿಂದ ಮೆಟ್ರೋ ನಿಲ್ದಾಣಗಳವರೆಗೆ ಸಾರಿಗೆ ಸೇವೆ ನೀಡುತ್ತಿವೆ. ಈ ಸೇವೆಗಾಗಿ ಬಿಎಂಟಿಸಿ 95 ಎಲೆಕ್ಟ್ರಿಕ್ ಬಸ್ ಸೇವೆ ಖರೀದಿಸಿದೆ. ಇದರಲ್ಲಿ ಎಲ್ಲ ಬಸ್‌ಗಳು ಬಳಕೆಯಾಗಿಲ್ಲ. ಆದಷ್ಟು ಶೀಘ್ರವೇ ಎಲ್ಲ ಬಸ್‌ಗಳು ಸೇವೆ ಆರಂಭಿಸಲಿವೆ.

ಇದೀಗ ವಸತಿ ಸಮುಚ್ಚಯಗಳು, ದೊಡ್ಡ ಅಪಾರ್ಟ್ಮೆಂಟ್‌ಗಳು ಮತ್ತು ಮೆಟ್ರೋ ನಿಲ್ದಾಣಗಳ ಮಧ್ಯೆ ಸಂಪರ್ಕ ಸಾಧಿಸಲು ಮಿನಿ ಬಸ್ ಪರಿಚಯದ ಚಿಂತನೆ ಇದೆ. ಬಿಎಂಟಿಸಿ ಹೊಸ ಬಸ್ ಖರೀದಿಗೆ ನಿರ್ಧರಿಸಿದೆ. ಪ್ರಯಾಣಿಕರು ತಮ್ಮ ಮನೆ ಬಳಿ ಇರುವ ಮಿನಿ ಬಸ್ ಮೂಲಕವೇ ಮೆಟ್ರೊ ನಿಲ್ದಾಣವನ್ನು ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಇದರಿಂದ ದೂರದ ಪ್ರಯಾಣದ ಸಂಕಷ್ಟ ತಪ್ಪಲಿದೆ ಎನ್ನುತ್ತಾರೆ ಬಿಎಂಆರ್‌ಸಿಎಲ್ ಅಧಿಕಾರಿಗಳು.

BMTC Mini Bus will Start in Between Metro Station and Passenger House Soon BMRCL

ಮಿನಿ ಬಸ್‌ ಸಾಮರ್ಥ್ಯ

ಜಾರಿಯಲ್ಲಿರುವ 200 ಮೆಟ್ರೋ ಫೀಡರ್ ಬಸ್‌ ಸೇವೆ ಆರಂಭವಾಗಿದೆ. ಆದರೆ ಸಣ್ಣ ರಸ್ತೆಗಳಲ್ಲಿ ಅಥವಾ ಬಡಾವಣೆಗಳ ಒಳಗೆ ಈ ಫೀಡರ್ ಬಸ್ ಸಂಚಾರ ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿಗೆ ಸೇವೆ ಲಭ್ಯವಾಗಲು ಬಸ್‌ ಸೇವೆ ಕಲ್ಪಿಸುವಂತೆ ಬಿಎಂಆರ್‌ಸಿಎಲ್‌ ಪ್ರಸ್ತಾವ ಸಲ್ಲಿಸಿದೆ. ಕೆಲ ಮಾರ್ಗಗಳನ್ನು ಆಯ್ಕೆ ಮಾಡಿರುವ ಬಿಎಂಆರ್‌ಸಿಎಲ್ ಮಿನಿ ಬಸ್ ಸೇವೆ ಬಗ್ಗೆ ಮಾತುಕತೆ ನಡೆಸಿದೆ. ಉದ್ದೇಶೀತ ಈ ಮಿನಿ ಬಸ್ ಏಳು ಮೀಟರ್‌ ಉದ್ದವಿರಲಿದ್ದು, ಇದರೊಳಗೆ ಕನಿಷ್ಠ 25 ಮಂದಿ ಪ್ರಯಾಣಿಸಬಹುದು. ಈ ಮಿನಿ ಬಸ್‌ಗಳನ್ನು ಖರೀದಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಮತ್ತು ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆಗೆ (ಎನ್‌ಸಿಎಪಿ) ಪ್ರಸ್ತಾವನೆ ಕಳುಹಿಸಲಾಗಿದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

English summary
Bengaluru Metropolitan Transport Corporation (BMTC) Mini bus will start in between Metro station and passenger house soon Bengaluru Metro Rail Corporation Limited says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X