ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಂಬಂಧಿಕರು ಸತ್ತಿದ್ದಾರೆ ರಜೆ ಕೊಡಿ ಅಂದ್ರೆ, ಶವದ ಮುಂದೆ ನಿಂತು ಫೋಟೊ ಕಳಿಸು ಅಂದ್ರು'

|
Google Oneindia Kannada News

ಬೆಂಗಳೂರು, ಮಾರ್ಚ್ 4: ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ರಜೆ ಕೇಳಿದರೆ ಸತ್ತವರ ಮುಂದೆ ನಿಂತು ಫೋಟೊ ತೆಗೆದು ಕಳಿಸಿ ಎನ್ನುವ ರಿಪ್ಲೇ ನೀಡುವ ಬಿಎಂಟಿಸಿ ಡಿಪೋ ಮ್ಯಾನೇಜರ್‌ನಿಂದ ಏನನ್ನು ತಾನೆ ಅಪೇಕ್ಷಿಸಲಾಗುತ್ತದೆ ನೀವೆ ಹೇಳಿ.

ಮನೆಯವರು ಅಥವಾ ಸಂಬಂಧಿಕರು ಸಾವನ್ನಪ್ಪಿದಾಗ ಸಿಬ್ಬಂದಿ ರಜೆ ಕೇಳಿದರೆ ಕಂಪನಿ ರಜೆ ಕೊಡುತ್ತದೆ ಆದರೆ ಬಿಎಂಟಿಸಿ ನೌಕರರೊಬ್ಬರು ರಜೆ ಕೇಳಿದಾಗ ಬಿಎಂಟಿಸಿ ಡಿಪೋ ಮ್ಯಾನೇಜರ್ ನೀಡಿದ ಉತ್ತರವಿದು 'ಶವದ ಮುಂದೆ ನಿಂತು ಫೋಟೊ ತೆಗೆದು ಕಳುಹಿಸು ಆಗ ನಿನ್ನ ನಂಬ್ತೀನಿ' .

ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೆ ಬಿಎಂಟಿಸಿ ಚಿಂತನೆ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೆ ಬಿಎಂಟಿಸಿ ಚಿಂತನೆ

ಡಿಪೋ ನಂಬರ್ 33 ರಲ್ಲಿ ಸಿಬ್ಬಂದಿಯೊರ್ವ ಮೇಲಾಧಿಕಾರಿಗೆ ಡಿಪೋ ಮ್ಯಾನೇಜರ್ ವಿರುದ್ಧ ದೂರು ಬರೆದಿದ್ದಾರೆ.ಸಂಬಂಧಿಕರು ಸಾವನ್ನಪ್ಪಿದಾಗ ರಜೆ ಬೇಕಾಗುತ್ತೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ರಜೆ ಕೊಡದೇ ಸತಾಯಿಸಿ, ಭಾವಚಿತ್ರ ತಂದು ಕೊಡು ಎಂದು ಹೇಳಿದರೆ ಶವದ ಜೊತೆ ನಾವು ಹೇಗೆ ಫೋಟೋ ತೆಗೆದುಕೊಳ್ಳಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೂರು ಕೊಟ್ಟಿರುವ ಸಿಬ್ಬಂದಿ ತನ್ನ ಹೆಸರನ್ನು ಮಾತ್ರ ಉಲ್ಲೇಖಿಸಿಲ್ಲ.

BMTC manager asks worker to give dead body pic to grant leave

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

ಅನಾರೋಗ್ಯದಿಂದ ಓಡಾಡಲು ಸಾಧ್ಯವಾಗದ ಸಮಯದಲ್ಲಿ ದೂರವಾಣಿ ಮುಖಾಂತರ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೆ ಇಂದೇ ಖುದ್ದಾಗಿ ರಜೆ ಅರ್ಜಿ ನೀಡಿದರೆ ರಜೆ ಮಂಜೂರು ಮಾಡುತ್ತೇನೆ ಇಲ್ಲವಾದರೆ ಗೈರು ಹಾಜರು ಮಾಡುತ್ತೇನೆ ಮತ್ತು ಬೇರೊಂದು ಘಟಕಕ್ಕೆ ವರ್ಗವಣೆ ಮಾಡುವುದಾಗಿ ಬೆದರಿಕೆ ಒಡ್ಡುವುದು. ಈ ರೀತಿ ಪ್ರಕರಣಗಳು ಅಧಿಕವಾಗಿ ನಡೆಯುತ್ತಿರುತ್ತವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

English summary
BMTC manager asks deadbody picture to grant leave for a conducter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X