BMTC: ಹೊಸವರ್ಷಕ್ಕೆ ಬೆಂಗಳೂರಿಗರಿಗೆ ಬಿಎಂಟಿಸಿ ಗುಡ್ ನ್ಯೂಸ್
BMTC Good News: ಹೊಸ ವರ್ಷಕ್ಕೆ ಇನ್ನೂ ಎರಡೇ ದಿನ ಮಾತ್ರ ಬಾಕಿಯಿದೆ. ಈಗಾಗಲೇ ಪ್ರಕಯಾಣಿಕೆ ಅನೂಲಕ್ಕೆ ತಕ್ಕಂತೆ 2025ರ ಹೊಸ ವರ್ಷದ ಮೊದಲ ರಾತ್ರಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಹಾಗೆಯೇ ಈ ವೇಳೆ ನಗರದಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಸಹ ಕಾರ್ಯಾನಿರ್ವಹಿಸಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಸಮಯ ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದ್ದು, ಪ್ರಯಾಣಿಕರಿಗೆ ಆಗಾಗ ಗುಡ್ ನ್ಯೂಸ್ ನೀಡುತ್ತಲೇ ಇರುತ್ತದೆ. ಹಾಗೆಯೇ ಪ್ರತಿವರ್ಷವೂ ಸಹ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಅದ್ದೂರಿಯಾಗಿ ಹೊಸ ವರ್ಷ ಸಂಭ್ರಾಮಾಚರಣೆಯನ್ನು ಮಾಡಲಾಗುತ್ತದೆ. ಈ ವರ್ಷವೂ ಕೂಡ ಹೊಸ ವರ್ಷವೂ ಕೂಡ ಈ ಭಾಗಗಳಳಲ್ಲಿ ಅದ್ಧೂರಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1, 2025ರ ಬೆಳಗ್ಗೆ 2 ಗಂಟೆಯವರೆಗೂ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚು ಬಸ್‌ಗಳು ಕಾರ್ಯನಿರ್ವಹಿಸಲಿವೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ.
ಬಸ್ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ
G-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ
G-4 ಬ್ರಿಗೇಡ್ ರಸ್ತೆ ಜಿಗಣಿ
G-2 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ
G-6 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಕೆಂಗೇರಿ ಕೆ.ಹೆಚ್.ಬಿ.ಕ್ವಾರ್ಟರ್ಸ್
G-7 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಜನಪ್ರಿಯಟೌನ್ ಶಿಪ್
G-8 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ನೆಲಮಂಗಲ
G-9 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಯಲಹಂಕ ಉಪನಗರ 5ನೇ ಹಂತ
G-10 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಯಲಹಂಕ
G-11 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬಾಗಲೂರು
317-G ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಹೊಸಕೋಟೆ
SBS-13K ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಚನ್ನಸಂದ್ರ
SBS-1K ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಕಾಡುಗೋಡಿ
13 ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬನಶಂಕರಿ
ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಿಂದಲೂ ಹೆಚ್ಚುವರಿ ಬಸ್ ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆಗನುಸಾರ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಟಿಸಿ ಮಾಹಿತಿ ನೀಡಿದೆ.












Click it and Unblock the Notifications