BMTC Good news: ಇನ್ಮುಂದೆ ಈ ಮಾರ್ಗದಲ್ಲೂ ಬರುತ್ತೆ ಬಿಎಂಟಿಸಿ ಬಸ್‌!

ಬೆಂಗಳೂರಿನ ಜನರಿಗೆ (Bengaluru Metropolitan Transport Corporation)ಬಿಎಂಟಿಸಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ಮೊದಲಿನಿಂದಲೂ ಬಿಎಂಟಿಸಿ (BMTC) ಜನರ ಪ್ರಯಾಣದ ಜೀವನಾಡಿ. ಬಿಎಂಟಿಸಿ ಇಂದಿಗೂ ಲಕ್ಷಾಂತರ ಜನರ ಪ್ರಯಾಣದ ಪಾರ್ಟನರ್‌. ಈಗ ಹೊಸ ಮಾರ್ಗದಲ್ಲೂ ಬಸ್‌ ಸೇವೆ ಕಲ್ಪಿಸಲು ಬಿಎಂಟಿಸಿ ಮುಂದಾಗಿದೆ. ಈ ಮೂಲಕ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ (ಪ್ರಯಾಣದ ಪ್ರಾರಂಭದಿಂದ ಪ್ರಯಾಣ ಮುಕ್ತಾಯದವರೆಗಿನ ಸೇವೆ) ನೀಡಲು ಮುಂದಾಗಿದೆ. ಇದರಿಂದ ನೀವು ಬಸ್ ಬಳಸಿದ ನಂತರ ಮತ್ತೆ ಆಟೋ ಬಳಸಬೇಕಾದ ಅನಿವಾರ್ಯತೆ ಈ ಪ್ರದೇಶಗಳಲ್ಲಿ ತಪ್ಪಲಿದೆ.

ಎಲ್ಲೆಲ್ಲಿ ಬಿಎಂಟಿಸಿಯಿಂದ ಹೊಸ ಬಸ್‌ ಸೇವೆ: ಬಿಎಂಟಿಸಿಯು ಹಲವು ಹೊಸ ಮಾರ್ಗದಲಿ ಬಸ್‌ ಸೇವೆ ಕಲ್ಪಿಸುವುದಾಗಿ ತಿಳಿಸಿದೆ. ಹೊಸ ಬಸ್‌ ಸೇವೆ ಮಾರ್ಗಗಳಲ್ಲಿ ಬಸ್‌ ಸೇವೆ ಕಲ್ಪಿಸುವುದರ ಬಗ್ಗೆ ಜನರಿಂದಲೂ ಬಹು ಬೇಡಿಕೆಯೂ ಇತ್ತು. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಬಿಎಂಟಿಸಿ, ಈ ಮಾರ್ಗದಲ್ಲೂ ಹೊಸ ಬಸ್‌ಗಳನ್ನು ಬಿಟ್ಟಿದೆ. ಅದು ಯಾವುದು ಎನ್ನುವ ವಿವರ ಇಲ್ಲಿದೆ.

BMTC Good news BMTC bus will come on this route from now on

154: ಹಳೇ ಗುಡ್ಡದಹಳ್ಳಿ (Guddadahalli)- ಶಿವಾಜಿನಗರ: ಶಿರಸಿ (Sirsi Circle), ಕೆ.ಆರ್ ಮಾರ್ಕೆಟ್ ಮತ್ತು ಕಾರ್ಪೊರೇಷನ್ ಸರ್ಕಲ್ ಮಾರ್ಗವಾಗಿ ಈ ಬಸ್‌ ಸಾಗಲಿದೆ.

255 - R: ಯಶವಂತಪುರದ (Ttmc) ಮುಖ್ಯಬಸ್ ನಿಲ್ದಾಣದಿಂದ ರೈಲ್ವೆ ಗೊಲ್ಲಹಳ್ಳಿಗೆ ಹೋಗುವ ಮಾರ್ಗದಲ್ಲಿ ಹೊಸ ಬಸ್ ಪರಿಚಯಿಸಲಾಗಿದೆ. ಈ ಬಸ್‌ ಜಾಲಹಳ್ಳಿ ಕ್ರಾಸ್‌, ಮಾಕಳಿ ಹಾಗೂ ಹುಸ್ಕೂರು ಮಾರ್ಗವಾಗಿ ಹೋಗಲಿದೆ.

253C: ಯಶವಂತಪುರದಿಂದ ಕನಸವಾಡಿ: ಈ ಬಸ್ ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೆಸರಘಟ್ಟ, ಟಿ.ಬಿ ಕ್ರಾಸ್, ಕುಕ್ಕನಹಳ್ಳಿ ಹಾಗೂ ಮಧುರೆ ಮಾರ್ಗವಾಗಿ ಸಾಗಲಿದೆ.

374-S: ನೆಲಮಂಗಲ - ಸುಮನಹಳ್ಳಿ ಜಂಕ್ಷನ್‌: ಸೊಂಡೆಕೊಪ್ಪ, ತಾವರೆಕೆರೆ ಹಾಗೂ ಸುಂಕದಕಟ್ಟೆ ಮಾರ್ಗವಾಗಿ ಈ ಬಸ್‌ ಸಂಚರಿಸಲಿದೆ.

401- RA: ಚಿಕ್ಕೇಗೌಡನಪಾಳ್ಯದಿಂದ ಯಶವಂತಪುರ ಮುಖ್ಯಬಸ್ ನಿಲ್ದಾಣ: ಶ್ರೀನಿವಾಸಪುರ ಕ್ರಾಸ್, ಹಲಗೆವಡೇರಹಳ್ಳಿ, ವಿಜಯನಗರ ಹಾಗೂ ರಾಜಾಜಿನಗರ 1ನೇ ಬ್ಲಾಕ್ ಮಾರ್ಗವಾಗಿ ಈ ಬಸ್ ಸಾಗಲಿದೆ.

516: ನೆಲಮಂಗಲದಿಂದ ಕೆಂಗೇರಿ (ಟಿಟಿಎಂಸಿ): ಈ ಬಸ್ ಮಾದನಾಯಕನಹಳ್ಳಿ, ಗಂಗೊಂಡನಹಳ್ಳಿ, ಕಾಚೋಹಳ್ಳಿ, ಗೊಲ್ಲರಹಟ್ಟಿ, ಕನ್ನಳ್ಳಿ ಹಾಗೂ ಸೂಳಿಕೆರೆ ಮಾರ್ಗಗಳಲ್ಲಿ ಸಂಚರಿಸಲಿದೆ.

ನಾಳೆಯಿಂದಲೇ ಹೊಸ ಸೇವೆ ಪ್ರಾರಂಭ

ಇನ್ನು ಬಿಎಂಟಿಸಿಯು ಗಣೇಶ ಚತುರ್ಥಿ ಬೆನ್ನಲ್ಲೇ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌ ಸೇವೆ ಕಲ್ಪಿಸಿದ್ದು. ಈ ಮಾರ್ಗಗಳಲ್ಲಿ ನಾಳೆಯಿಂದಲೇ (ಸೆಪ್ಟೆಂಬ್ 9)ರಿಂದ ಬಿಎಂಟಿಸಿ ಬಸ್‌ಗಳು ಸಂಚಾರ ಪ್ರಾರಂಭಿಸಲಿವೆ.ಆದರೆ, ಈ ಬಸ್‌ಗಳು ನಾನ್‌ ಎಸಿ (ಎಸಿ ರಹಿತ) ಆಗಿರಲಿವೆ. ಇದರಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಪ್ರಯಾಣಿಸುವ ಬಸ್‌ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ಎಂಡ್‌ ಟು ಎಂಡ್‌ ಕನೆಕ್ಟಿವಿಟಿಗೆ ಸಹಕಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+