ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC e-buses: ನಾಲ್ಕು ತಿಂಗಳಲ್ಲಿ ಬೆಂಗಳೂರಿನಾದ್ಯಂತ ಸಂಚರಿಸಲಿವೆ 187 ಟಾಟಾ ಇ-ಬಸ್‌ಗಳು, ಮಾಹಿತಿ ತಿಳಿಯಿರಿ

|
Google Oneindia Kannada News

ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ PSU, 1,500 ಬಸ್‌ಗಳನ್ನು ಬೆಂಗಳೂರಿಗೆ ಘೋಷಿಸಲಾಗಿದೆ. ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ನ 'ಗ್ರ್ಯಾಂಡ್ ಚಾಲೆಂಜ್' ಯೋಜನೆಯಡಿ, ಒಟ್ಟು ವೆಚ್ಚದ ಒಪ್ಪಂದದಲ್ಲಿ (ಗುತ್ತಿಗೆ ಮಾದರಿ) ಈ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ.

CESL ನ ಟೆಂಡರ್‌ನಲ್ಲಿ, ಟಾಟಾ ಮೋಟಾರ್ಸ್ ಬೆಂಗಳೂರಿಗೆ 12 ವರ್ಷಗಳವರೆಗೆ 1,500 ನಾನ್-ಎಸಿ ಎಲೆಕ್ಟ್ರಿಕ್ ನೀಡಲಿದೆ. 12m ಬಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಒಂದು ಕಿಮೀಗೆ (ಚಾಲಕನ ವೆಚ್ಚ ಸೇರಿದಂತೆ) 41 ರೂಪಾಯಿಗಳು ಖರ್ಚಾಗಲಿದೆ. ಆದಾಗ್ಯೂ, ಬಿಎಂಟಿಸಿ ಇದುವರೆಗೆ 921 ಇ-ಬಸ್‌ಗಳನ್ನು ಬೆಂಗಳೂರು ನಗರದಾದ್ಯಂತ ಸಂಚಾರ ನಡೆಸುವುದಕ್ಕೆ ಆಸಕ್ತಿ ತೋರಿಸಿದೆ.

'921 ಇ-ಬಸ್‌ಗಳಲ್ಲಿ 187 ನಾಲ್ಕು ತಿಂಗಳಲ್ಲಿ ಸೇರ್ಪಡೆಗೊಳ್ಳಲಿದೆ. ಉಳಿದವು 2025 ರ ವೇಳೆಗೆ ಸೇರ್ಪಡೆಗೊಳ್ಳಲಿದೆ. ನಾವು ಶಾಂತಿನಗರ, ಕೆಆರ್ ಪುರಂ ಮತ್ತು ಹೊಸಕೋಟೆ ಡಿಪೋಗಳಲ್ಲಿ ಬಸ್‌ಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದ್ದೇವೆ' ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು 'ಟೈಮ್ಸ್ ಆಫ್‌ ಇಂಡಿಯಾ'ಗೆ ತಿಳಿಸಿದ್ದಾರೆ.

BMTC e-buses: 187 Tata e-buses to ply across Bengaluru in four months, know more

ಕೆಎಸ್‌ಆರ್‌ಟಿಸಿಯಿಂದ ಇ-ಬಸ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಶನಿವಾರದಂದು ಎಲೆಕ್ಟ್ರಿಕ್ ಬಸ್‌ನ ಮೂಲಮಾದರಿಯನ್ನು ಸ್ವೀಕರಿಸಿದ್ದು, ಇದರ ಪ್ರಾಯೋಗಿಕ ಚಾಲನೆಯು ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಾರಂಭವಾಗಲಿದೆ.

ಜನವರಿ-ಫೆಬ್ರವರಿ ವೇಳೆಗೆ ಐವತ್ತು ಬಸ್‌ಗಳು ಆರು ಇಂಟರ್‌ಸಿಟಿ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 12 ಇ-ಬಸ್‌ಗಳನ್ನು ಖಾಸಗಿ ಕಂಪನಿ ಒಲೆಕ್ಟ್ರಾ, ಒಟ್ಟು ವೆಚ್ಚದ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತದೆ.

BMTC e-buses: 187 Tata e-buses to ply across Bengaluru in four months, know more

ಎಸಿ ಬಸ್ 43 ಪುಶ್-ಬ್ಯಾಕ್ ಸೀಟ್‌ಗಳೊಂದಿಗೆ ಬರುತ್ತದೆ ಮತ್ತು ಆನ್‌ಬೋರ್ಡ್ ಮತ್ತು ಆಫ್‌ಬೋರ್ಡ್ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಒಂದೇ ಚಾರ್ಜ್‌ನಲ್ಲಿ 300 ಕಿಮೀ ವರೆಗೆ ಪ್ರಯಾಣಿಸಬಹುದು. ಲಿ-ಐಯಾನ್ ಫಾಸ್ಫೇಟ್ ಬ್ಯಾಟರಿಯನ್ನು ಎರಡರಿಂದ ಮೂರು ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಯುಎಸ್‌ಬಿ ಚಾರ್ಜರ್ ಪೋರ್ಟ್ ಹೊಂದಿರುವ ಬಸ್‌ನಲ್ಲಿ ಪ್ರಯಾಣಿಕರು ವೈಫೈ ಅನ್ನು ಸಹ ಬಳಸಬಹುದು.

ಕೇಂದ್ರ ಸರ್ಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಫೇಮ್ II) ಯೋಜನೆಯಡಿಯಲ್ಲಿ ಕೆಎಸ್‌ಆರ್‌ಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸುವುದು ಮಾಲಿನ್ಯವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಉತ್ತಮ ಬೆಳವಣಿಗೆಯಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ. 2030 ರ ವೇಳೆಗೆ, ಅವರು ಸಂಪೂರ್ಣ ಫ್ಲೀಟ್ ಎಲೆಕ್ಟ್ರಿಕ್ ಬಸ್‌ಗಳ ಯೋಜನೆಯನ್ನು ರೂಪಿಸುವುದಾಗಿ ಎಂದು ಅವರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ಬಹುಕಾಲದಿಂದ ಬಾಕಿ ಉಳಿದಿರುವ ವೇತನ ಹೆಚ್ಚಳದ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಶೀಘ್ರವೇ ಈಡೇರಿಸಲಾಗುವುದು ಎಂದು ಶ್ರೀರಾಮುಲು ಹೇಳಿದ್ದಾರೆ.

BMTC e-buses: 187 Tata e-buses to ply across Bengaluru in four months, know more

ಎಲೆಕ್ಟ್ರಿಕ್ ಬಸ್‌ಗಳ ಹೆಸರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು 'ಇ-ಎಕ್ಸ್‌ಪೀರಿಯೆನ್ಸ್ ಇ-ಲೆವೇಟ್' ಎಂಬ ಅಡಿಬರಹದೊಂದಿಗೆ 'ಇವಿ ಪವರ್ ಪ್ಲಸ್' ಹೆಸರನ್ನು ಆಯ್ಕೆ ಮಾಡಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಎಂ.ಡಿ ಅನ್ಬು ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಚಾರ್ಜಿಂಗ್ ಸ್ಟೇಷನ್‌ಗಳನ್ನು ಎಂದು ಮಾಹಿತಿ ನೀಡಿದ್ದಾರೆ.

English summary
Out of 921 e-buses given to Bangalore, 187 will be added in four months. The rest will be added by 2025,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X