BMTC: ಏಪ್ರಿಲ್ 2ರಿಂದ ಬೆಂಗಳೂರಿನ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆ
BMTC: ರಾಜ್ಯ ರಾಜಧಾನಿ ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಒಂದಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಬಿಡುತ್ತಲೇ ಬರುತ್ತಿದೆ. ಹಾಗೆಯೇ ಇದೀಗ ಎರಡು ಹೊಸ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲು ಮುಂದಾಗಿದೆ. ಹಾಗಾದ್ರೆ ಯಾವಾಗಿನಿಂದ ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವಾಗಿನಿಂದ ಬಸ್ ಸಂಚಾರ ಆರಂಭ: ಬೆಂಗಳೂರಿನ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ 2 ಮಾರ್ಗಗಳಲ್ಲಿ ಬಸ್ ಓಡಿಸಲು ಮುಂದಾಗಿದೆ. ಏಪ್ರಿಲ್ 2ರಿಂದ ಹೊಸ ಮಾರ್ಗಗಳಲ್ಲಿ ಬಸ್‌ಗಳು ಪ್ರಯಾಣಿಕರ ಸೇವೆಗೆ ಲಭ್ಯ ಆಗಲಿದೆ ಎಂದು ತಿಳಿಸಿದೆ.

ಯಾವ್ಯಾವ ಮಾರ್ಗಗಳಿಗೆ ಬಸ್ ಸೇವೆ?: ಕೆ.ಆರ್.ಮಾರುಕಟ್ಟೆ, ಉಪಾಧ್ಯಾಯ ಬಡಾವಣೆ, ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್, ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ, ಜ್ಞಾನ ಭಾರತಿ ಲೇಔಟ್ 1ನೇ ಬ್ಲಾಕ್, ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್, ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ ಮಾರ್ಗಗಳಲ್ಲಿ ಬಸ್ ಸೇವೆ ಆರಂಭಿಸಲು ಮುಂದಾಗಿದೆ.
ಈ ಬಗ್ಗೆ ಬಿಎಂಟಿಸಿ ಪ್ರಕಟಣೆ ನೀಡಿದ್ದು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ನೂತನ ಮಾರ್ಗವನ್ನು ಏಪ್ರಿಲ್ 2ರಿಂದ ಪರಿಚಯಿಸಲಾಗುವುದು ಎಂದು ತಿಳಿಸಿದೆ. ಹಾಗಾದ್ರೆ ಬಸ್ ಎಲ್ಲೆಲ್ಲಿಂದ ಯಾವಾಗ ಹೊರಡಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಸ್ ಸಂಚಾರ ಮಾರ್ಗ ಹಾಗೂ ಸಮಯಗಳ ವಿವರ
* ಮಾರ್ಗ ಸಂಖ್ಯೆ 220-ಬಿ/1 ಕೆ.ಆರ್. ಮಾರುಕಟ್ಟೆಯಿಂದ ಬೆಳಗ್ಗೆ 6.50, 8.40, 10.15 ಬಿಡಲಿದೆ. ಮಧ್ಯಾಹ್ನ 2.45, 4.15, ಸಂಜೆ 6.05, 7.45, ರಾತ್ರಿ 9.20.
* ಉಪಾಧ್ಯಾಯ ಬಡಾವಣೆಯಿಂದ ಬೆಳಗ್ಗೆ 6.10, 7.35, 9.25, 11, ಮಧ್ಯಾಹ್ನ 3.30, ಸಂಜೆ 5.15, 6.55, ರಾತ್ರಿ 8.35ಕ್ಕೆ ಹೊರಡಲಿದೆ.
* ಮಾರ್ಗ ಸಂಖ್ಯೆ: 220-ಸಿ/1 ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 6.15, 8.00, 9.50, ಮಧ್ಯಾಹ್ನ 3.15, ಸಂಜೆ 5.15, 7.10, ರಾತ್ರಿ 9.05ಕ್ಕೆ ಹೊರಡಲಿದೆ.
* ಜ್ಞಾನಭಾರತಿ ಲೇಔಟ್ 1ನೇ ಬ್ಲಾಕ್‌ನಿಂದ ಬೆಳಗ್ಗೆ 5.30, 7.05, 8.50, 11.10, ಸಂಜೆ 4.05, 6.10, ರಾತ್ರಿ 9.05ಕ್ಕೆ ಹೊರಡಲಿದೆ.
ಇದೇ ಮೊದಲೇನಲ್ಲ ಮೊದಲಿನಿಂದಲೂ ಸಹ ವಿಶೇಷ ಕಾರ್ಯಕ್ರಮಗಳ ವೇಳೆ ಬಿಎಂಟಿಸಿಯು ಬಸ್ ಸಂಚಾರದ ಸಮಯವನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಹೊಸ ವರ್ಷ, ಐಪಿಎಲ್ ಸೇರಿದಂತೆ ಇನ್ನಿತರ ವಿಶೇಷ ಕಾರ್ಯಕ್ರಮಗಳ ವೇಳೆ ಬಸ್ ಸೇವೆಯ ಸಮಯವನ್ನು ವಿಸ್ತರಣೆ ಮಾಡುತ್ತಾ ಬಂದಿದೆ. ಅಲ್ಲದೆ, ಪ್ರಯಾಣಿಕರ ಬೇಡಿಕೆ ಮೇರೆಗೆ ಅವರ ಅನುಕೂಲಕ್ಕೆ ತಕ್ಕಂತೆ ಹೊಸ ಮಾರ್ಗಗಳಿಗೆ ಬಸ್‌ಗಳ ಸಂಚಾರವನ್ನು ಕೂಡ ಆರಂಭಿಸಿದೆ. ಈ ಮೂಲಕ ಬಿಎಂಟಿಸಿ ಬೆಂಗಳೂರು ಜನರ ಜೀವನಾಡಿ ಸಾರಿಗೆಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯುವ ಮೂಲಕ ಜನಮನ್ನಣೆಯನ್ನು ಪಡೆದುಕೊಂಡಿವೆ.












Click it and Unblock the Notifications