ಚಾಮರಾಜಪೇಟೆ ಬಳಿ ಹೊತ್ತಿ ಉರಿದ ಬಸ್ : 30 ಪ್ರಯಾಣಿಕರು ಸೇಫ್
ಬೆಂಗಳೂರು, ಜ. 21: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಬಿಎಂಟಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಚಾಮರಾಜಪೇಟೆ ಬಳಿ ನಡೆದಿದೆ. ಬಸ್‌ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಪ್ರಾಣಾಪಾಯ ಇಲ್ಲದೇ ಪಾರಾಗಿದ್ದಾರೆ.
ಹೊಸಕೆರೆಹಳ್ಳಿಯಿಂದ ಕೆ.ಆರ್. ಮಾರ್ಕೆರ್ಟ್‌ಗೆ ಹೋಗುತ್ತಿದ್ದ KA 57 F 1592 ನಂಬರಿನ ಬಿಎಂಟಿಸಿ ಬಸ್ ಚಾಮರಾಜಪೇಟೆ ಮೂಲಕ ಮಾರ್ಕೆಟ್ ಗೆ ತೆರಳುತ್ತಿದ್ದು. ಮಕ್ಕಳ ಕೂಟ ಬಸ್ ನಿಲ್ದಾಣ ಸಮೀಪ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ನೀಡಿದ ಎಚ್ಚರಿಕೆ ಮೇಲೆ ಬಸ್‌ನಲ್ಲಿದ್ದ 30 ಪ್ರಯಾಣಿಕರು ಇಳಿದಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಮಕ್ಕಳ ಕೂಟದ ಪಾರ್ಕ್ ನ ನಲ್ಲಿಯಿಂದ ನೀರು ಬಿಟ್ಟು ಬಸ್ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಬಸ್ ಗೆ ಬಿದ್ದಿದ್ದ ಬೆಂಕಿ ನಂದಿಸಿದರು. ಅಷ್ಟರಲ್ಲಿ ಬಸ್ ಬಹುತೇಕ ಸುಟ್ಟು ಕರಕಲಾಗಿತ್ತು. ಯಾವುದೇ ಪ್ರಾಣಾಪಾಯ ಆಗಿಲ್ಲ. ಬಸ್ ನಲ್ಲಿ ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ಇಂಧನ ಟ್ಯಾಂಕ್ ಗೆ ಬೆಂಕಿ ಬಿದ್ದ ಪರಿಣಾಮ ಬಸ್ ಹೊತ್ತಿ ಹೊರಿದಿದೆ. ಸೆಂಟ್ರಲ್ ವಿಭಾಗದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications