ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಬಸ್, ವೇಳಾಪಟ್ಟಿ
ಬೆಂಗಳೂರು, ಜನವರಿ 03 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬಸ್ ಸೇವೆಯನ್ನು ಆರಂಭಿಸಿದೆ. ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ನೂರಾರು ಭಕ್ತರಿಗೆ ಇದರಿಂದಾಗಿ ಸಹಾಯಕವಾಗಲಿದೆ.
ಶುಕ್ರವಾರ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಯಲಹಂಕದ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ಬಸ್ ಸೇವೆಗೆ ಚಾಲನೆ ನೀಡಿದರು. ಇಂದನಿಂದಲೇ ಬಸ್‌ಗಳ ಸಂಚಾರ ಆರಂಭವಾಗಿದೆ.
ಘಾಟಿ ಸುಬ್ರಮಣ್ಯ ದೇವಾಲಯದ ದಕ್ಷಿಣ ಭಾರತದಲ್ಲಿ ನಾಗಾರಾಧನೆ ಮಾಡುವ ಪ್ರಮುಖ ದೇವಾಲಯವಾಗಿದೆ. ಬೆಂಗಳೂರು ನಗರದಿಂದ ಸುಮಾರು 51 ಕಿ. ಮೀ. ದೂರದಲ್ಲಿ ಈ ಕ್ಷೇತ್ರವಿದ್ದು, ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ಭಕ್ತರ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಮಣ್ಯಕ್ಕೆ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಒಟ್ಟು ಎರಡು ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳು ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಸಂಚಾರವನ್ನು ನಡೆಸಲಿವೆ.
ವೇಳಾಪಟ್ಟಿ: ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಮಣ್ಯಕ್ಕೆ ಬೆಳಗ್ಗೆ 8.15, ಮಧ್ಯಾಹ್ನ 1.50 ಹಾಗೂ 3.40ಕ್ಕೆ ಬಸ್ ಹೊರಡಲಿದೆ. ದೇವಾಲಯದಿಂದ ದೊಡ್ಡಬಳ್ಳಾಪುರಕ್ಕೆ ಬೆಳಗ್ಗೆ 9.35, ಮಧ್ಯಾಹ್ನ 2.45 ಮತ್ತು ಸಂಜೆ 5 ಗಂಟೆಗೆ ಬಸ್ ಸಂಚರಿಸಲಿದೆ.












Click it and Unblock the Notifications