ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಶ್ರಯ ಮನೆಗಳ ಜಾಗವನ್ನು ಆಕ್ರಮಿಸಿಕೊಂಡ ಬಿಎಂಟಿಸಿ: ಆಕ್ರೋಶ

By Nayana
|
Google Oneindia Kannada News

ಬೆಂಗಳೂರು, ಜು.20: ಹದಿನೈದು ವರ್ಷಗಳ ಹಿಂದೆ ಆಶ್ರಯ ಮನೆಗೆಂದು ನಮಗೆ ಜಾಗ ಕೊಟ್ಟಿದ್ದರು. ಮನೆಗಳನ್ನು ನಾವು ಕಟ್ಟಿಕೊಂಡಿದ್ದೇವೆ. ಆದರೆ ಈಗ ಆಶ್ರಯ ಮನೆಯ ಜಾಗವನ್ನು ಸರ್ಕಾರ ಬಿಎಂಟಿಸಿ ನೀಡಿದೆ.ನಾವೆಲ್ಲಾ ಎಲ್ಲಿಗೆ ಹೋಗಬೇಕು ಎಂದು ಗ್ರಾಮಸ್ಥರು ಕಂದಾಯ ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡರು.

ದಾಸನಪುರ ಹೋಬಳಿಗೋಪಾಲಪುರ ಗ್ರಾಮ ಪಂಚಾಯ್ತಿ ಸಭೆಯಲ್ಲಿ ತೋಟಗೆರೆ ನಿವಾಸಿಗಳು ತಮ್ಮ ಅತಂತ್ರ ಬದುಕಿನ ಬಗ್ಗೆ ಹೇಳಿಕೊಂಡರು.ಸರ್ಕಾರವು ಒಂದು ತಿಂಗಳ ಹಿಂದೆ ಸರ್ವೇ ನಂ.26 ಬಿಎಂಟಿಸಿಗೆ ಮಂಜೂರು ಮಾಡಿದೆ. ಸರ್ವೇ 26ರಲ್ಲಿ ಆಶ್ರಯ ಮನೆಯಗಳನ್ನು ಕಟ್ಟಿಕೊಂಡಿದ್ದಾರೆ.

ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ

ಹದಿನೈದು ವರ್ಷಗಳ ಹಿಂದೆ ಆಶ್ರಯ ಮನೆಗಳ ನಿರ್ಮಾಣವಾಗಿದೆ.ಆಶ್ರಯ ಮನೆಗಳನ್ನು ಒಡೆದು ಬಿಎಂಟಿಸಿ ಏನಾದರೂ ಕಾಮಗಾರಿ ಮಾಡಿದರೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

BMTC acquires Ashtraya Housing scheme lands

ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿಯವರು ಮಾತನಾಡಿ, ಬಡವರಿಗೆ ಅನ್ಯಾಯವಾಗುವುದನ್ನು ಕಾಂಗ್ರೆಸ್‌ ಸರ್ಕಾರವು ಸಹಿಸುವುದಿಲ್ಲ. ಆಶ್ರಯ ಮನೆಗಳನ್ನು ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಬಗ್ಗೆ ಭಯಬೇಡ ಎಂದು ಭರವಸೆ ನೀಡಿದರು.

ಜನರಿಗೆ ಮೂಲಭೂತತ ಸೌಕರ್ಯವನ್ನು ಕಲ್ಪಿಸಿಕೊಡಲಾಗುತ್ತದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ನಮ್ಮ ಯೋಜನೆಗಳು ಜನರಿಗೆ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.

English summary
Local residents of Dasanapura making allegations against BMTC that they have acquired land which allocated to Ashraya Housing scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X