ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋಗೆ ಸಾವಿರ ಮರಗಳ ಆಪೋಶನ ಬದಲು ಸ್ಥಳಾಂತರಕ್ಕೆ ನಿರ್ಧಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಕೆಆರ್‌ಪುರ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಮೆಟ್ರೋ ಕಾಮಗಾರಿಗಾಗಿ 1037 ಮರಗಳನ್ನು ಕತ್ತರಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ 829 ಮರಗಳನ್ನು ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಈ ನಡುವಿನ ರೈಲ್ವೆ ಮಾರ್ಗಕ್ಕಾಗಿ 1037ಮರಗಳನ್ನು ಕಡಿಯಬೇಕಾಗಿದೆ. ಪರಿಸರವಾದಿಗಳ ವಿರೋಧದಿಂದಾಗಿ 829 ಮರಗಳನ್ನು ಸ್ಥಳಾಂತರ ಮಾಡುವ ಉಪಾಯಕ್ಕೆ ಬಂದಿದೆ. ಕೆಆರ್‌ಪುರ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸ್ಥಳಾಂತರಿಸುವ ಹಾಗೂ ಕಡಿಯುವ ಮರಗಳ ಬಗ್ಗೆ ಚರ್ಚಿಸಲು ಅಕ್ಟೋಬರ್ ಅಂತ್ಯದಲ್ಲಿ ಸಭೆ ಕರೆಯಲಾಗಿದೆ. ಅರಣ್ಯ ವಿಭಾಗಕ್ಕೆ ಸಲ್ಲಿಕೆಯಾಗಿರುವ ಜಂಟಿ ಸರ್ವೆ ವರದಿಯನ್ನು ಕೂಡ ಪರಿಶೀಲಿಸಲಾಗುತ್ತದೆ. 50ಕ್ಕಿಂತ ಹೆಚ್ಚು ಮರಗಳಿರುವವುದರಿಂದ ನಿಯಮ ಪ್ರಕಾರ ಸಾರ್ವಜನಿಕರ ಸಭೆ ಕರೆಯಬೇಕಾಗುತ್ತದೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

17ಕಿಮೀ ಉದ್ದದ ರೈಲು ಮಾರ್ಗಕ್ಕಾಗಿ ಭಾರಿ ಸಂಖ್ಯೆಯಲ್ಲಿ ಮರಗಳನ್ನು ಕಡಿಯಬೇಕಾಗಿರುವುದರಿಂದ ಇದು ಪರಿಸರ ವಾದಿಗಳ ಕೆಂಗಣ್ಣಿಗೆ ಕಾರಣವಾಗಿದೆ.ಕಡಿಯಬೇಕಾದ ಮರಗಳ ಕುರಿತು ಬಿಎಂಆರ್‌ಸಿಎಲ್ ಬಿಬಿಎಂಪಿ ಜಂಟಿ ಸರ್ವೆ ನಡೆಸಿದ್ದು, ಇದರಲ್ಲಿ 829 ಮರಗಳನ್ನು ಉಳಿಸಿಕೊಳ್ಳಲು ಸ್ಥಳಾಂತರ ಮಾಡುತ್ತೇವೆ ಎಂದು ಹೇಳಿದೆ. ಈ ಮಧ್ಯೆ ಈ ಮಾರ್ಗಕ್ಕಾಗಿ 1037 ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಬಿಎಂಆರ್‌ಸಿಎಲ್ ನಿಂದ ಬಿಬಿಎಂಪಿಗೆ ಮನವಿ ಸಲ್ಲಿಕೆಯಾಗಿದೆ.

1037 ಮರಗಳಲ್ಲಿ 829ಮರಗಳ ಸ್ಥಳಾಂತರ

1037 ಮರಗಳಲ್ಲಿ 829ಮರಗಳ ಸ್ಥಳಾಂತರ

ಕೆಆರ್‌ಪುರ, ಸಿಲ್ಕ್ ಬೋರ್ಡ್ ಮೆಟ್ರೋ ಮಾರ್ಗಕ್ಕಾಗಿ 1037ಮರಗಳ ಮಾರಣಹೋಮ ಮಾಡಲೇಬೇಕೆನ್ನುವ ನಿರ್ಧಾರಕ್ಕೆ ಬಿಎಂಆರ್‌ಸಿಎಲ್ ಬಂದಿತ್ತು ಆದರೆ ಪರಿಸರವಾದಿಗಳ ವಿರೋಧದಿಂದಾಗಿ ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಜಂಟಿ ಸರ್ವೇ ಮಾಡಿ ಅದರಲ್ಲಿ 829ಮರಗಳನ್ನು ಉಳಿಸಬಹುದಾಗಿದೆ. ಅದನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸಾರ್ವಜನಿಕ ಸಭೆ ಕರೆದ ಬಿಎಂಆರ್‌ಸಿಎಲ್

ಸಾರ್ವಜನಿಕ ಸಭೆ ಕರೆದ ಬಿಎಂಆರ್‌ಸಿಎಲ್

ಮರಗಳ ಸ್ಥಳಾಂತರ ಹಾಗೂ ಮರಗಳ ಕಡಿತ ಕುರಿತು ಸಾರ್ವಜನಿಕರ ಸಲಹೆ ಮಡೆಯುವ ನಿಟ್ಟಿನಲ್ಲಿ ಅಕ್ಟೋಬರ್ ಅಂತಿಮ ವಾರದಲ್ಲಿ ಸಭೆ ನಿಗದಿ ಮಾಡಲಾಗಿದೆ.50ಕ್ಕಿಂತ ಹೆಚ್ಚು ಮರಗಳನ್ನು ಕಡಯುವುದಾದರೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯುವುದು ಅನಿವಾರ್ಯವಾಗಿದೆ.

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ! ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ!

ಕೆಂಪೇಗೌಡ ವಿಮಾನ ನಿಲ್ದಾ, ನಾಗವಾರ ಮಟ್ರೋ ಮಾರ್ಗ ಬದಲು

ಕೆಂಪೇಗೌಡ ವಿಮಾನ ನಿಲ್ದಾ, ನಾಗವಾರ ಮಟ್ರೋ ಮಾರ್ಗ ಬದಲು

ನಾಗವಾರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕಿಸುವ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಬದಲಾವಣೆಯಾಗಲಿದೆ. 29.62 ಕಿ.ಮೀ. ಉದ್ದದ ಮಾರ್ಗವಿದಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೂಲ ಯೋಜನೆಯ ಮಾರ್ಗವನ್ನು ಬದಲಾವಣೆ ಮಾಡಲು ಮುಂದಾಗಿದೆ. ಹೆಬ್ಬಾಳ ಮೂಲಕ ನೂತನ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದು ನಕ್ಷೆ ತಯಾರಿಸಲಾಗಿದೆ.

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ನಲ್ಲಿ ದೊರೆಯಲಿದೆ

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ನಲ್ಲಿ ದೊರೆಯಲಿದೆ

ನಮ್ಮ ಮೆಟ್ರೋ ಟೋಕನ್ ಖರೀದಿಸಲು ಇನ್ನುಮುಂದೆ ಸರತಿಸಾಲಿನಲ್ಲಿ ನಿಲ್ಲಬೇಕಿಲ್ಲ, ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡಿದೆ. ಪ್ರಯಾಣಿಕರು ತಮ್ ಸ್ಮಾರ್ಟ್ ಪೋನ್‌ನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕಾಗುತ್ತದೆ. ನಂತರ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್‌ಲೈನ್ ಮೂಲಕ ಬಿಎಂಆರ್‌ಸಿಎಲ್ ಗೆ ಜಮಾ ಆಗಲಿದೆ.

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಎರಡು ವರ್ಷ ಕಾಯಬೇಕು

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಎರಡು ವರ್ಷ ಕಾಯಬೇಕು

ಎರಡನೇ ಹಂತದ ಕನಕಪುರ ರಸ್ತೆ - ಯಲಚೇನಹಳ್ಳಿ ಮತ್ತು ನಾಯಂಡಹಳ್ಳಿ-ಕೆಂಗೇರಿ ನಡುವೆ ನಮ್ಮ ಮೆಟ್ರೋ ಕಾಮಗಾರಿ 2020ಕ್ಕೆ ಕೊನೆಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ.ಈಗಾಗಲೇ 2019ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು ಹಲವು ಕಾರಣಗಳಿಂದಾಗಿ 2020ಕ್ಕೆ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎರಡೂ ಮಾರ್ಗದಲ್ಲೂ ಒಂದೇ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ .

English summary
BMRCL is planning to shift around 829 trees for KR Puram to silk board metro project to avoid opposition by environmentalists and residents. It was told that total 1,037 trees to remove for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X