ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಥಿಯೇಟರ್‌, ಮಾಲ್ ನಿರ್ಮಾಣ

|
Google Oneindia Kannada News

ಬೆಂಗಳೂರು, ನವೆಂಬರ್ 08; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಜಾಲ ಹೆಚ್ಚಿದಂತೆ ಆದಾಯ ಸಂಗ್ರಹದ ಕಡೆಗೂ ಗಮನ ನೀಡುತ್ತಿದೆ. ಆದ್ದರಿಂದ ಇನ್ನಷ್ಟು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಆದಾಯ ಸಂಗ್ರಹಣೆ ಭಾಗವಾಗಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಇನ್ನೂ ನಾಲ್ಕು ಮಹಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ಥಿಯೇಟರ್, ಶಾಪಿಂಗ್ ಮಾಲ್ ಸೇರಿದಂತೆ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ.

ನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿ

ನಾಡಪ್ರಭು ಕೆಂಪೇಗೌಡ ನಿಲ್ದಾಣ ನಮ್ಮ ಮೆಟ್ರೋ ಜಾಲದ ಪ್ರಮುಖ ನಿಲ್ದಾಣವಾಗಿದೆ. ಇದು ಇಂಟರ್‌ ಚೇಂಜ್ ನಿಲ್ದಾಣವಾಗಿದ್ದು, ನೇರಳೆ ಮಾರ್ಗದಿಂದ ಹಸಿರು ಮಾರ್ಗ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ರೈಲು ಬದಲಿಸುವವರು ನಿಲ್ದಾಣದಲ್ಲಿ ಇಳಿಯುತ್ತಾರೆ. ದಿನಕ್ಕೆ ಲಕ್ಷಾಂತರ ಜನರು ಈ ನಿಲ್ದಾಣಕ್ಕೆ ಆಗಮಿಸುತ್ತಾರೆ.

Breaking; ವೈಟ್‌ಫೀಲ್ಡ್‌-ಐಟಿಪಿಎಲ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು Breaking; ವೈಟ್‌ಫೀಲ್ಡ್‌-ಐಟಿಪಿಎಲ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು

ನೆಲದಡಿಯಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿರ್ಮಾಣ ಮಾಡುವಾಗಲೇ ಭವಿಷ್ಯದ ವಾಣಿಜ್ಯ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ಆದ್ದರಿಂದ ನೆಲದಡಿಯಲ್ಲಿಯೇ ಹೊಸದಾಗಿ ನಾಲ್ಕು ಮಹಡಿ ನಿರ್ಮಾಣ ಮಾಡಿ, ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ.

11 ವರ್ಷ ಪೂರ್ಣಗೊಂಡ ನಮ್ಮ ಮೆಟ್ರೋ: ನಿತ್ಯ 8 ಲಕ್ಷ ಪ್ರಯಾಣಿಕ ಸಂಖ್ಯೆ ತಲುಪುವ ಗುರಿ 11 ವರ್ಷ ಪೂರ್ಣಗೊಂಡ ನಮ್ಮ ಮೆಟ್ರೋ: ನಿತ್ಯ 8 ಲಕ್ಷ ಪ್ರಯಾಣಿಕ ಸಂಖ್ಯೆ ತಲುಪುವ ಗುರಿ

1 ಲಕ್ಷಕ್ಕೂ ಅಧಿಕ ಜನರ ಭೇಟಿ

1 ಲಕ್ಷಕ್ಕೂ ಅಧಿಕ ಜನರ ಭೇಟಿ

ಹಸಿರು, ನೇರಳೆ ಮಾರ್ಗದಿಂದ ರೈಲು ಬದಲಿಸುವ ಸುಮಾರು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರತಿದಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ಗೆ ಭೇಟಿ ನೀಡುತ್ತಾರೆ. ಆದ್ದರಿಂದ ಈ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಿದರೆ ಆದಾಯ ಸಂಗ್ರಹ ಮಾಡಬಹುದು ಎಂಬುದು ಬಿಎಂಆರ್‌ಸಿಎಲ್ ಚಿಂತನೆಯಾಗಿದೆ.

ನಿಲ್ದಾಣದಲ್ಲಿ ಯಾವ ಮಾದರಿಯ ಚಟುವಟಿಕೆ ಕೈಗೊಳ್ಳಬಹುದು ಎಂದು ವರದಿ ನೀಡಲು ಖಾಸಗಿ ಸಂಸ್ಥೆಯೊಂದಕ್ಕೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಬಿಎಂಆರ್‌ಸಿಎಲ್ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಸರ್ಕಾರವು ಸಹ ಈ ಯೋಜನೆಗೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.

7 ಎಕರೆ ಪ್ರದೇಶದಲ್ಲಿದೆ ನಿಲ್ದಾಣ

7 ಎಕರೆ ಪ್ರದೇಶದಲ್ಲಿದೆ ನಿಲ್ದಾಣ

ಬಿಎಂಆರ್‌ಸಿಎಲ್ ನೆಲದಡಿಯಲ್ಲಿ ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ 7 ಎಕರೆ ಪ್ರದೇಶದಲ್ಲಿದೆ. ನೇರಳೆ ಮಾರ್ಗವನ್ನು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ತನಕ ವಿಸ್ತರಣೆ ಮಾಡಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಯಾಣಿಕರು ಮೆಜೆಸ್ಟಿಕ್ ನಿಲ್ದಾಣಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ಆದ್ದರಿಂದಲೇ ಪ್ರಯಾಣಿಕರನ್ನು ಆಕರ್ಷಿಸಲು, ಬಿಎಂಆರ್‌ಸಿಎಲ್‌ಗೆ ಆದಾಯ ಸಂಗ್ರಹ ಮಾಡಲು ನಮ್ಮ ಮೆಟ್ರೋ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಲಾಗುತ್ತದೆ.

ಆಫೀಸ್, ಮಾಲ್, ಥಿಯೇಟರ್‌ಗಳ ನಿರ್ಮಾಣ

ಆಫೀಸ್, ಮಾಲ್, ಥಿಯೇಟರ್‌ಗಳ ನಿರ್ಮಾಣ

ಬೆಂಗಳೂರಿನ ಮೆಜೆಸ್ಟಿಕ್ ಸದಾ ಜನದಟ್ಟಣೆಯಿಂದ ಕೂಡಿರುವ ಪ್ರದೇಶ. ಪ್ರತಿನಿತ್ಯ ಲಕ್ಷಾಂತರ ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ನಮ್ಮ ಮೆಟ್ರೋ ಹೊರತುಪಡಿಸಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ ಸಹ ಇದೇ ಪ್ರದೇಶದಲ್ಲಿದೆ.

ಆದ್ದರಿಂದ ಇಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಿದರೆ ಅನುಕೂಲವಾಗಲಿದೆ ಎಂಬುದು ಬಿಎಂಆರ್‌ಸಿಎಲ್ ಲೆಕ್ಕಾಚಾರವಾಗಿದೆ. ಖಾಸಗಿ ಸಂಸ್ಥೆ ಯಾವ ಚಟುವಟಿಕೆ ಆರಂಭಿಸಬಹುದು ಎಂದು ಅಧ್ಯಯನ ಮಾಡಿ ವರದಿ ಕೊಡಲಿದೆ.

ನಾಲ್ಕು ಮಹಡಿಗಳನ್ನು ನಿರ್ಮಾಣ ಮಾಡಿ ಶಾಪಿಂಗ್ ಮಾಲ್, ಥಿಯೇಟರ್, ಕಚೇರಿಗಳಿಗೆ ಬಾಡಿಗೆ ನೀಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಈ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅನುಷ್ಠಾನಗೊಳ್ಳಬೇಕಿದೆ.

ಪಾರ್ಕಿಂಗ್ ಲಾಟ್‌ ನಿರ್ಮಾಣ

ಪಾರ್ಕಿಂಗ್ ಲಾಟ್‌ ನಿರ್ಮಾಣ

ಮೆಜೆಸ್ಟಿಕ್ ಸುತ್ತಮುತ್ತ ವಾಹನ ನಿಲ್ಲಿಸುವುದು ದೊಡ್ಡ ಸವಾಲು. ಇದನ್ನು ಪರಿಗಣಿಸಿರುವ ಬಿಎಂಆರ್‌ಸಿಎಲ್ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಪಾರ್ಕಿಂಗ್‌ಗೆ ಅವಕಾಶ ನೀಡುವ ಮೂಲಕ ಸಹ ಆದಾಯ ಸಂಗ್ರಹಣೆ ನಡೆಯಲಿದೆ.

ಕೆ. ಆರ್. ಪುರ, ಮೈಸೂರು ರಸ್ತೆ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಸಹ ಇದೇ ಮಾದರಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

English summary
BMRCL planning to build four extra floor at Nadaprabu Kempegowda interchange Namma Metro station, Majestic. Shopping mall, film theatre will come up in metro station as per the plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X