ಏರ್‌ಪೋರ್ಟ್ ಮೆಟ್ರೋ ಮಾರ್ಗಕ್ಕೆ 141 ಕೋಟಿ ರೂ ವೆಚ್ಚದ ಭೂಮಿ ಖರೀದಿ
ಬೆಂಗಳೂರು, ಏ.1: ನಮ್ಮ ಮೆಟ್ರೋ ಕೆಂಪೇಗೌಡ ಏರ್‌ಪೋರ್ಟ್ ಮಾರ್ಗಕ್ಕೆ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ 1.05 ಲಕ್ಷ ಚದರ ಮೀಟರ್ ಭೂಮಿಯು ಏರ್‌ಪೋರ್ಟ್ ಮೆಟ್ರೋ ಯೋಜನೆಗಾಗಿ ಬಿಎಂಆರ್‌ಸಿಎಲ್ ಗೆ ಹಸ್ತಾಂತರವಾಗಲಿದೆ.
ಇದಕ್ಕಾಗಿ ಮೆಟ್ರೋ ನಿಗಮವು ಪ್ರಾಧಿಕಾರಕ್ಕೆ 141 ಕೋಟಿ ರೂ ಪಾವತಿಸಿದೆ. 2008ರಲ್ಲಿ ಹೈಸ್ಪೀಡ್ ರೈಲು ಯೋಜನೆಗಾಗಿ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್‌ನಿಂದ ಟ್ರಂಪೆಟ್ ಜಂಕ್ಷನ್‌ವರೆಗೆ 1.05 ಲಕ್ಷ ಚ.ಮೀ ಭೂಮಿಯನ್ನು ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿತ್ತು. ಇದೇ ವೇಳೆ ಮೆಟ್ರೋ ಯೋಜನೆಯೂ ಕೂಡ ಪ್ರಗತಿಯಲ್ಲಿತ್ತು.

ಹೈಸ್ಪೀಡ್ ರೈಲು ಬದಲು ಮೆಟ್ರೋ ಮಾರ್ಗ ನಿರ್ಮಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಹೈಸ್ಪೀಡ್ ರೈಲು ಯೋಜನೆಯನ್ನು ಕೈಬಿಟ್ಟಿದ್ದರೂ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಮಾತ್ರ ಪ್ರಾಧಿಕಾರದ ಬಳಿಯೇ ಇತ್ತು.
ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಿಸಲಾಗುತ್ತಿದೆ. ಅಂದಾಜು 10,584 ಕೋಟಿ ರೂ ವೆಚ್ಚದ ಮೆಟ್ರೋ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಬಳಿಕ ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆಯಲಿದೆ.
ಒಟ್ಟು 17 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದೆ. 2023-24ರ ವೇಳೆಗೆ ಕಾಮಗಾರಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications