Namma Metro: ಬಿಎಂಆರ್‌ಸಿಎಲ್ ಚಿಕ್ಕಜಾಲ, ಬೆಟ್ಟದ ಹಲಸೂರು ಮೆಟ್ರೋ ನಿಲ್ದಾಣಗಳನ್ನು ಕೈಬಿಡಲು ಕಾರಣ ಏನು?
Namma Metro: ರಾಜ್ಯ ರಾಜಧಾನಿಯ ಪ್ರಮುಖ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಇನ್ನು ಇದೀಗ ಬಹುನಿರೀಕ್ಷಿತ ಚಿಕ್ಕಜಾಲ ಹಾಗೂ ಬೆಟ್ಟದ ಹಲಸೂರು ಎರಡು ಮೆಟ್ರೋ ನಿಲ್ದಾಣಗಳ ಕಾಮಗಾರಿಯನ್ನು ಕೈಬಿಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಲಗಲಿ ಬಹುತೇಕ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಂಡು ತಮ್ಮ ಗಮ್ಯಸ್ಥಾನಕ್ಕೆ ಬೇಗ ತಲುಪಲು ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನೂ ಇದೀಗ ಸಿಲ್ಕ್ ಬೋರ್ಟ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಬೇಸರದ ಮಾಹಿತಿಯೊಂದನ್ನು ನೀಡಿದೆ. ಇಲ್ಲಿದೆ ನೋಡಿ ಮಾಹಿತಿ.

ಸಿಲ್ಕ್ ಬೋರ್ಡ್ನಿಂದ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ನಮ್ಮ ಮೆಟ್ರೋ ಬಗ್ಗೆ ಜನರು ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದರು. ಈ ನಡುವೆಯೇ ಇದೀಗ ಚಿಕ್ಕಜಾಲ ಮತ್ತು ಬೆಟ್ಟದ ಹಲಸೂರು ಎರಡು ಮೆಟ್ರೋ ನಿಲ್ದಾಣಗಳ ಕಾಮಗಾರಿಯನ್ನು ಕೈಬಿಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.
ಚಿಕ್ಕಜಾಲ & ಬೆಟ್ಟದ ಹಲಸೂರು ನಿಲ್ದಾಣಗಳಿಗಾಗಿ ಈ ಭಾಗದ ಹಲವು ಕಂಪನಿಗಳು ಹಣ ಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಇದೀಗ ಕಂಪನಿಗಳು ಹಣ ಕೊಡಲು ಹಿಂದೇಟು ಹಾಕುತ್ತಿವೆ. ಈ ಎರಡು ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಾದರೆ, ಸುಮಾರು 300 ಕೋಟಿ ರೂಪಾಯಿಯಷ್ಟು ವೆಚ್ಚ ತಗುಲಲಿದೆ.
ಆದ್ದರಿಂದ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆ ಸದ್ಯ ಎರಡು ನಿಲ್ದಾಣಗಳ ಕಾಮಗಾರಿಯನ್ನು ಕೈಬಿಡಲಿದ್ದೇವೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.
ಈ ಎರಡು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್‌ಸಿಎಲ್ ತೀರ್ಮಾನ ಮಾಡಿದ್ದು, ಸರ್ಕಾರವು ಬಿಎಂಆರ್‌ಸಿಎಲ್‌ನ ಈ ನಿರ್ಧಾರಕ್ಕೆ ಯಾವ ರೀತಿಯಾಗಿ ಸ್ಪಂದನೆ ನೀಡುತ್ತದೆ ಎಂದು ಕಾದುನೋಡಬೇಕಿದೆ.
ಪ್ರಮುಖ ಸೂಚನಾ ಫಲಕಗಳು: ಬೆಂಗಳೂರು ಸುತ್ತಮುತ್ತ ಪುರಾತನ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಅದರಲ್ಲೂ ಬೆಂಗಳೂರಿನ ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಸುತ್ತ 1.5 ಕಿಲೋ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗಾದರೆ ಇದರಲ್ಲಿ ಯಾವೆಲ್ಲ ಸ್ಥಳಗಳ ಬಗ್ಗೆ ಮಾಹಿತಿ ಇದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ನಗರದಲ್ಲಿನ ಪುರಾತನ ಸ್ಥಳಗಳಿಗೆ ಭೇಟಿ ನೀಡಲು ಯೋಚನೆ ಮಾಡುವ ಅವಶ್ಯಕತೆಯಿಲ್ಲ. ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಯಾವುದೇ ದ್ವಾರದಿಂದ ಹೊರಬಂದರೂ ಬನ್ನಿ ನೋಡಿ ಎಂಬ ಸೂಚನಾ ಫಲಕವನ್ನು ಅಳವಡಿಕೆ ಮಾಡಿದ್ದು, ಈ ಇಂಟರೆಸ್ಟಿಂಗ್ ಸೂಚನಾ ಫಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಲೇ ಇದೆ.
ಈ ಸೂಚನಾ ಫಲಕವು ಮೆಟ್ರೋ ನಿಲ್ದಾಣ ಸುತ್ತಮುತ್ತ ಇರುವ ಪುರಾತನ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ. ಬೆಂಗಳೂರು ಕೋಟೆಯ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಎಂಬ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಮಾರ್ಗದರ್ಶನದಿಂದ ನೀವು ಸುಲಭವಾಗಿ ಪುರಾತನ ಸ್ಥಳಗಳಿಗೆ ಭೇಟಿ ನೀಡಬಹುದು.
ಇನ್ನು ಈ ಸೂಚನಾ ಫಲಕದಲ್ಲಿ 20ನೇ ಶತಮಾನಕ್ಕೆ ಸೇರಿದ ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಮತ್ತು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬಗ್ಗೆ ಮಾಹಿತಿ ಇರುತ್ತದೆ. ಜೊತೆಗೆ ಈ ಸ್ಥಳಗಳಿಗೆ ಹೇಗೆ ಹೋಗಬೇಕೆಂಬ ಮಾರ್ಗದರ್ಶಿ ಮ್ಯಾಪ್ ಕೂಡ ಇರುತ್ತದೆ. ಈ ಸೂಚನಾ ಫಲಕ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿಯೂ ಇದೆ.
ಬನ್ನಿ ನೋಡಿ ಸೂಚನಾ ಫಲಕ ಪರಿಕಲ್ಪನೆಯನ್ನು ನಮ್ಮ ಮೆಟ್ರೋ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಭಾಗಿತ್ವದಲ್ಲಿ ಸೆನ್ಸಿಂಗ್ ಲೋಕಲ್, ಅರ್ಬನ್ ಲಿವಿಂಗ್ ಲ್ಯಾಬ್ ಮತ್ತು ನೇಟಿವ್ ಪ್ಲೇಸ್ ಸಂಸ್ಥೆಗಳು ಜಂಟಿಯಾಗಿ ಆರಂಭ ಮಾಡಿವೆ.












Click it and Unblock the Notifications