BMRCL: ನಮ್ಮ ಮೆಟ್ರೋ ಪ್ರಯಾಣಿಕರಿಂದ 6 ತಿಂಗಳಲ್ಲಿ ₹32,00,000 ದಂಡ ವಸೂಲಿ-ಕಾರಣ ಏನು?
BMRCL: ಪ್ರಯಾಣಿಕರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಇದ್ದರೆ ದಂಡ ವಿಧಿಸಲಾಗುತ್ತದೆ ಎಂದು ಈಗಾಗಲೇ ಬಿಎಂಆರ್‌ಸಿಲ್ (Bangaluru Metro Rail Corporation Limited) ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಹಾಗಾದರೆ ಕಳೆದ 6 ತಿಂಗಳಿನಲ್ಲಿ ಈ ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ಎಷ್ಟು ಹಣ ವಸೂಲಿ ಮಾಡಲಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕಳೆದ 6 ತಿಂಗಳುಗಳಲ್ಲಿ ಬೆಂಗಳೂರು ಮೆಟ್ರೋ ಪ್ರಾಧಿಕಾರ ಪ್ರಯಾಣಿಕರಿಂದ ಸುಮಾರು 32,00,000 ರೂಪಾಯಿ ದಂಡ ವಸೂಲಿ ಮಾಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಮ್ಮ ಮೆಟ್ರೋ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಮೆಟ್ರೋ ನಿಲ್ದಾಣಗಳಲ್ಲಿ ರೀಲ್ಸ್ ಮಾಡುವುದು, ರೈಲಿನಲ್ಲಿ ಸ್ನ್ಯಾಕ್ಸ್ ಸೇವನೆ ಮಾಡುವುದು ಸೇರಿದಂತೆ ದುರ್ವರ್ತನೆ ತೋರಿರುವ ಘಟನೆಗಳು ನಡೆದಿರುವ ಉದಾಹರಣೆಗಳು ಇದ್ದು, ಅಂತಹವರ ವಿರುದ್ಧ ಬಿಎಂಆರ್‌ಸಿಎಲ್ ಕಠಿಣ ಕ್ರಮವನ್ನು ಕೂಡ ವಿಧಿಸಿದೆ. ಮತ್ತೊಂದೆಡೆ ಮೆಟ್ರೋ ನಿಲ್ದಾಣಗಳಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಇದ್ದರೆ ಅಂತಹ ಪ್ರಯಾಣಿಕರಿಗೆ ದಂಡವನ್ನು ವಿಧಿಸಲಾಗುತ್ತದೆ. ಈ ನಿಯಮ ಮೊದಲಿನಿಂದಲೂ ಜಾರಿಯಲ್ಲಿದೆ.
ಇನ್ನು ಮೆಟ್ರೋ ರೈಲುಗಳಲ್ಲಿನ ಪ್ರಯಾಣಿಕರ ದುರ್ವರ್ತನೆ, ಅವಧಿ ಮೀರಿ ಪ್ರಯಾಣ ಸೇರಿದಂತೆ ಕಳೆದ 6 ತಿಂಗಳಿನಲ್ಲಿ 32,00,000 ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದೆ. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ವ್ಯಾಪ್ತಿಯ 66 ನಿಲ್ದಾಣಗಳಿಂದ 6 ತಿಂಗಳಲ್ಲಿ 10 ಲಕ್ಷ ಪ್ರಯಾಣಿಕರಿಂದ ಇಷ್ಟು ದಂಡವನ್ನು ವಸೂಲಿ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 7 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಈ ಪೈಕಿ ಸರಾಸರಿ 1.50 ಲಕ್ಷ ಪ್ರಯಾಣಿಕರು ನಿಲ್ದಾಣದ ಒಳಗಡೆ ಅವಧಿಗೂ ಮೀರಿ ಹೆಚ್ಚು ಸಮಯ ಕಳೆದರೆ ಮತ್ತು ಹಲವು ಕಾರಣಗಳಿಗೆ ದಂಡ ವಿಧಿಸಲಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ 20ದೊಳಗೆ ಪ್ರಯಾಣಿಕರು ನಿರ್ಗಮಿಸಬೇಕು. ಅದಕ್ಕಿಂತ ಹೆಚ್ಚು ಅವಧಿ ಇದ್ದರೆ, ಬಿಎಂಆರ್‌ಸಿಎಲ್ 50-100 ರೂಪಾಯಿ ದಂಡ ವಿಧಿಸುತ್ತಿದೆ. ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಬಾರದು ಹಾಗೂ ಸಹ ಪ್ರಯಾಣಿಕರಿಗೂ ಕಿರಿಕಿರಿ ಆಗಬಾರದು ಎನ್ನುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದೆ.
5.38 ಕೋಟಿ ರೂಪಾಯಿ ದಂಡ: ಇನ್ನು ಕಳೆದ ವರ್ಷ ಅಂದರೆ 2023ರ ಜೂನ್‌ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಲ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ, ಒಬ್ಬರಿಗೆ 50 ರೂಪಾಯಿನಂತೆ ಒಟ್ಟು 5.38 ಕೋಟಿ ರೂಪಾಯಿ ದಂಡ ವಿಧಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ದಂಡ ಸಂಗ್ರಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.












Click it and Unblock the Notifications